More

    ಪ್ರಧಾನಿ ಮೋದಿ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಗೆ ಅಂಗೀಕಾರ

    ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು (ಸೆ.18) ನಡೆದ ಪ್ರಮುಖ ಸಂಪುಟ ಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಅಂಗೀಕರಿಸಲಾಗಿದೆ ಎಂದು ಕೇಂದ್ರದ ಮೂಲಗಳು ಮಾಹಿತಿ ನೀಡಿವೆ.

    ಮಹಿಳಾ ಮೀಸಲಾತಿ ವಿಚಾರ ಇನ್ನೂ ಅಧಿಕೃತವಾಗಿ ಘೋಷಣೆಯಾಗಿಲ್ಲ. ಸಚಿವ ಸಂಪುಟ ಸಭೆಯ ಬಳಿಕ ನಡೆಯುವ ಸುದ್ದಿಗೋಷ್ಠಿಯಲ್ಲಿ ಇದನ್ನು ಘೋಷಿಸುವ ನಿರೀಕ್ಷೆ ಇದೆ. ಆದರೆ, ಸರ್ಕಾರ ಮೂಲಗಳ ಪ್ರಕಾರ ಮಸೂದೆ ಅಂಗೀಕಾರವಾಗಿದೆ.

    ವಿಶೇಷ ಸಂಸತ್ ಅಧಿವೇಶನದ ಮೊದಲ ಅಧಿವೇಶನದ ನಂತರ ಸಂಜೆ 6:30 ಕ್ಕೆ ಸಚಿವ ಸಂಪುಟ ಸಭೆಯನ್ನು ಕರೆಯಲಾಯಿತು. ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿಯನ್ನು ಮಸೂದೆ ಖಾತರಿಪಡಿಸುತ್ತದೆ. ಹಲವಾರು ರಾಜಕೀಯ ನಾಯಕರು ಈ ಪ್ರಮುಖ ಮಸೂದೆಯನ್ನು ಪರಿಚಯಿಸಲು ಸಾಕಷ್ಟು ಬಾರಿ ಒತ್ತಾಯಿಸಿದ್ದರು.

    ಇದನ್ನೂ ಓದಿ: ಯುನೆಸ್ಕೋ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿದ ರಾಜ್ಯದ ಹೊಯ್ಸಳ ದೇವಾಲಯಗಳು: ಪ್ರಧಾನಿ ಸಂತಸ

    ಈ ಮಸೂದೆಯು ನ್ಮಮ ಪಕ್ಷದ ಬಹುಕಾಲದ ಬೇಡಿಕೆಯಾಗಿದೆ ಎಂದು ಕಾಂಗ್ರೆಸ್ ಹೇಳಿಕೊಂಡಿದೆ. ಕೇಂದ್ರ ಸಚಿವ ಸಂಪುಟದ ನಿರ್ಧಾರವನ್ನು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಸ್ವಾಗತಿಸಿದ್ದರೆ. ವಿಶೇಷ ಅಧಿವೇಶನಕ್ಕೂ ಮುನ್ನ ಸರ್ವಪಕ್ಷಗಳ ಸಭೆಯಲ್ಲಿ ಈ ಬಗ್ಗೆ ಚೆನ್ನಾಗಿ ಚರ್ಚಿಸಬಹುದಿತ್ತು ಮತ್ತು ಗೌಪ್ಯತೆಯ ಕಾಪಾಡುವ ಬದಲು ಒಮ್ಮತವನ್ನು ನಿರ್ಮಿಸಬಹುದಿತ್ತು ಎಂದಿದ್ದಾರೆ.

    ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಅಮಿತ್ ಶಾ, ಪಿಯೂಷ್ ಗೋಯಲ್, ಪ್ರಲ್ಹಾದ್ ಜೋಶಿ, ಎಸ್ ಜೈಶಂಕರ್, ನಿರ್ಮಲಾ ಸೀತಾರಾಮನ್, ಧರ್ಮೇಂದ್ರ ಪ್ರಧಾನ್, ನಿತಿನ್ ಗಡ್ಕರಿ ಮತ್ತು ಅರ್ಜುನ್ ರಾಮ್ ಮೇಘವಾಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. (ಏಜೆನ್ಸೀಸ್​)

    ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡ ಪ್ರಕಟ: ಮೊದಲೆರಡು ಪಂದ್ಯಗಳಿಗೆ ರಾಹುಲ್​ ನಾಯಕ

    VIDEO | ವಿದ್ಯಾರ್ಥಿನಿಗೆ ಕಿರುಕುಳ; ಶಿಕ್ಷಕನಿಗೆ ಥಳಿಸಿ, ಮುಖಕ್ಕೆ ಮಸಿ ಬಳಿದ ಕುಟುಂಬಸ್ಥರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts