ಕಲಘಟಗಿ: ಕರ್ನಾಟಕ ವಿಶ್ವವಿದ್ಯಾಲಯ ಆಶ್ರಯದಲ್ಲಿ ಪಟ್ಟಣದ ದಾಸ್ತಿಕೊಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ನಲ್ಲಿ ಮೇ 9ರಂದು ಮಹಿಳಾ ಏಕವಲಯ ಕಬಡ್ಡಿ ಪಂದ್ಯಾವಳಿ ಆಯೋಜಿಸಲಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಕಾರ್ಯಕ್ರಮ ಉದ್ಘಾಟಿಸುವರು. ಧಾರವಾಡ ವಿದ್ಯಾರಣ್ಯ ಕಾಲೇಜ್ನ ನಿವೃತ್ತ ದೈಹಿಕ ಶಿಕ್ಷಣ ಬೋಧಕ ಎಸ್.ಬಿ. ಹೊಸಳ್ಳಿ ಮುಖ್ಯ ಅತಿಥಿಗಳಾಗಿ ಆಗಮಿಸುವರು. ದಾಸ್ತಿಕೊಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ.ಎನ್.ಎಂ. ಸಂಗಮ್ಮನವರ ಅಧ್ಯಕ್ಷತೆ ವಹಿಸುವರು. ಸಮಾರೋಪ ಸಮಾರಂಭದಲ್ಲಿ ಸಿಪಿಐ ಶ್ರೀಶೈಲ ಕೌಜಲಗಿ, ಕಾಲೇಜು ಸಮಿತಿ ಸದಸ್ಯ ಎಸ್.ವಿ. ತಡಸಮಠ, ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಡಿ.ಬಿ. ಗೋವಿಂದಪ್ಪ ಪಾಲ್ಗೊಳ್ಳುವರು.
ಸ್ಪರ್ಧಾಳುಗಳು ಮಹಾವಿದ್ಯಾಲಯದ ಪ್ರಾಂಶುಪಾಲರ ದೃಢೀಕರಿಸಿದ ಆರ್ಹಾತಾ ಪಟ್ಟಿ ಹಾಗೂ ಎಸ್ಸೆಸ್ಸೆಲ್ಸಿ ಹಾಗೂ ಪದವಿಪೂರ್ವ ಅಂಕಪಟ್ಟಿ ಹಾಗೂ ಪ್ರವೇಶ ಶುಲ್ಕವನ್ನು ಸಲ್ಲಿಸಬೇಕು ಎಂದು ಪ್ರಕಟಣೆ ತಿಳಿಸಿದೆ.