ಮ್ಯಾಗಝಿನ್ ಮುಖಪುಟದಲ್ಲಿ ಮಿಂಚಿದ ಚಿನ್ನದ ಹುಡುಗಿಯರು!

ನವದೆಹಲಿ: ಕಳೆದ ಗೋಲ್ಡ್ ಕೋಸ್ಟ್ ಕಾಮನ್ವೆಲ್ತ್ ಗೇಮ್್ಸ ನಲ್ಲಿ ಸ್ವರ್ಣ ಪದಕ ಗೆದ್ದು ಮಿಂಚಿದ ಬಾಕ್ಸರ್ ಮೇರಿ ಕೋಮ್ ಷಟ್ಲರ್ ಸೈನಾ ನೆಹ್ವಾಲ್, ಟೇಬಲ್ ಟೆನಿಸ್ ಆಟಗಾರ್ತಿ ಮನಿಕಾ ಬಾತ್ರಾ, ಶೂಟರ್​ಗಳಾದ ಹೀನಾ ಸಿಧು ಮತ್ತು ಶ್ರೇಯಸಿ ಸಿಂಗ್ ದೇಶದ ಪ್ರಮುಖ ಮಹಿಳಾ ಮ್ಯಾಗಝಿನ್ ‘ಫೆಮಿನಾ’ದ ಮುಖಪುಟದಲ್ಲಿ ಜತೆಯಾಗಿ ಕಾಣಿಸಿಕೊಂಡಿದ್ದಾರೆ. ‘ಗೋಲ್ಡನ್ ಗರ್ಲ್ಸ್’ ಎಂಬ ಮುಖಪುಟ ಲೇಖನಕ್ಕಾಗಿ ಈ ಐವರು ಮಹಿಳಾ ಕ್ರೀಡಾಪಟುಗಳು ಜತೆಯಾಗಿ ಫೋಟೋಶೂಟ್​ನಲ್ಲಿ ಭಾಗವಹಿಸಿದ್ದರು.