ಮಹಿಳೆಯರು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲಿ

ಸಿದ್ದಾಪುರ: ನೆಲ್ಯಹುದಿಕೇರಿಯ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಒಡಿಪಿ ಸಂಸ್ಥೆಯ ವತಿಯಿಂದ ವಿಶ್ವ ಮಹಿಳಾ ದಿನ ಆಚರಿಸಲಾಯಿತು.

ಪಿಡಿಒ ನಂಜುಂಡಸ್ವಾಮಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಮಹಿಳೆಯರು ಮನೆಯ ನಿರ್ವಹಣೆಗೆ ಮಾತ್ರ ಸೀಮಿತವೆಂಬ ನಂಬಿಕೆಯಿಂದ ಹೊರ ಬಂದರೆ ಮಾತ್ರ ಪುರುಷರಂತೆ ಸಮಾಜದಲ್ಲಿ ಸಮಾನತೆ ಹೊಂದಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಪುರುಷರ ಜತೆ ಮುಕ್ತವಾಗಿ ಚರ್ಚೆ ಮಾಡುವ ವಾತಾವರಣ ಮನೆಯಿಂದಲೇ ಸೃಷ್ಟಿ ಆದಲ್ಲಿ ಮಾತ್ರ ಮಹಿಳೆಯರು ಸಮಾಜದ ಮುಖ್ಯ ವಾಹಿನಿಯಲ್ಲಿ ಗುರುತಿಸಿಕೊಳ್ಳಲು ಸಾಧ್ಯ ಎಂದರು.

ಗ್ರಾಪಂ ಉಪಾಧ್ಯಕ್ಷೆ ಸಫಿಯಾ ಮುಹಮ್ಮದ್ ಮಾತನಾಡಿ, ಮಹಿಳಾ ಸಂಘ ಎಂದರೆ ಸಾಲ ಪಡೆಯುವ ಮತ್ತು ನೀಡುವ ಸಂಘ ಎಂಬ ಭಾವನೆ ಇದೆ. ಮಹಿಳೆಯರು ಸ್ವಾಭಿಮಾನದ ಬದುಕು ಕಟ್ಟಿಕೊಂಡು ಸಮಾಜದಲ್ಲಿ ಪುರುಷರಿಗೆ ಸಮಾನವಾದ ಜೀವನ ರೂಪಿಸಿಕೊಳ್ಳಬೇಕು ಎಂದು ಹೇಳಿದರು.

ಒಡಿಪಿ ಸಂಸ್ಥೆಯ ವಲಯ ಸಂಯೋಜಕಿ ಜಾಯ್ಸ ಮಿನೇಜಸ್ ಅವರು, ಮಹಿಳೆಯರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಗ್ರಾಪಂ ಅಧ್ಯಕ್ಷೆ ಪದ್ಮಾವತಿ, ತಾಪಂ ಸದಸ್ಯೆ ಸುಹಾದಾ ಅಶ್ರಫ್, ಒಡಿಪಿ ಕಾರ್ಯಕರ್ತೆ ವಿಜಯ ನಾರಾಯಣ, ಸಕ್ಕೀನ, ಗಿರಿಜಾ ಇತರರು ಇದ್ದರು.