ಸಾಕು ಮೊಸಳೆಗೆ ಬಲಿಯಾದ 44 ವರ್ಷದ ಮಹಿಳಾ ವಿಜ್ಞಾನಿ

ಮಿನಾಹಸ: ಇಂಡೋನೇಷ್ಯಾದಲ್ಲಿ ಅಕ್ರಮವಾಗಿ ಸಾಕಲಾಗಿದ್ದ 14 ಅಡಿ ಮೊಸಳೆಯೊಂದು 44 ವರ್ಷದ ಮಹಿಳಾ ವಿಜ್ಞಾನಿಯನ್ನು ತಿಂದಿರುವ ಘಟನೆ ನಡೆದಿದೆ.

ನಾರ್ಥ್​ ಸುಲವೇಸಿಯ ಪ್ರಯೋಗಾಲಯದ ಮುಖ್ಯಸ್ಥೆಯಾಗಿದ್ದ ಡೇಸಿ ಟುವೊ ಅಕ್ರಮವಾಗಿ ಈ ಮೊಸಳೆಯನ್ನು ಸಾಕಿದ್ದಳು. ಆದರೆ ಅದೇ ಮೊಸಳೆ ದಾಳಿಗೆ ಈಗ ಬಲಿಯಾಗಿದ್ದಾರೆ. ಡೇಸಿ ಆಯತಪ್ಪಿ ಮೊಸಳೆಯಿದ್ದ ಜಾಗಕ್ಕೆ ಬಿದ್ದಿದ್ದಾಳೆ ಎನ್ನಲಾಗಿದ್ದು, 4.4 ಮೀ.ಯಿದ್ದ ಮೊಸಳೆ ಆಕೆಯ ಕೈ ಮತ್ತು ಹೊಟ್ಟೆಯ ಭಾಗವನ್ನು ತಿಂದು ಹಾಕಿದೆ.

ಕೆಲ ಸಮಯದ ನಂತರ ಡೇಸಿ ಸಹೋದ್ಯೋಗಿಗಳು ಆಕೆಯ ದೇಹವನ್ನು ನೋಡಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಮೂರು ಗಂಟೆಯ ಸತತ ಕಾರ್ಯಾಚರಣೆ ನಂತರ ಮೊಸಳೆಯನ್ನು ಹಿಡಿದು ಮೊಸಳೆ ಸಂರಕ್ಷಣಾ ಪ್ರದೇಶಕ್ಕೆ ಸ್ಥಳಾಂತರಿಸಲಾಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

2016ರ ಏಪ್ರಿಲ್​ನಲ್ಲಿ ರಷ್ಯಾದ ಪ್ರವಾಸಿಗನನ್ನು ಮೊಸಳೆಯೊಂದು ತಿಂದಿದ್ದು ವರದಿಯಾಗಿತ್ತು. (ಏಜೆನ್ಸೀಸ್)