ಆಹಾರೋದ್ಯಮದಲ್ಲಿ ನಾರಿಶಕ್ತಿ

Latest News

ತಡರಾತ್ರಿ ಮಗನೊಂದಿಗೆ ಶರಾದ್​ ಪವಾರ್​ ಮನೆಗೆ ಧಾವಿಸಿದ ಉದ್ಧವ್​ ಠಾಕ್ರೆ: ಕುತೂಹಲ ಮೂಡಿಸಿದ ನಾಯಕರ ಭೇಟಿ!

ಮುಂಬೈ: ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು ಇಂದು ಅಂತ್ಯಕಾಣುವ ಲಕ್ಷಣಗಳು ಕಾಣಿಸುತ್ತಿವೆ. ಶಿವಸೇನಾ ಜತೆ ಕಾಂಗ್ರೆಸ್​ ಮತ್ತು ಎನ್​ಸಿಪಿ ಮೈತ್ರಿ ಮಾಡಿಕೊಳ್ಳಲು ಕೆಲವು ಷರತ್ತುಗಳೊಂದಿಗೆ...

ಯಶವಂತಪುರದಲ್ಲಿಂದು ಕಾಂಗ್ರೆಸ್​ ಬೃಹತ್ ರ‍್ಯಾಲಿ; ಯಶ ನೀಡುವುದೇ ಸಿದ್ದು ಮಾಸ್ಟರ್​ಪ್ಲಾನ್​

ಬೆಂಗಳೂರು: ಯಶವಂತಪುರದಲ್ಲಿ ಇಂದು ಶಕ್ತಿ ಪ್ರದರ್ಶನಕ್ಕೆ ಕಾಂಗ್ರೆಸ್ ಸಿದ್ಧವಾಗಿದೆ. ಕ್ಷೇತ್ರದಲ್ಲಿ ಮತ್ತೊಮ್ಮೆ ಜಯಗಳಿಸಲು ಕಾಂಗ್ರೆಸ್​ ಮಾಸ್ಟರ್ ಪ್ಲಾನ್ ಮಾಡಿದ್ದು, ಶುಕ್ರವಾರ (ನ.22) ನಡೆಯಲಿರುವ...

ರನ್​ವೇ ಬಳಿ ಪಾರ್ಕ್​ ಮಾಡಿದ್ದ ವಿಮಾನದ ಬಳಿಯೇ ಬಡಿಯಿತು ಸಿಡಿಲು: ಜಾಲತಾಣದಲ್ಲಿ ಫೋಟೋ ವೈರಲ್​!

ವೆಲ್ಲಿಂಗ್ಟನ್​: ರನ್​ವೇ ಬಳಿ ಪಾರ್ಕ್​ ಮಾಡಲಾಗಿದ್ದ ವಿಮಾನದ ಬಳಿಯೇ ಸಿಡಿಲು ಬಡಿದ ಘಟನೆ ನ್ಯೂಜಿಲೆಂಡ್​ನ ಕ್ರಿಸ್ಟ್​ಚರ್ಚ್​ ವಿಮಾನ ನಿಲ್ದಾಣದಲ್ಲಿ ಬುಧವಾರ ನಡೆದಿದೆ. ಇದಕ್ಕೆ...

ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದಲ್ಲಿ ತಮ್ಮ ಕಾರ್ಯತಂತ್ರ ಬದಲಿಸಿದ ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ!

ಬೆಂಗಳೂರು: ರಾಜ್ಯದಲ್ಲಿ ಉಪಚುನಾವಣೆಯ ಕಾವು ದಿನೇ ದಿನೇ ಏರುತ್ತಿದೆ. ಪ್ರಚಾರ ಕಣಕ್ಕೆ ಘಟಾನುಘಟಿ ನಾಯಕರು ಧುಮುಕ್ಕಿದ್ದು, ಪ್ರತಿಷ್ಠೆಯ ಕಣವಾಗಿರುವ ಉಪಚುನಾವಣೆಯನ್ನು ಗೆಲ್ಲುವ ಹಠಕ್ಕೆ...

ಕ್ಷುಲ್ಲಕ ವಿಚಾರಕ್ಕೆ ಇರಿದು ಗೆಳೆಯನ ಕೊಲೆ

ಬೆಂಗಳೂರು: ಕ್ರಿಕೆಟ್ ಆಡುವ ವೇಳೆ ಕ್ಷುಲ್ಲಕ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಯುವಕನನ್ನು ಆತನ ಸ್ನೇಹಿತರೇ ಚೂರಿಯಿಂದ ಇರಿದು ಹತ್ಯೆ ಮಾಡಿದ್ದಾರೆ. ಗಣೇಶ್ ಬ್ಲಾಕ್​ನ ನಿವಾಸಿ...

ಆಹಾರಕ್ಕೂ ಮಹಿಳೆಗೂ ಬಿಡದ ಸಂಬಂಧ. ಎಷ್ಟೋ ಬಾರಿ, ಬೇಡವೆಂದರೂ ಸುತ್ತಿಕೊಂಡು ಬರುವ ನಿತ್ಯದ ಕಾಯಕ. ಉದ್ಯೋಗಿಯಾಗಿರಲಿ, ಗೃಹಿಣಿಯಾಗಿರಲಿ ಅಡುಗೆಮನೆ ಮಹಿಳೆಯರಿಗೇ ಮೀಸಲು ಎನ್ನುವ ಸ್ಥಿತಿ ಈಗಲೂ ಇದೆ. ಕೆಲವೊಮ್ಮೆ ಇಷ್ಟಪಟ್ಟು, ಸಾಕಷ್ಟು ಸಲ ಅನಿವಾರ್ಯಕ್ಕೆಂದು ಈ ಕೆಲಸ ಮಾಡುವವರ ಸಂಖ್ಯೆ ಸಾಕಷ್ಟಿದೆ. ಆದರೆ, ಹೇಗೆ ಮಾಡಿದರೂ ಅಲ್ಲೊಂದು ಶುಚಿ-ರುಚಿ ಇರಲೇಬೇಕು. ಮನೆಯವರಿಗೆ, ಮಕ್ಕಳಿಗೆ ಸ್ವಾದಿಷ್ಟವಾದ ಹಾಗೂ ಅಷ್ಟೇ ಪೌಷ್ಟಿಕ ಆಹಾರ ನೀಡುವುದು ಆಕೆಯ ಉದ್ದೇಶ. ಇಂಥ ಸಾಕಷ್ಟು ಮಹಿಳೆಯರು ಆಹಾರೋದ್ಯಮಕ್ಕೂ ಕಾಲಿಟ್ಟು ಅಲ್ಲಿಯೂ ಶುಚಿ-ರುಚಿ ಕಾಪಾಡಿಕೊಂಡು ಮುನ್ನಡೆಯುತ್ತಿದ್ದಾರೆ. ಇಂದು ವಿಶ್ವ ಆಹಾರ ದಿನ. ಈ ಹಿನ್ನೆಲೆಯಲ್ಲಿ, ಆಹಾರ ಕ್ಷೇತ್ರದಲ್ಲಿ ದಾಪುಗಾಲಿಡುತ್ತಿರುವ ಕೆಲವು ಮಹಿಳೆಯರ ಪರಿಚಯ ಇಲ್ಲಿದೆ.

ಹೋಟೆಲ್ ಉದ್ಯಮಕ್ಕೆ ಹೊಸ ಆಯಾಮ

| ಅರವಿಂದ ಅಕ್ಲಾಪುರ, ಶಿವಮೊಗ್ಗ

ಹೋಟೆಲ್ ಉದ್ಯಮಿಯ ಮಗಳಾಗಿ, ಹೋಟೆಲ್ ವ್ಯವಹಾರದಲ್ಲಿಯೇ ತೊಡಗಿದ್ದ ಕುಟುಂಬದ ಸೊಸೆಯಾದ ಇವರನ್ನು ಆಹಾರೋದ್ಯಮ ಸಹಜವಾಗಿಯೇ ಸೆಳೆಯಿತು. ಇದರ ಪರಿಣಾಮವಾಗಿ 2001ರಲ್ಲಿ ಸಣ್ಣದಾಗಿ ಉದ್ಯಮ ಆರಂಭಿಸಿ, ಇಂದು ಈ ಕ್ಷೇತ್ರದಲ್ಲಿ ತಮ್ಮ ಛಾಪು ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇವರು ಶಿವಮೊಗ್ಗದ ಬಿ.ವಿ. ಲಕ್ಷ್ಮೀದೇವಿ ಗೋಪಿನಾಥ್. ಇವರು ಆರಂಭಿಸಿದ ‘ಮಥುರಾ ಫುಡ್ ಪ್ರಾಡಕ್ಸ್’ ಬ್ರ್ಯಾಂಡ್​ನ ಉತ್ಪನ್ನಗಳು ಇಂದು ರಾಜ್ಯಾದ್ಯಂತ ದೊರೆಯುತ್ತಿವೆ. ರುಚಿಶುಚಿಯಾದ ಆಹಾರ ವಸ್ತುಗಳನ್ನು ಪೂರೈಕೆ ಮಾಡುವ ಮೂಲಕ ತಮ್ಮದೇ ಗ್ರಾಹಕ ವಲಯ ಸೃಷ್ಟಿ ಮಾಡಿಕೊಂಡಿರುವುದು ಇವರ ಹೆಗ್ಗಳಿಕೆ. ಉಡುಪಿ ಜಿಲ್ಲೆಯ ಕೋಟೇಶ್ವರದ ಬೀಜಾಡಿ ಗ್ರಾಮದ ಲಕ್ಷ್ಮೀದೇವಿಯವರ ಕುಟುಂಬ ಹೋಟೆಲ್ ಉದ್ಯಮದಲ್ಲಿ ಹೆಸರು ಮಾಡಿತ್ತು. 50 ವರ್ಷಗಳ ಹಿಂದೆಯೇ ಇವರ ತಂದೆ ವಾಸುದೇವರಾವ್, ಹೋಟೆಲ್ ಉದ್ಯಮಿಯಾಗಿ ಮೈಸೂರಿನಲ್ಲಿ ನೆಲೆ ನಿಂತರು. 1988ರಲ್ಲಿ ಶಿವಮೊಗ್ಗದ ಹೋಟೆಲ್ ಉದ್ಯಮಿ ಗೋಪಿನಾಥ್ ಅವರನ್ನು ವಿವಾಹವಾದ ಲಕ್ಷ್ಮೀದೇವಿ, ಬಳಿಕ ಮೈಸೂರು ವಿವಿಯಲ್ಲಿ ಬಿಬಿಎಂ, ಇಂದಿರಾಗಾಂಧಿ ಮುಕ್ತ ವಿವಿಯಿಂದ ಎಂಬಿಎಂ ಪದವಿ ಪಡೆದರು. ಅದಕ್ಕೂ ಮುನ್ನವೇ ಸಂಸ್ಕರಿಸಿದ ಆಹಾರ ಉದ್ಯಮ ಆರಂಭಿಸಬೇಕೆಂಬ ಕನಸು ಇವರಲ್ಲಿ ಚಿಗುರೊಡೆದಿತ್ತು. 2001ರಲ್ಲಿ ಅವೇಕ್ ಸಂಸ್ಥೆ ನಡೆಸಿದ ಉದ್ಯಮಶೀಲತಾ ಅಭಿವೃದ್ಧಿ ಶಿಬಿರದಲ್ಲಿ ಭಾಗವಹಿಸಿದ ನಂತರ ಉದ್ಯಮಿ ಜ್ಯೋತಿ ಎಂಬುವವರಿಂದ ತರಬೇತಿ ಪಡೆದು ‘ಮಥುರಾ ಫುಡ್ ಪ್ರಾಡಕ್ಟ್’ ಘಟಕ ಆರಂಭಿಸಿದರು. ಹಿಂದಿನಿಂದಲೂ ಮಥುರಾ ಹೋಟೆಲ್ ಇದ್ದಿದ್ದರಿಂದ ಇದೇ ಬ್ರ್ಯಾಂಡ್ ಅಡಿಯಲ್ಲಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದರು.

45 ಉತ್ಪನ್ನಗಳು: ಇಂದು ಮಥುರಾ ಫುಡ್ ಪ್ರಾಡಕ್ಟ್ 45 ಉತ್ಪನ್ನಗಳನ್ನು ಗ್ರಾಹಕರಿಗೆ ತಲುಪಿಸುತ್ತಿದೆ. ವಿವಿಧ ಬಗೆಯ ಮಸಾಲಾ ಪೌಡರ್​ಗಳು, ಹುಳಿ, ಸಾರು, ವಾಂಗಿಬಾತ್, ಬಿಸಿಬೇಳೆ ಬಾತ್ ಪುಡಿಗಳು, ಹಪ್ಪಳ, ಉಪ್ಪಿನಕಾಯಿ, ಕುರುಕಲು ತಿಂಡಿಗಳು, ಡ್ರೖೆ ಚಟ್ನಿ ಹೀಗೆ ಬಗೆಬಗೆಯ ಸಂಸ್ಕರಿಸಿದ ಆಹಾರ ಉತ್ಪನ್ನಗಳನ್ನು ಪೂರೈಸಲಾಗುತ್ತದೆ.

ಸಂಘಸಂಸ್ಥೆಗಳಲ್ಲೂ ಸೇವೆ: ಜೆಸಿಐ ಕಾರ್ಯದರ್ಶಿ, ರೋಟರಿ ಕ್ಲಬ್ ಶಿವಮೊಗ್ಗದ ಅಧ್ಯಕ್ಷೆ, ಅವೇಕ್ ಸಂಸ್ಥೆಯ ಜಿಲ್ಲಾ ಚಟುವಟಿಕೆಗಳ ಅಧ್ಯಕ್ಷೆ, ನಮ್ಮ ಕನಸಿನ ಶಿವಮೊಗ್ಗ ಸ್ವಯಂ ಸೇವಾ ಸಂಸ್ಥೆ ನಿರ್ದೇಶಕಿ, ಶಿವಮೊಗ್ಗ ಜಿಲ್ಲಾ ಛೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರೀಯ ಮಹಿಳಾ ಉದ್ಯಮಿಗಳ ಘಟಕದ ಅಧ್ಯಕ್ಷೆಯಾಗಿ ಇವರು ಕೆಲಸ ಮಾಡಿದ್ದಾರೆ. ಸರ್ಕಾರಿ ಹಾಗೂ ಸರ್ಕಾರೇತರ ಸಂಸ್ಥೆಗಳ ಸಹಯೋಗದಲ್ಲಿ ಉದ್ಯಮಶೀಲತಾ ಅಭಿವೃದ್ಧಿ, ತರಬೇತಿ ಶಿಬಿರಗಳನ್ನು ಆಯೋಜಿಸಿದ್ದಾರೆ. ವಿವಿಗಳಲ್ಲಿ ಎಂಬಿಎ ವಿದ್ಯಾರ್ಥಿಗಳಿಗೆ ಉದ್ಯಮಶೀಲತೆ ಉಪನ್ಯಾಸ ನೀಡಿದ್ದಾರೆ.

ಪ್ರಶಸ್ತಿ-ಪುರಸ್ಕಾರಗಳು: ಲಕ್ಷ್ಮೀದೇವಿ ಅವರಿಗೆ ಕೇಂದ್ರ ಸರ್ಕಾರದ ಎಂಎಸ್​ಎಂಇ ‘ಉತ್ಕೃಷ್ಟ ಗುಣಮಟ್ಟದ ಆಹಾರ ತಯಾರಿಕೆ’ಗಾಗಿ ವಿಶೇಷ ಪ್ರಶಸ್ತಿ ನೀಡಿದೆ. ರಾಜ್ಯ ಸಣ್ಣ ಕೈಗಾರಿಕೆಗಳ ಅಸೋಸಿಯೇಷನ್​ನಿಂದ ಉತ್ತಮ ಮಹಿಳಾ ಉದ್ಯಮಿ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ. ರಾಷ್ಟ್ರಮಟ್ಟದ ಪ್ರಿಯದರ್ಶಿನಿ, ಅದಾನಿ ಫಸ್ಟ್ ಜನರೇಷನ್ ಬ್ಯುಸಿನೆಸ್ ಎಕ್ಸೆಲೆನ್ಸ್ ಅವಾರ್ಡ್ ಕೂಡ ಲಭಿಸಿದೆ.

ಆರಂಭದಲ್ಲಿ ಮಥುರಾ ಫುಡ್ ಪ್ರಾಡಕ್ಟ್​ಗಳು ದುಬೈಗೆ ರಫ್ತಾಗುತ್ತಿದ್ದವು. ಕ್ರಮೇಣ ಅದನ್ನು ಬಿಟ್ಟು ನಮ್ಮ ರಾಜ್ಯದತ್ತ ಗಮನಹರಿಸಿದೆ. ಎಲ್ಲ ಉದ್ಯಮಗಳಂತೆ ಇದರಲ್ಲೂ ಸಾಕಷ್ಟು ರಿಸ್ಕ್ ಇರುತ್ತದೆ. ಆದರೆ ಪೂರ್ವಯೋಜನೆ, ಮಾರುಕಟ್ಟೆಯ ಆಗುಹೋಗುಗಳ ಬಗ್ಗೆ ಅರಿವು ಹೊಂದಿದ್ದರೆ ನಿಭಾಯಿಸುವುದು ಕಷ್ಟವಲ್ಲ.

| ಲಕ್ಷ್ಮೀದೇವಿ ಗೋಪಿನಾಥ್


ಸಾವಯವ ಉತ್ಪನ್ನ ತಯಾರಿಕೆಯಲ್ಲಿ ಮುಂದು

| ಹುಡೇಂ ಕೃಷ್ಣಮೂರ್ತಿ ಹೊಸಪೇಟೆ

ಸ್ವಾವಲಂಬಿ ಬದುಕಿಗಾಗಿ ಕಂಕಣತೊಟ್ಟು ‘ಸಾವಯವ ಮೌಲ್ಯವರ್ಧಿತ ಆಹಾರ ಉತ್ಪನ್ನ’ಕ್ಕೆ ಮುಂದಾಗಿ, ನಾಲ್ಕಾರು ಮಹಿಳೆಯರಿಗೆ ಉದ್ಯೋಗ ಒದಗಿಸಿದ್ದಾರೆ ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹುಲಿಕೆರೆ ಗ್ರಾಮದ ಗೃಹಿಣಿ ಸುಲೋಚನಾ ಸಜ್ಜನ್. ಸ್ವಂತ ಜಮೀನಿನಲ್ಲಿ ಬೆಳೆದ ಬೇಲ (ಬೆಳವಿನ ಮರ), ಬೆಟ್ಟದನೆಲ್ಲಿ ಮತ್ತು ಹುಣಸೆ ಮರಗಳಿಂದ ಸಿಗುವ ಹಣ್ಣು ಮತ್ತು ಕಾಯಿಗಳನ್ನೇ ಮೌಲ್ಯವರ್ಧನೆ ಮಾಡಿ ಜಾಮ್ ಬರ್ಫಿ, ಪೌಡರ್​ನಂಥ ಹತ್ತಾರು ಬಗೆಯ ಆಹಾರದ ಉತ್ಪನ್ನಗಳನ್ನು ತಯಾರಿಸುವುದು ಇವರ ವಿಶೇಷತೆ. ಸುಲೋಚನಾ ಕಾಯಕಕ್ಕೆ ಪತಿ ವಿಶ್ವೇಶ್ವರ ಸಜ್ಜನ್ ಬೆಂಬಲ ನೀಡುತ್ತಿದ್ದು, ಹೊಸ ಪ್ರಾಡಕ್ಟ್​ಗಳನ್ನು ತರಲು ನೆರವಾಗುತ್ತಿದ್ದಾರೆ. ಆರೇಳು ವರ್ಷಗಳ ಹಿಂದೆ ಸಣ್ಣ ಮಟ್ಟದಲ್ಲಿ ಮನೆಯಲ್ಲಿ ಆರಂಭಿಸಿದ ಕೆಲಸ ಈಗ ಉದ್ಯಮವಾಗಿ ಪರಿವರ್ತನೆಗೊಂಡಿದೆ. ಬೆಂಗಳೂರಿನ ಕುರವಳ್ಳಿಯಲ್ಲಿ ತಿಂಗಳಿಗೆ 2 ಬಾರಿ ಉತ್ಪನ್ನಗಳ ಮಾರಾಟ ನಡೆಸಲು ಸಾವಯವ ಕೃಷಿ ಪರಿವಾರ ಅವಕಾಶ ಕಲ್ಪಿಸಿದ್ದು, ತಿಂಗಳಿಗೆ 40-50 ಸಾವಿರ ರೂ. ವ್ಯಾಪಾರ ನಡೆಯುತ್ತಿದೆ. ಅಲ್ಲದೆ, ಮನೆಯ ಬಳಿಯೂ ಉತ್ಪನ್ನಗಳ ಖರೀದಿ ನಡೆಯುತ್ತದೆ. ಮಿಕ್ಸಿ ಹೊರತುಪಡಿಸಿ ಇತರ ಯಾವುದೇ ಯಂತ್ರಗಳ ಬಳಕೆಯಿಲ್ಲದೆ ಕಡಿಮೆ ಖರ್ಚಿನಲ್ಲಿ ಆಹಾರ ತಿನಿಸುಗಳನ್ನು ತಯಾರಿಸಿ ಲಾಭ ಗಳಿಸುತ್ತಿದ್ದಾರೆ. ಈ ಉದ್ಯಮ ಸುಲೋಚನಾ ಕುಟುಂಬದ ನೆಮ್ಮದಿಯ ಬದುಕಿಗೂ ಆಸರೆಯಾಗಿದೆ. ಸಾವಯವ ಆಹಾರ ಉತ್ಪನ್ನಗಳಿಂದ ವಾರ್ಷಿಕ 3-4 ಲಕ್ಷ ರೂ. ವ್ಯಾಪಾರ, ವಹಿವಾಟು ನಡೆಯುತ್ತಿದ್ದು, ಹೊರಗಡೆಯಿಂದ ತರುವ ಬೆಲ್ಲ, ಬಾಟಲ್, ಕೂಲಿ, ಪ್ಯಾಕಿಂಗ್, ಸ್ಟಿಕ್ಕರ್ ಸೇರಿ ಇತರ ಖರ್ಚು ಕಳೆದು ಲಕ್ಷ ರೂ. ಲಾಭ ಸಿಗುತ್ತದೆ. ಇದನ್ನು ಇನ್ನೂ ದೊಡ್ಡ ಉದ್ಯಮವಾಗಿ ಪರಿವರ್ತಿಸುವ ಆಲೋಚನೆಯಿದೆ ಎನ್ನುತ್ತಾರೆ ದಣಿವರಿಯದ ಸುಲೋಚನಾ.

ಸಾವಯವ ಉತ್ಪನ್ನಗಳಿವು…

ಸಾವಯವ ಉತ್ಪನ್ನಗಳಾದ ಬೇಲದ ಜಾಮ್ ಬರ್ಫಿ, ಪೌಡರ್, ಜ್ಯೂಸ್, ಬೆಟ್ಟದ ನೆಲ್ಲಿಕಾಯಿ ಕ್ಯಾಂಡಿ, ಜಾಮ್ ಪೌಡರ್, ಹುಣಸೆಕಾಯಿ ಚಟ್ನಿ, ಹುಣಸೆಹಣ್ಣಿನ ಚಟ್ನಿ, ಕುಟ್ಟಿಂಡಿ, ದೇಸಿ ಹಸುವಿನ ಉತ್ಪನ್ನಗಳಾದ ವಿಭೂತಿ (ಗೋಮಯ ಭಸ್ಮ), ಅರ್ಕ, ತುಪ್ಪ, ಮೆಮೋರಿ ಪೇಡಾಗಳನ್ನು ತಯಾರಿಸುತ್ತಾರೆ. ಮುಂದಿನ ದಿನಗಳಲ್ಲಿ ಸಿರಿಧಾನ್ಯಗಳ ಮೌಲ್ಯವರ್ಧನೆ ಮಾಡುವ ವಿಚಾರವೂ ಇವರಿಗಿದೆ.


ಕೈ ಹಿಡಿದ ಬಿಸ್ಕತ್!

| ಶೇಖರ್ ಕಿರುಗುಂದ ಮೈಸೂರು

ಮೊದಲು ಹಿಂದುಸ್ಥಾನ್ ಲಿವರ್, ಕಾಂಪ್ಲೇನ್ ಬಿಸ್ಕತ್ ಕಂಪನಿಗಳಿಗೆ ಬಿಸ್ಕತ್ ಸರಬರಾಜು ಮಾಡುತ್ತಿದ್ದರು ಗೀತಾ. 2008ರಿಂದ ಪಾರ್ಲೆಜಿ ಕಂಪನಿಗೆ ಸರಬರಾಜು ಮಾಡುತ್ತಿದ್ದಾರೆ. ಗುಣಮಟ್ಟ ಕಾಯ್ದುಕೊಂಡಿದ್ದರಿಂದ 2005ರಲ್ಲಿ ಹಿಂದುಸ್ಥಾನ್ ಲಿವರ್ ಕಂಪನಿ ಹಾಗೂ ಪಾರ್ಲೆಜಿ ಕಂಪನಿ 2015ರಲ್ಲಿ ಕೋಯಲ್ ಫುಡ್ ಪ್ರೊಸೆಸ್​ಗೆ ಗೋಲ್ಡ್ ಸ್ಥಾನದ ಮನ್ನಣೆ ನೀಡಿವೆ.

ಬಿಸ್ಕತ್ ತಯಾರಿಕೆ ಉದ್ಯಮದಲ್ಲಿ ದಕ್ಷಿಣ ಭಾರತವೇ ತಿರುಗಿ ನೋಡುವಂತೆ ಸಾಧನೆ ಮಾಡಿ ಪ್ರತಿಷ್ಠಿತ ಕಂಪನಿಗಳಿಂದ ಪ್ರಶಂಸೆಗೆ ಪಾತ್ರರಾಗಿರುವವರು ಮೈಸೂರಿನ ಗೀತಾ ರವೀಂದ್ರ. 1999ರಲ್ಲಿ ಮೈಸೂರಿನ ಹೂಟಗಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಖಾಸಗಿ ಬ್ಯಾಂಕ್​ನ ಆರ್ಥಿಕ ಸಹಾಯದಿಂದ ‘ಕೋಯಲ್ ಫುಡ್ ಪ್ರೊಸೆಸ್’ ಎಂಬ ಹೆಸರಿನೊಂದಿಗೆ ಗ್ಲುಕೋಸ್ ಬಿಸ್ಕತ್ ತಯಾರಿಕೆ ಉದ್ಯಮವನ್ನು ಸಣ್ಣ ಪ್ರಮಾಣದಲ್ಲಿ ಶುರು ಮಾಡಿದರು. ಅದೀಗ ಹೆಮ್ಮರವಾಗಿದೆ.

ಮೂಲತಃ ಮಂಗಳೂರಿನ ಗೀತಾ, ಚಿಕ್ಕಂದಿನಲ್ಲೇ ತಂದೆಯನ್ನು ಕಳೆದುಕೊಂಡು ತಾಯಿಯ ಆಶ್ರಯದಲ್ಲಿ ಬೆಳೆದರು. ತಂದೆ ಬೇಕರಿಯಲ್ಲಿ ಬಿಸ್ಕತ್ ತಯಾರಿಸಿ ಅಂಗಡಿಗಳಿಗೆ ಸರಬರಾಜು ಮಾಡುತ್ತಿದ್ದರು. ಅವರು ಕಾಲವಾದ ಬಳಿಕ ತಾಯಿ ಇದನ್ನು ಮುನ್ನಡೆಸಿಕೊಂಡು ಬಂದರು. ಆಗ ತಾಯಿಗೆ ಸಹಾಯ ಮಾಡುತ್ತಿದ್ದರಿಂದ ಸಹಜವಾಗಿ ಸ್ವಲ್ಪ ಅನುಭವವಿತ್ತು. ಇದನ್ನೇ ಮೂಲವಾಗಿಸಿಕೊಂಡು ತಮ್ಮ 23ನೇ ವಯಸ್ಸಿನಲ್ಲಿ ಉದ್ಯಮಕ್ಕೆ ಕಾಲಿಟ್ಟರು.

ನೊಂದ ಮಹಿಳೆಯರಿಗೆ ಸಹಾಯ ಮಾಡಬೇಕೆಂಬ ಉದ್ದೇಶದಿಂದ ಆರಂಭದಲ್ಲಿ ಕೆಲ ಮಹಿಳೆಯರಿಗೆ ಬಿಸ್ಕತ್ ತಯಾರಿಕೆಯ ಬಗ್ಗೆ ಸ್ವತಃ ತರಬೇತಿ ನೀಡಿದರು. ಅವರ ಮೂಲಕ ಉದ್ಯಮ ಪ್ರಾರಂಭಿಸಿ ಕೆಲ ಕಂಪನಿಗಳಿಗೆ ಬಿಸ್ಕತ್ ಸರಬರಾಜು ಮಾಡಲಾರಂಭಿಸಿದರು. ಹೀಗೆ ಆರಂಭವಾದ ಉದ್ಯಮ ಇಂದು ವಿಸ್ತರಿಸಿದ್ದು, ನೂರಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿ, ಸರಾಸರಿ 5-6 ಕೋಟಿ ರೂ.ವರೆಗೆ ವಹಿವಾಟು ನಡೆಸುತ್ತಿದ್ದಾರೆ. ಇವರ ಯಶಸ್ಸಿನ ಹಾದಿಗೆ ಬೆನ್ನೆಲುಬಾಗಿದ್ದರು ಪತಿ ರವೀಂದ್ರ. ದಕ್ಷಿಣ ಭಾರತದಲ್ಲಿ ಗುಣಮಟ್ಟದ ಬಿಸ್ಕತ್ ತಯಾರಿಕೆಯಲ್ಲಿ ಪ್ರಥಮ ಸ್ಥಾನ ಪಡೆದಿರುವ ಈ ಕಂಪನಿ ಐಎಸ್​ಒ-22000 ಸರ್ಟಿಫಿಕೇಟ್ ಪಡೆದಿದೆ.

ಸಾರ್ವಜನಿಕ ವಲಯಕ್ಕೆ ಕೈಲಾದ ಸಹಾಯ ಮಾಡಬೇಕು ಎಂಬುದು ನನ್ನ ಪತಿಯ ಆಶಯವಾಗಿತ್ತು. ಅವರ ಆಶಯವನ್ನು ಸಾಧ್ಯವಾದಷ್ಟು ಮಟ್ಟಿಗೆ ಈಡೇರಿಸುತ್ತಿದ್ದೇನೆ. ಮಗಳು ಕೋಯಲ್ಕಿರಣ್ ಎಂಬಿಬಿಎಸ್ ಮುಗಿಸಿದ್ದರೂ ನನಗೆ ಸಾಥ್ ನೀಡುತ್ತಿದ್ದಾಳೆ.

| ಗೀತಾ ರವೀಂದ್ರ, ಮಾಲೀಕರು, ಕೋಯಲ್ ಫುಡ್ ಪ್ರೊಸೆಸ್

- Advertisement -

Stay connected

278,656FansLike
574FollowersFollow
611,000SubscribersSubscribe

ವಿಡಿಯೋ ನ್ಯೂಸ್

VIDEO| ಡಿಆರ್​ಐ ಅಧಿಕಾರಿಗಳ ದಾಳಿ ವೇಳೆ 6ನೇ ಮಹಡಿಯಿಂದ ಕೆಳಗೆ...

ಕೋಲ್ಕತ: ಪಶ್ಚಿಮ ಬಂಗಾಳದ ಕಂದಾಯ ಗುಪ್ತಚರ ನಿರ್ದೇಶನಾಲಯ(ಡಿಆರ್​ಐ) ಅಧಿಕಾರಿಗಳು ಬುಧವಾರ ಮಧ್ಯಾಹ್ನ ಕೇಂದ್ರ ಕೋಲ್ಕತದ ಬೆಂಟಿಂಕ್ ಸ್ಟ್ರೀಟ್​ನಲ್ಲಿನ ಖಾಸಗಿ ಕಚೇರಿಯೊಂದಕ್ಕೆ ದಾಳಿ ನಡೆಸಿದ್ದ ವೇಳೆ ಕಟ್ಟಡದ ಆರನೇ ಮಹಡಿಯಿಂದ ನೋಟಿನ...

VIDEO| ಹಾಡುಗಳ ಮೂಲಕವೇ ನಿರೀಕ್ಷೆ ಮೂಡಿಸಿದ್ದ ‘ಮುಂದಿನ ನಿಲ್ದಾಣ’ ಚಿತ್ರದ...

ಬೆಂಗಳೂರು: ಪೋಸ್ಟರ್ ಮತ್ತು ಹಾಡುಗಳ ಮೂಲಕ ನಿರೀಕ್ಷೆ ಮೂಡಿಸಿದ್ದ ‘ಮುಂದಿನ ನಿಲ್ದಾಣ’ ಚಿತ್ರತಂಡ ಇತ್ತೀಚೆಗಷ್ಟೇ ಟ್ರೇಲರ್ ಬಿಡುಗಡೆ ಮಾಡಿಕೊಂಡಿದೆ. ಚಿತ್ರದ ಪ್ರಮುಖ ಪಾತ್ರಗಳಲ್ಲಿ ದತ್ತಣ್ಣ, ಪ್ರವೀಣ್ ತೇಜ್, ರಾಧಿಕಾ ನಾರಾಯಣ್ ಹಾಗೂ ಅನನ್ಯಾ...

VIDEO: ಶವಪೆಟ್ಟಿಗೆಯಿಂದ ಎದ್ದುಕುಳಿತ ಮದುಮಗಳು; ಇದು ಮದುವೆನಾ, ಅಂತಿಮ ಸಂಸ್ಕಾರನಾ...

ಈ ಜಗತ್ತಿನಲ್ಲಿ ಎಂತೆಂತಾ ವಿಚಿತ್ರ ವ್ಯಕ್ತಿಗಳು ಇರುತ್ತಾರೆ ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ. ಇಲ್ಲೊಬ್ಬಳು ಮದುಮಗಳು ತನ್ನ ವಿಶಿಷ್ಟ ನಡೆಯಿಂದ ಸುದ್ದಿಯಾಗಿದ್ದಾಳೆ. ಮದುವೆ ಪ್ರತಿ ವ್ಯಕ್ತಿಯ ಜೀವನದಲ್ಲಿ ವಿಶೇಷ ಸಂದರ್ಭ. ನಾವು ಹೀಗೇ ವಿವಾಹವಾಗಬೇಕು ಎಂದು...

VIDEO: ರಸ್ತೆಯಲ್ಲಿ ಎಂಬಿಎ ವಿದ್ಯಾರ್ಥಿನಿಯ ವಿಭಿನ್ನ ನೃತ್ಯ; ಇದು ಮನರಂಜನೆಗೆ...

ಇಂದೋರ್​: ವಾಹನ ಸವಾರರಿಗೆ ಟ್ರಾಫಿಕ್​ ನಿಯಮಗಳನ್ನು ಅರ್ಥ ಮಾಡಿಸುವುದು ಟ್ರಾಫಿಕ್​ ಪೊಲೀಸರಿಗೆ ದೊಡ್ಡ ಸಾಹಸವೇ ಸರಿ. ಬೈಕ್​ ಸವಾರರು ಹೆಲ್ಮೆಟ್​ ಧರಿಸುವುದಿಲ್ಲ, ಕಾರು ಚಾಲಕರು ಸೀಟ್​ ಬೆಲ್ಟ್​ ಹಾಕಿಕೊಂಡಿರುವುದಿಲ್ಲ...ಅದರೊಟ್ಟಿಗೆ ಬೇಕಾಬಿಟ್ಟಿ ಚಾಲನೆ ಬೇರೆ....

VIDEO: ಮೃತ ವ್ಯಕ್ತಿಯ ಶ್ವಾಸಕೋಶವನ್ನು ಬೇರೊಬ್ಬರಿಗೆ ಕಸಿ ಮಾಡಲು ಹೊರತೆಗೆದ...

ಬೀಜಿಂಗ್​: ಧೂಮಪಾನ ಆರೋಗ್ಯಕ್ಕೆ ಹಾನಿಕರ ಎಂದು ಅದರ ಪ್ಯಾಕೆಟ್​ ಮೇಲೆಯೇ ಬರೆದಿರುತ್ತದೆ. ಧೂಮಪಾನದಿಂದ ಶ್ವಾಸಕೋಶಗಳು ಕಪ್ಪಾಗುತ್ತವೆ ಎಂಬುದನ್ನೂ ವೈದ್ಯ ಲೋಕ ಸಾಬೀತು ಪಡಿಸಿದೆ. ಅದನ್ನು ನೋಡಿ ಕೂಡ ಅನೇಕರು ಸ್ಮೋಕ್​ ಮಾಡುವುದನ್ನು ಮುಂದುವರಿಸುತ್ತಾರೆ....

VIDEO: ಹೆಬ್ಬಾವು-ಚಿರತೆ ನಡುವಿನ ಈ ಭಯಾನಕ ಕಾಳಗ ನೋಡಿದರೆ ಮೈನವಿರೇಳದೆ...

ಕೀನ್ಯಾ: ಹಾವು-ಮುಂಗುಸಿ, ಬೆಕ್ಕು-ಹಾವು, ಎರಡು ಹುಲಿಗಳ ನಡುವಿನ ಕಾದಾಟದ ವಿಡಿಯೋಗಳನ್ನು ನೋಡಿದ್ದೇವೆ. ಇಂತಹ ವಿಡಿಯೋಗಳು ನೋಡೋದಕ್ಕೆ ಸಿಕ್ಕಾಪಟೆ ರೋಚಕವಾಗಿರುತ್ತವೆ ಕೂಡ. ಈಗ ಅಂಥದ್ದೇ ಒಂದು ವಿಡಿಯೋ ವೈರಲ್​ ಆಗಿದ್ದು ಅದನ್ನು ನೋಡಿದರೆ ಮೈನವಿರೇಳದೆ...

VIDEO| ಜೆಎನ್​ಯು ವಿದ್ಯಾರ್ಥಿಗಳ ಹೆಸರಿನಲ್ಲಿ ವೈರಲ್​ ಆಗಿದ್ದ ವಿಡಿಯೋದ ಅಸಲಿಯತ್ತು...

ನವದೆಹಲಿ: ಪಾಕಿಸ್ತಾನದ ಲಾಹೋರ್​​ನಲ್ಲಿ ನಡೆದಿದ್ದ ಫೈಜ್​ ಸಾಹಿತ್ಯೋತ್ಸವದಲ್ಲಿ ವಿದ್ಯಾರ್ಥಿಗಳು ಕೂಗಿದ್ದ "ಆಜಾದಿ" ಘೋಷಣೆಯ ವಿಡಿಯೋವನ್ನು ದೆಹಲಿಯ ಜವಹರ್​ಲಾಲ್​ ನೆಹರು ವಿಶ್ವವಿದ್ಯಾಲಯ(ಜೆಎನ್​ಯು)ದ ವಿದ್ಯಾರ್ಥಿಗಳ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ತಪ್ಪಾಗಿ ಶೇರ್​ ಮಾಡಲಾಗಿದೆ. "ಜೆಎನ್​ಯು...

VIDEO| ಮೀಮ್ಸ್​ ವಿಡಿಯೋ ಹರಿಬಿಡುವ ಮೂಲಕ ಸೋದರ ರಮೇಶ್​ ಜಾರಕಿಹೊಳಿಗೆ...

ಬೆಳಗಾವಿ: ಗೋಕಾಕ್​ ಕ್ಷೇತ್ರದ ಉಪಚುನಾವಣೆಯ ಕದನ ತೀವ್ರ ಕುತೂಹಲ ಮೂಡಿಸಿದೆ. ಸಹೋದರರ ನಡುವಿನ ಜಿದ್ದಾಜಿದ್ದಿಯೇ ಅದಕ್ಕೆ ನೇರ ಕಾರಣವಾಗಿದೆ. ಕಾಂಗ್ರೆಸ್​ಗೆ ಗುಡ್​ಬೈ ಹೇಳಿ ಬಿಜೆಪಿ ಸೇರಿಕೊಂಡಿರುವ ಸೋದರ ರಮೇಶ್​ ಜಾರಕಿ...