Wednesday, 21st November 2018  

Vijayavani

ಕಬ್ಬು ಬೆಳೆಗಾರರ ಹೋರಾಟಕ್ಕೆ ಕೇಸರಿ ಬಲ - ರಾಜ್ಯಾದ್ಯಂತ ಇಂದು ಬಿಜೆಪಿ ಬೃಹತ್ ಪ್ರತಿಭಟನೆ        ಗದಗಿನ ಕದಡಿ ಬಳಿ ಒಡೆದ ಕಾಲುವೆ- ಜಮೀನುಗಳಿಗೆ ನುಗ್ಗಿದ ಅಪಾರ ನೀರು - ಅಧಿಕಾರಿಗಳ ವಿರುದ್ಧ ಆಕ್ರೋಶ        ದ್ರಾಕ್ಷಿ ತೋಟದಲ್ಲಿ ಕರೆಂಟೂ, ನೆಲದಲ್ಲೂ ಕರೆಂಟು - ಚಿಕ್ಕಬಳ್ಳಾಪುರದ ಪವರ್​ ಗ್ರಿಡ್ ಕಂಟಕ        ಮದ್ದೂರು ಸಕ್ಕರೆ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟ - ಒಬ್ಬ ಲ್ಯಾಬ್ ಟೆಕ್ನೀಷಿಯನ್ ಸ್ಥಿತಿ ಗಂಭೀರ-        ಸ್ಯಾಂಡಲ್​ವುಡ್​​ನಲ್ಲಿ ಮತ್ತೊಂದು ಗಟ್ಟಿಮೇಳ - ಡಿ.11, 12ರಂದು ಹಸೆಮಣೆ ಏರುತ್ತೆ ಐಂದ್ರಿತಾ, ದಿಗಂತ್ ಜೋಡಿ       
Breaking News

ಮಹಿಳೆಗೆ ಬಹಿರಂಗ ಥಳಿತ, ಒದೆ, ವಿಡಿಯೋ ವೈರಲ್

Friday, 03.02.2017, 1:04 PM       No Comments

ವಿಜಯವಾಡ: ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಜಲ್ಲಿಪಲ್ಲಿ ಗ್ರಾಮದಲ್ಲಿ ಸರಪಂಚ (ಗ್ರಾಮದ ಮುಖ್ಯಸ್ಥ) ಮತ್ತು ಆತನ ಗೆಳೆಯ ಮಹಿಳೆಯೊಬ್ಬರನ್ನು ತನ್ನ ಮನೆಯ ಹೊರಭಾಗದಲ್ಲಿ ವಾಟರ್ ಟ್ಯಾಂಕ್ ಕಟ್ಟಲು ಅನುಮತಿ ನೀಡಲಿಲ್ಲ ಎಂಬ ಕಾರಣಕ್ಕಾಗಿ ಬಹಿರಂಗವಾಗಿ ಥಳಿಸಿದ ಘಟನೆ ಘಟಿಸಿದ್ದು, ಈ ಘಟನೆಯ ವಿಡಿಯೋ ಒಂದರಲ್ಲಿ ಸೆರೆಯಾಗಿದೆ.

ವಿಡಿಯೋ ಬಹಿರಂಗಕ್ಕೆ ಬರುತ್ತಿದ್ದಂತೆಯೇ ಕುಡೇರು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆಡಳಿತಾರೂಢ ತೆಲುಗುದೇಶಂ ಪಾರ್ಟಿಯ (ಟಿಡಿಪಿ) ನಾಗರಾಜು ಎಂಬ ವ್ಯಕ್ತಿಯನ್ನು ಬಂಧಿಸಿ, ಬಳಿಕ ಜಾಮೀನಿನಲ್ಲಿ ಬಿಡುಗಡೆ ಮಾಡಿದ್ದಾರೆ. ವಿಡಿಯೋದಲ್ಲಿ ಸುಧಾ ಎಂಬ ಮಹಿಳೆಯನ್ನು ನಾಗರಾಜು ಬಹಿರಂಗವಾಗಿ ಪದೇ ಥಳಿಸಿದ್ದು ದಾಖಲಾಗಿದೆ.

ವಾಟರ್ ಟ್ಯಾಂಕ್ ಕಟ್ಟಲು ಮಹಿಳೆ ಆಕ್ಷೇಪಿಸಿದ್ದರಿಂದ ನಾಗರಾಜು ಸಿಟ್ಟಿಗೆದ್ದಿದ್ದ ಎಂದು ಹೇಳಲಾಗಿದೆ. ವಿಧವೆಯಾಗಿದ್ದ ಸುಧಾ ಬೇರೆ ಕಡೆ ವಾಟರ್ ಟ್ಯಾಂಕ್ ನಿರ್ಮಿಸಿ ಎಂದು ಮನವಿ ಮಾಡಿದ್ದಳು. ಅದಕ್ಕೆ ಒಪ್ಪದ ನಾಗರಾಜ ಟ್ಯಾಂಕ್ ನಿರ್ಮಾಣ ಮಾಡಹೊರಟಾಗ ಮಾತಿನ ಚಕಮಕಿ ನಡೆಯಿತು.

ಸಿಟ್ಟಿಗೆದ್ದ ನಾಗರಾಜು ಆಕೆಯನ್ನು ಥಳಿಸುವುದರ ಜೊತೆಗೆ ಕೆಳಕ್ಕೆ ಬಿದ್ದಾಗ ಕಾಲಿನಿಂದ ಒದ್ದದ್ದೂ ವಿಡಿಯೋದಲ್ಲಿ ದಾಖಲಾಗಿದೆ. ನಾಗರಾಜು ಮತ್ತು ಇನ್ನೊಬ್ಬ ಸ್ಥಳೀಯ ಟಿಡಿಪಿ ನಾಯಕ ಚಂದ್ರ ಥಳಿಸಿರುವುದಾಗಿ ಮಹಿಳೆ ಮತ್ತು ಆಕೆಯ ಸಹೋದರ ರಾಮಗೋಪಾಲ್ ಆಪಾದಿಸಿದ್ದಾರೆ.

ವಿಡಿಯೋ ಕೃಪೆ: ಎಎನ್​ಐ

ಏಜೆನ್ಸೀಸ್

(ವೈವಿಧ್ಯಮಯ ಸುದ್ದಿಗಳಿಗೆ ವಿಜಯವಾಣಿ ಪತ್ರಿಕೆ ಓದಿರಿ)

Leave a Reply

Your email address will not be published. Required fields are marked *

Back To Top