ಸಂಬಂಧ ಎಂಬುದು ಅದ್ಭುತವಾಗಿರಬಹುದು ಆದರೆ, ಕೆಲವೊಮ್ಮೆ ಅದೇ ಸಂಬಂಧ ದುಃಖದಲ್ಲಿ ಮುಳುಗಿಸಿಬಿಡುತ್ತದೆ. ಇದಕ್ಕೆ ಉತ್ತಮ ಉದಾಹರಣೆ ದಾಂಪತ್ಯದಲ್ಲಿನ ದ್ರೋಹ. ತುಂಬಾ ನಂಬಿ ಮದುವೆಯಾದ ವ್ಯಕ್ತಿ ಬೇರೊಬ್ಬರ ಜತೆ ಸಲುಗೆಯಿಂದ ಇದ್ದಾಗ ಅದಕ್ಕಿಂತ ದೊಡ್ಡ ನೋವು ಮತ್ತೊಂದಿಲ್ಲ.
ಹೀಗೆ ಅನೇಕರು ಹೃದಯ ಬಿರಿಯುವಂತಹ ಅಕ್ರಮ ಸಂಬಂಧಗಳನ್ನು ಕೊಂಡುಕೊಂಡು ತಮಗಾದ ಕಹಿ ಅನುಭವದ ಎಳೆಯನ್ನು ರೆಡ್ಡಿಟ್ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ. ರೆಡ್ಡಿಟ್ ವೈಯಕ್ತಿಕ ವಿಚಾರಗಳನ್ನು ಚರ್ಚೆ ಮಾಡುವ ವೇದಿಕೆಯೂ ಆಗಿದ್ದು, ಇದರಲ್ಲಿ ಕಂಡು ಬಂದಂತಹ ವಿಚಿತ್ರ ಘಟನೆಯೊಂದು ನಿಮ್ಮ ಹುಬ್ಬೇರಿಸದೇ ಇರದು.
ಇದನ್ನೂ ಓದಿ: ಯುವತಿಯ ಸಜೀವ ದಹನಕ್ಕೆ ಕಾರಣವಾಗಿದ್ದು ಬಾಯ್ಫ್ರೆಂಡ್, ಮೊಬೈಲ್ ಮತ್ತು ತಾಯಿ!
ಮಹಿಳೆಯೊಬ್ಬರು ತಮ್ಮ ಪತಿಯ ಅಕ್ರಮ ಸಂಬಂಧದ ಬಗ್ಗೆ ರೆಡಿಟ್ ಜಾಲತಾಣ ವೇದಿಕೆಯಲ್ಲಿ ಹಂಚಿಕೊಂಡಿದ್ದಾರೆ. ಒಂದು ಮಧ್ಯರಾತ್ರಿ ನಾನು ನನ್ನ ಪತಿ ಮನೆಯಲ್ಲಿ ಮಲಗಿರುವಾಗ ಇದ್ದಕ್ಕಿದ್ದಂತೆ ನನಗೆ ಎಚ್ಚರವಾಯಿತು. ಆವಾಗ ನನ್ನ ಪತಿ ಹಾಸಿಗೆ ಮೇಲಿರಲಿಲ್ಲ. ಬಳಿಕ ಹುಡುಕುತ್ತಾ ಹೋದೆ. ಪಾರ್ಕಿಂಗ್ ಸ್ಥಳದಲ್ಲಿ ನನ್ನ ಪತಿಯ ವಾಹನ ಬಳಿ ಮತ್ತೊಂದು ವಾಹನ ನಿಲ್ಲಿಸಲಾಗಿತ್ತು.
ನಾನು ಹುಡುಕುತ್ತಾ ಮಹಡಿಯ ಮೇಲೆ ಹೋದೆ. ಅಲ್ಲಿ ಗೆಸ್ಟ್ ರೂಮ್ ಲಾಕ್ ಆಗಿದ್ದನ್ನು ನೋಡಿದೆ. ಮುಂದೆ ಹೋಗಿ ನೋಡಿದಾಗ ನನ್ನ ಪತಿ ಮತ್ತೊಬ್ಬ ಮಹಿಳೆಯೊಂದಿಗೆ ಬೆಡ್ ಮೇಲೆ ಮಲಗಿದ್ದರು. ಆ ಬೆಡ್ ನನ್ನ ಬಾಲ್ಯದ ಬೆಡ್ ಆಗಿತ್ತು. ನನ್ನನ್ನು ನೋಡಿದ ಪತಿ ಬಲವಂತವಾಗಿ ನನ್ನನ್ನು ರೂಮಿನಿಂದ ಹೊರ ಹಾಕಿದರು. ನನ್ನ ಕತ್ತನ್ನು ಹಿಡಿದು ನೂಕಿ, ಮತ್ತೆ ಬಾಗಿಲು ಮುಚ್ಚಿಕೊಂಡರು. ಬಳಿಕ ನಾನು ಪತಿಯ ತಂದೆ-ತಾಯಿಯನ್ನು ಕರೆದೆ. ಬಳಿಕ ತಂದೆ-ಮಗನ ನಡುವೆ ವಾಗ್ವಾದ ನಡೆಯಿತು. ಕೊನೆಗೆ ನನ್ನ ಪತಿ ನನ್ನನ್ನು ಬಿಟ್ಟು ಪಾಲಕರೊಂದಿಗೆ ಉಳಿದರು.
ಇದನ್ನೂ ಓದಿ: ನಿಶ್ಚಿತಾರ್ಥವಾಗಿದ್ರೂ ಬೇರೊಬ್ಬಳ ಜತೆ ತಿರುಗಾಟ: ಭಾವಿ ಪತಿಗೆ ತನ್ನ ಉಗ್ರರೂಪ ತೋರಿದ ಯುವತಿ!
ನಾನು ಆ ವಾರದ ಕೊನೆಯಲ್ಲಿ ಮನೆ ಬಿಟ್ಟು ತವರಿಗೆ ಹೋದೆ. ಒಂಬತ್ತು ವರ್ಷಗಳ ಬಳಿಕ ನಾನು ಮತ್ತೊಬ್ಬ ಒಳ್ಳಯ ವ್ಯಕ್ತಿಯೊಂದಿಗೆ ಮದುವೆಯಾದೆ. ಇದೀಗ ಇಬ್ಬರು ನೆಮ್ಮದಿಯುತ ಜೀವನವನ್ನು ನಡೆಸುತ್ತಿದ್ದೇವೆ ಎಂದು ಮಹಿಳೆ ತನ್ನದೇ ಒಂದು ಕಹಿ ಘಟನೆಯನ್ನು ಹಂಚಿಕೊಂಡಿದ್ದಾರೆ. (ಏಜೆನ್ಸೀಸ್)
ಕೆಲಸದಿಂದ ಮನೆಗೆ ಬಂದ ವ್ಯಕ್ತಿ ಪತ್ನಿಗಾಗಿ ಹುಡುಕಾಡಿದಾಗ ಆಕೆಯ ನಿಜ ಬಣ್ಣ ಬಯಲು: ತಂದೆಯೇ ವಿಲನ್!