More

    ಮಹಿಳೆಯರ ಸಬಲೀಕರಣಕ್ಕೆ ಸೊಸೈಟಿ ಪಾತ್ರ ಮುಖ್ಯ

    ಇಟಗಿ: ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಗ್ರಾಮೀಣ ಸಹಕಾರಿ ಸಂಘಗಳ ಪಾತ್ರ ಮುಖ್ಯವಾಗಿದೆ ಎಂದು ಇಟಗಿ ಶ್ರೀ ಲಕ್ಷ್ಮೀ ಮಹಿಳಾ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸೈಟಿ ಅಧ್ಯಕ್ಷೆ ಅಂಜನಾ ಹೊನ್ನಿದಿಬ್ಬ ಹೇಳಿದರು.

    ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಕ್ಷೀರ ಬ್ರಹ್ಮ ಡಾ. ವರ್ಗಿಸ್ ಕುರಿಯನ್ ಸಭಾಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಹಕಾರಿಯ 18ನೇ ವಾರ್ಷಿಕ ಸರ್ವಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಹಕಾರಿಯು ಒಂದು ವರ್ಷದಲ್ಲಿ 48.29 ಕೋಟಿ ರೂ. ವಹಿವಾಟು ಹೊಂದಿದ್ದು, 9.88 ಕೋಟಿ ರೂ. ದುಡಿಯುವ ಬಂಡವಾಳ ಹೊಂದಿದೆ. ವ್ಯಾಪಾರಿಗಳಿಗೆ 2.50 ಕೋಟಿ ರೂ. ಸಾಲ ನೀಡಲಾಗಿದೆ. ಪ್ರಸಕ್ತ ಸಾಲಿನಲ್ಲಿ 6.37 ಲಕ್ಷ ರೂ. ನಿವ್ವಳ ಲಾಭಗಳಿಸಿದ್ದು. ಸದಸ್ಯರಿಗೆ ಶೇ. 15% ಲಾಭಾಂಶ ನೀಡಲಾಗುವುದು ಎಂದರು.

    ಉಪಾಧ್ಯಕ್ಷೆ ಅನುಸೂಯಾ ಪೂಜಾರ ಮಾತನಾಡಿ, ಸಹಕಾರಿಯ ಸದಸ್ಯರಿಗೆ ತಮ್ಮ ಮನೆಗಳಲ್ಲಿ ಗಹ ಕೈಗಾರಿಕೆ ಮಾಡಲು ಸಹಕಾರಿಯಿಂದ ತರಬೇತಿ ನೀಡುವ ಕುರಿತು ಮಾರ್ಗದರ್ಶನ ಮಾಡಿದರು. ಕಾರ್ಯದರ್ಶಿ ವಿಠ್ಠಲ ನಿಲಜಕರ ಜಮಾ ಖರ್ಚು, ಲಾಭ-ಹಾನಿ ಹಾಗೂ ಅಡಾವೆ ಪತ್ರಿಕೆ ಓದಿದರು.

    ಎಲ್‌ಐಸಿ ಪ್ರತಿನಿಧಿ ಡಾ.ಯು.ಆರ್.ಕುಲಕರ್ಣಿ ಮಾತನಾಡಿ, ಸಹಕಾರಿಯು ಉತ್ತಮ ರೀತಿಯಲ್ಲಿ ಅಭಿವದ್ಧಿ ಹೊಂದಲು ಸಿಬ್ಬಂದಿ ಹಾಗು ಆಡಳಿತ ಮಂಡಳಿ ನಿಸ್ವಾರ್ಥ ಸೇವೆ ಕಾರಣ ಎಂದರು. ನಿವತ್ತ ಚಿತ್ರಕಲಾ ಶಿಕ್ಷಕರಾದ ಷಡಕ್ಷರಯ್ಯ ಹಿರೇಮಠ, ರುದ್ರಪ್ಪ ಕುಂಕುರ ಹಾಗೂ ಆಡಳಿತ ಮಂಡಳಿ ಸದಸ್ಯರಾದ ರಾಜೇಶ್ವರಿ ಕಮ್ಮಾರ, ವಿಜಯ ಲಕ್ಷ್ಮೀ ತುರಮರಿ, ಭಾಗೀರಥಿ ಕಮ್ಮಾರ, ಪ್ರಭಾವತಿ ಕಮ್ಮಾರ, ಶಾಂತವ್ವ ಮಜಗಾವಿ, ಪಾರ್ವತಿ ಗೂರನವರ, ರುದ್ರವ್ವ ಮುತ್ನಾಳ, ಗೌರವ್ವ ಕಬ್ಬೂರ, ಅಪ್ಪಣ್ಣ ರೇವನ್ನವರ, ಮಲ್ಲಿಕಾರ್ಜುನ ಚಿಕ್ಕಮಠ, ಅರ್ಜುನ ಬಾಜಪ್ಪನವರ ಇತರರು ಇದ್ದರು.

    ರಾಜ್ಯೋತ್ಸವ ರಸಪ್ರಶ್ನೆ - 20

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts