More

    ಪಾರಾಣೆಯಲ್ಲಿ ಮಹಿಳಾ ಹಬ್ಬ

    ಮಡಿಕೇರಿ:

    ಗ್ರಾಮೀಣ ಮಹಿಳೆಯರ ಅರ್ಥಿಕ ಮಟ್ಟ ಸುಧಾರಣೆಗಾಗಿ ಸರ್ಕಾರಗಳು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಮಹಿಳೆಯರು ಇವುಗಳ ಸದುಪಯೋಗಪಡಿಸಿಕೊಂಡು ಮುನ್ನಡೆಯಬೇಕು ಎಂದು ಪದ್ಮಶ್ರೀ ಪುರಸ್ಕೃತೆ ಎಂ. ರಾಣಿ ಮಾಚಯ್ಯ ಹೇಳಿದರು. ಪಾರಾಣೆ ಪ್ರೌಢಶಾಲೆ ಮೈದಾನದಲ್ಲಿ ಬುಧವಾರ ಅಯೋಜಿಸಲಾಗಿದ್ದ ಮಹಿಳಾ ಹಬ್ಬದದಲ್ಲಿ ಪಾಲ್ಗೊಂಡು ಮಾತನಾಡಿದರು.

    ಅಭಿವೃದ್ಧಿ ನಗರ ಮತ್ತು ಪಟ್ಟಣ ಪ್ರದೇಶದ ಮಹಿಲೆಯರಿಗೆ ಮಾತ್ರ ಎನ್ನುವುದು ತಪ್ಪು. ಗ್ರಾಮೀಣ ಪ್ರದೇಶದಲ್ಲೂ ಮಹಿಳೆಯರು ತಮ್ಮ ಪ್ರತಿಭೆ ಬೆಳಕಿಗೆ ತರುತ್ತಿದ್ದಾರೆ ಎಂದರು.

    ಕೊಣಂಜಗೇರಿ ಪಾರಾಣೆ ಗ್ರಾಮ ಪಂಚಾಯತಿ ಅಧ್ಯಕ್ಷ ಬೆಳ್ಳಿಮಯ್ಯ ಮಾತನಾಡಿ, ಪ್ರಸ್ತುತ ಸಮಾಜಕ್ಕೆ ಅಭಿವೃದ್ದಿ ಹೊಂದುತ್ತಿರುವ ಮಹಿಳೆಯರ ಸಹಕಾರ ಅತ್ಯವಶ್ಯಕವಾಗಿದೆ. ಗ್ರಾಮ ಪಂಚಾಯತಿ ಅಧಿಕಾರ ವ್ಯಾಪ್ತಿಯಲ್ಲಿ ಅನುದಾನಗಳ ಬಳಕೆ ಮತ್ತು ಗ್ರಾಮದ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಮಹಿಳೆಯರು ಸಕ್ರೀಯರಾಗಿ ಭಾಗವಹಿಸಬೇಕು ಎಂದು ಹೇಳಿದರು.
    ಸಂಜೀವಿನಿ ಒಕ್ಕೂಟ ಪಾರಾಣೆ ವಲಯದ ಅಧಕ್ಷೆ ಬಲ್ಯಂಡ ರಾಣಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪಿ.ಡಿ.ಒ. ಸಬಾಸ್ಟಿನ್, ಸಂಜೀವಿನಿ ಒಕ್ಕೂಟದ ಜಿಲ್ಲಾ ಸಂಚಾಲಕ ಕುಮಾರ್ ಮಾತನಾಡಿದರು.

    ಕಾರ್ಯಕ್ರಮದ ಸಂಜೀವಿನಿ ಒಕ್ಕೂಟದ ಜಿಲ್ಲಾ ಸಂಚಾಲಕ ಕುಮಾರ್, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಎಂ. ರಾಣಿ ಮಾಚಯ್ಯ, ಗ್ರಾಮ ಪಂಚಾಯತಿ ಅಧ್ಯಕ್ಷ ಬೆಳ್ಳಿಮಯ್ಯ ಪಿ.ಡಿ.ಒ. ಸಬಾಸ್ಟಿನ್ ಅವರನ್ನು ಸನ್ಮಾನಿಸಲಾಯಿತು.

    ಕೊಣಂಜಗೇರಿ ಪಾರಾಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾವಲಿ, ಕೊಣಂಜಗೇರಿ, ಕಿರುಂದಾಡು, ಪಾರಾಣೆ, ಬಲಮುರಿ ಹಾಗೂ ಕೈಕಾಡ್ ಗ್ರಾಮಗಳ ಸುಮಾರು ೩೦ ಕ್ಕೂ ಅಧಿಕ ಸ್ವಸಹಾಯ ಗುಂಪುಗಳ ಮಹಿಳಾ ಪ್ರತಿನಿಧಿಗಳು ಕೃಷಿ ಉತ್ಪನ್ನ ಮತ್ತು ಇತರ ವಸ್ತುಗಳನ್ನು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts