More

  ಮಹಿಳೆಯರು ಸ್ವಾವಲಂಬಿ ಜೀವನ ನಡೆಸಿ

  ಅರಕೇರಾ: ಮಹಿಳೆಯರು ಆರ್ಥಿಕವಾಗಿ ಸದೃಢರಾಗಿ ಸ್ವಾವಲಂಬಿಯಾಗಿ ಬದುಕು ನಡೆಸಬೇಕೆನ್ನುವ ಮಹಾದಾಸೆಯನ್ನು ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವಿರೇಂದ್ರ ಹೆಗ್ಗಡೆಯವರ ಕನಸು ಎಂದು ಕಲ್ಯಾಣ ಕರ್ನಾಟಕ ಕೊಪ್ಪಳ ಪ್ರಾದೇಶಿಕ ನಿರ್ದೇಶಕ ಗಣೇಶ್ ಬಿ ಹೇಳಿದರು.

  ಇದನ್ನೂ ಓದಿ: ಸ್ವಾವಲಂಬಿ ಜೀವನಕ್ಕೆ ಗ್ರಾಮಾಭಿವೃದ್ಧಿ ಯೋಜನೆ ನೆರವು

  ತಾಲೂಕಿನ ಗಲಗ ಗ್ರಾಮದ ಚನ್ನಬಸವೇಶ್ವರ ಆರೋಢ ಮಠದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಸಾಮೂಹಿಕ ಶ್ರೀ ಲಕ್ಷ್ಮೀ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು.

  ಶ್ರೀ ಮಂಜುನಾಥನ ಸನ್ನಿಧಾನಕ್ಕೆ ಬರುವ ಕಾಣಿಕೆಯ ಒಂದು ಭಾಗವನ್ನು ಅಶಕ್ತ, ನಿರ್ಗತಿಕರಿಗೆ ನೀಡಲಾಗುತ್ತಿದೆ. ಅಭಯ, ಅಕ್ಷರ, ಆರೋಗ್ಯ, ಅನ್ನದಾನಕ್ಕೆ 800 ವರ್ಷಗಳ ಇತಿಹಾಸವಿದೆ. ಸಾಮಾಜಿಕ, ಶೈಕ್ಷಣಿಕ, ಭೌಗೋಳಿಕ, ಧಾರ್ಮಿಕವಾಗಿ ಎಲ್ಲ ವರ್ಗದವರೂ ಮುದುವರಿಯಬೇಕು. ಯೋಜನೆ ಸೌಲಭ್ಯ ಪಡೆಯಲು ಜಾತಿ-ಧರ್ಮ, ಮೇಲು-ಕೀಳು ರಾಜಕೀಯ ಮನೋಭಾವಿಲ್ಲ ಎಂದರು.

  ಗಬ್ಬೂರಿನಲ್ಲಿ ಸೂರಿಲ್ಲದ ನಿರ್ಗತಿಕರಿಬ್ಬರಿಗೆ ಮನೆ ನಿರ್ಮಿಸಿಕೊಡಲಾಗಿದೆ. ವಂದಲಿಯ ವೃದ್ಧೆ ಹನುಮವ್ವಳಿಗೆ ಸೂರು ಕಟ್ಟಿಕೊಡಲು ಪ್ರಸ್ತಾವನೆ ಸಲ್ಲಿಸಲಾಗಿದೆ. ತಾಲೂಕಿನ 2800 ಸಂಘಗಳಿಂದ 10, 20 ರೂ. ಉಳಿತಾಯ ಮಾಡಲಾಗಿದ್ದ ಸದಸ್ಯರ ಹಣ ಈಗ 8 ಕೋಟಿಯಾಗಿದೆ.

  ಸಂತರು, ಶರಣು, ದಾಸರು ನೆಲೆಸಿದ ನಾಡು ಭಾರತ. ಇಲ್ಲಿ ಕಲೆ, ಸಾಹಿತ್ಯ, ಸಂಸ್ಕಾರ, ಸಂಯಮ, ಆಚಾರ, ವಿಚಾರಗಳಿಗೆ ಮಹತ್ವ ಇದೆ. ಹೆಣ್ಣು ಮಕ್ಕಳು ಹಾಕಿಕೊಳ್ಳುವ ಕೈಬಳೆ, ಸಿಂಧೂರ, ಕಾಲ್ಗೆಜ್ಜೆ, ಕಾಲುಂಗುರ, ತಾಳಿ ಸಂಸ್ಕಾರದೊಂದಿಗೆ ವೈಜ್ಞಾನಿಕ ಹಿನ್ನಲೆ ಹೊಂದಿದೆ ಎಂದರು.

  ಬಿ.ಗಣೇಕಲ್ ಸಿದ್ದಾರೂಢ ಮಠದ ಶ್ರೀ ಸೋಮೇಶ್ವರಾನಂದ ಸ್ವಾಮೀಜಿ ಮಾತನಾಡಿ, ಆಧ್ಯಾತ್ಮಿಕ, ಧಾರ್ಮಿಕ, ಸಾಮಾಜಿಕ ಕಾರ್ಯಗಳ ಮಾಡುವ ಮನಸ್ಸುಗಳು ಭಗವಂತನಿಗೆ ಪ್ರೀಯ. ಪೂಜ್ಯ ಶ್ರೀ ಹೆಗ್ಗಡೆಯವರಗೂ ನಾಡಿನ ಜನತೆಗೂ ಅವಿನಾಭಾವ ರೂಪಕ ಅಂತಃಕರ್ಣದ ಸಂಬಂಧವಿದೆ.

  84 ಕೋಟಿ ಜೀವರಾಶಿಗಳಲ್ಲಿ ಮಾನವನಿಗೆ ಧರ್ಮದ ಕಾರ್ಯ ಮಾಡುವ ಜವಬ್ದಾರಿ ಇದೆ. ಬದುಕಿದ್ದಾಗ ಭೂಮಿಗೆ ಋಣ ತೀರಿಸುವ ಕೆಲಸ ಮಾಡಬೇಕು ಎಂದರು. ಆರೋಗ್ಯ ಯೋಜನೆ ಅಡಿಯಲ್ಲಿ ಗಜಾ ಸಂಘದ ಕವಿತಾ ಕುಟುಂಬಕ್ಕೆ 12 ಸಾವಿರ ಚೆಕ್, ನಿರ್ಗತಿಕ ವೃದ್ಧೆ ಹನುಮವ್ವಗೆ 750 ರೂ. ಮಾಶಾಸನ ಪ್ರಮಾಣ ಪತ್ರ ನೀಡಿದರು. ಬೆ.7.20 ರಿಂದ 10.30 ರವರೆಗೆ ಶ್ರೀ ಲಕ್ಷ್ಮೀ ಪೂಜಾ ಸೇರಿ ವಿವಿಧ ಧಾರ್ಮಿಕ ಕಾರ್ಯಗಳು ನಡೆದವು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts