More

    VIDEO: ಕುತ್ತಿಗೆಗೆ ಹಾವು ಸುತ್ತಿಕೊಂಡು ದೇವಸ್ಥಾನದ ಸುತ್ತ ನೃತ್ಯ ಪ್ರದಕ್ಷಿಣೆ ಮಾಡುತ್ತಿರುವ ಮಹಿಳೆ; ಎಲ್ಲ ದೇವರ ಲೀಲೆ ಎಂದ ಸ್ಥಳೀಯರು

    ಕೊಪ್ಪಳ: ಹಿರೇಬಗನಾಳ ಗ್ರಾಮದ ಓರ್ವ ಮಹಿಳೆಯ ವಿಚಿತ್ರ ವರ್ತನೆಯ ಒಂದಷ್ಟು ವಿಡಿಯೋಗಳು ಸಿಕ್ಕಾಪಟೆ ವೈರಲ್ ಆಗುತ್ತಿವೆ.

    ಈಕೆ ನಾಗರಹಾವನ್ನು ಕುತ್ತಿಗೆಗೆ ಸುತ್ತಿಕೊಂಡು ದೇವಾಲಯದ ಸುತ್ತ ನೃತ್ಯ ಮಾಡುತ್ತ, ತಾನೇ ದೇವರು ಎಂಬಂತೆ ವರ್ತಿಸುತ್ತಿದ್ದು ಸುತ್ತಲೂ ನೆರೆದಿರುವ ಜನರು ಇದೆಲ್ಲ ಪರಮಾತ್ಮನ ಲೀಲೆ ಎನ್ನುತ್ತಿದ್ದಾರೆ.

    ಮಹಿಳೆ ಹಿರೇಬಗನಾಳ ಗ್ರಾಮದವರಾಗಿದ್ದು ತಮ್ಮದೇ ಕೋಳಿಫಾರಂನಲ್ಲಿ ಕೆಲಸ ಮಾಡುತ್ತಾರೆ. ಬಹುದಿನಗಳಿಂದಲೂ ಗಳೇದಗುಡ್ಡದಲ್ಲಿರುವ ಮನೆದೇವರ ಬಳಿ ಕರೆದುಕೊಂಡು ಹೋಗು ಎಂದು ಪತಿಯ ಬಳಿ ಕೇಳುತ್ತಿದ್ದರು. ಆದರೆ ಹೋಗಲು ಆಗಿರಲಿಲ್ಲ. ಇಂದು ಅವರ ಕೋಳಿಫಾರಂಗೆ ಬಂದ ಹಾವನ್ನು ಏಕಾಏಕಿ ಎಳೆದು ಮೈಮೇಲೆ ಹಾಕಿಕೊಂಡು ವಿಚಿತ್ರವಾಗಿ ವರ್ತಿಸುತ್ತಿದ್ದಾರೆ ಎನ್ನಲಾಗಿದೆ. ಅಲ್ಲದೆ ಆ ಹಾವಿನ ಮೈ ಸವರುತ್ತ ನಾವು ಗಳೇದಗುಡ್ಡಕ್ಕೆ ಹೋಗೋಣವೇ ಎಂದು ಕೇಳುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.

    ಮಹಿಳೆ ಹಾವನ್ನು ಕುತ್ತಿಗೆಗೆ ಸುತ್ತಿಕೊಂಡು ಸೀದಾ ಹಿರೇಬಗನಾಳ ಗ್ರಾಮದ ಗವಿಸಿದ್ದೇಶ್ವರ ದೇವಾಲಯಕ್ಕೆ ತೆರಳಿದ್ದಾರೆ. ಅಲ್ಲಿ ನೃತ್ಯ ಮಾಡುತ್ತ ದೇಗುಲಕ್ಕೆ ಪ್ರದಕ್ಷಿಣೆ ಹಾಕಿದ್ದಾರೆ. ಅಲ್ಲಿಯೇ ಕುಳಿತು ಏನೇನೋ ಮಾತನಾಡುತ್ತಿದ್ದಾರೆ. ಅವರ ಸುತ್ತ ಹಲವು ಜನ ಸೇರಿದ್ದು ವಿಡಿಯೋದಲ್ಲಿ ಸೆರೆಯಾಗಿದೆ. (ದಿಗ್ವಿಜಯ ನ್ಯೂಸ್​)

    ಕುತ್ತಿಗೆಗೆ ಹಾವು ಸುತ್ತಿಕೊಂಡು ದೇವಸ್ಥಾನದ ಸುತ್ತ ನೃತ್ಯ ಪ್ರದಕ್ಷಿಣೆ ಮಾಡುತ್ತಿರುವ ಮಹಿಳೆ

    ಕೊಪ್ಪಳ: ಕುತ್ತಿಗೆಗೆ ಹಾವು ಸುತ್ತಿಕೊಂಡು ದೇವಸ್ಥಾನದ ಸುತ್ತ ನೃತ್ಯ ಪ್ರದಕ್ಷಿಣೆ ಮಾಡುತ್ತಿರುವ ಮಹಿಳೆ…

    Vijayavani ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಬುಧವಾರ, ಜನವರಿ 8, 2020

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts