ಸೀಟ್​​ ಹಿಂದಿನಿಂದ ಕೈ ತೂರಿಸಿ ಅಲ್ಲೇ ಮುಟ್ಟಲು ಯತ್ನಿಸುತ್ತಿದ್ದ; ಅಸಹ್ಯ ಅನುಭವ ಬಿಚ್ಚಿಟ್ಟ ಯುವತಿ

ನವದೆಹಲಿ: ಆಟೋ, ಬಸ್​, ಟ್ಯಾಕ್ಸಿ ಪ್ರಯಾಣದ ವೇಳೆ ಮಹಿಳೆಯರಿಗೆ, ಅದರಲ್ಲೂ ರಾತ್ರಿಯ ಸಮಯದಲ್ಲಿ ಲೈಂಗಿಕ ಕಿರುಕುಳ ಆಗುವುದು ಹೊಸದೇನಲ್ಲ. ಆದರೆ ವಿಮಾನದಲ್ಲೂ ಇಂಥ ಪ್ರಕರಣಗಳು, ಅದೂ ಬೆಳ್ಳಂಬೆಳಗ್ಗೆಯೇ ನಡೆಯುವುದು ಅತಿ ಅಪರೂಪ ಎನ್ನಬಹುದು. ಅಂಥ ಒಂದು ಘಟನೆಯಿಂದ ತನಗಾದ ಅಸಹ್ಯ ಅನುಭವವನ್ನು ಯುವತಿಯೊಬ್ಬಳು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಆಕೆಯ ಪರವಾಗಿ ಹಲವರು ದನಿ ಎತ್ತಿದ್ದಾರೆ.

ಹೀಗೆ ವಿಮಾನದಲ್ಲಿ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದು 18ರ ಯುವತಿ. ಇನ್ನು ಈಕೆಗೆ ಕಿರುಕುಳ ಕೊಟ್ಟವನ ವಯಸ್ಸು ಹೆಚ್ಚೂಕಡಿಮೆ ಐವತ್ತು ವರ್ಷ ಇರಬಹುದು ಎಂದು ಯುವತಿಯೇ ಹೇಳಿಕೊಂಡಿದ್ದಾಳೆ. ಬೆಳ್ಳಂಬೆಳಗ್ಗೆಯೇ ಇಂಥದ್ದೊಂದು ಅಪಸವ್ಯ ನಡೆದಿದ್ದು, ಸುಮಾರು ಒಂದು ಗಂಟೆ ಕಾಲ ನಾನು ಮುಜುಗರವನ್ನು ಅನುಭವಿಸಬೇಕಾಯಿತು. ಇಷ್ಟಾದರೂ ಅಲ್ಲಿದ್ದ ಯಾರೂ ನನ್ನ ಬೆಂಬಲಕ್ಕೆ ಬರಲಿಲ್ಲ ಎಂಬುದಾಗಿ ಯುವತಿ ಹೇಳಿಕೊಂಡಿದ್ದಾಳೆ. ನಾನು ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ಹಿಂದೆ ಕೂತಿದ್ದ ವ್ಯಕ್ತಿಯೊಬ್ಬ ಸೀಟ್​ ನಡುವಿನ ಸಂದಿಯಿಂದ ಕೈತೂರಿಸಿ ನನ್ನ ತೋಳು ಮುಟ್ಟಿ, ಸ್ತನವನ್ನು ಸವರಲು ಯತ್ನಿಸುತ್ತಿದ್ದ. ಅವನು ನೋಡಲು ಸುಮಾರು 50-60 ವರ್ಷ ಆಗಿರುವವನ ಹಾಗೆ ಕಾಣಿಸುತ್ತಿದ್ದ ಎಂದು ಯುವತಿ ತನಗಾದ ನೋವನ್ನು ವಿವರಿಸಿದ್ದಾಳೆ.

ಇದನ್ನೂ ಓದಿ: ಹೆಂಡತಿಗೆ ಕಿರುಕುಳ ಕೊಟ್ಟು ಸಾವು ತಂದುಕೊಂಡ ಗಂಡ; ಆಕೆ ಹೊಡೆಯಿರಿ ಎಂದಳು, ಅವರಿಬ್ಬರು ಕೊಂದೇ ಬಿಟ್ಟರು…

ನಾನು ಸೀಟ್​ನಲ್ಲಿ ಕುಳಿತು ಪುಸ್ತಕ ಓದುತ್ತಿದ್ದಾಗ ಮೈಮೇಲೆ ಏನೋ ಸರಿದಾಡಿದಂತಾಯಿತು. ಏನು ಎಂದು ಗಮನಿಸಿದಾಗ ವ್ಯಕ್ತಿಯೊಬ್ಬ ಎದೆಯನ್ನು ಮುಟ್ಟಲು ಪ್ರಯತ್ನಿಸುತ್ತಿರುವುದು ತಿಳಿಯಿತು. ನಾನು ನನ್ನ ಕೈಯನ್ನು ಮುಂದೆ ಒಡ್ಡಿದಾಗ, ನನ್ನ ಬೆರಳ ತುದಿಗಳು ಅವನ ಬೆರಳ ತುದಿಗಳಿಗೆ ತಾಗಿದವು. ಏನಾಗುತ್ತಿದೆ ಎಂಬುದು ನನ್ನ ಗಮನಕ್ಕೆ ಬಂದಿದೆ ಎಂಬುದನ್ನು ಇದರಿಂದ ಆತ ತಿಳಿದು ಸುಮ್ಮನಾಗುತ್ತಾನೆ ಅಂತ ಅಂದುಕೊಂಡೆ. ಆದರೆ ಕೆಲವೇ ನಿಮಿಷಗಳಲ್ಲಿ ಆತ ಮತ್ತೆ ಅದೇ ಥರ ಕೈತೂರಿ ಎದೆ ಸ್ಪರ್ಶಿಸಲು ಹವಣಿಸುತ್ತಿದ್ದ ಎಂಬುದಾಗಿ ಯುವತಿ ಹೇಳಿದ್ದಾಳೆ.

ಸೀಟ್​​ ಹಿಂದಿನಿಂದ ಕೈ ತೂರಿಸಿ ಅಲ್ಲೇ ಮುಟ್ಟಲು ಯತ್ನಿಸುತ್ತಿದ್ದ; ಅಸಹ್ಯ ಅನುಭವ ಬಿಚ್ಚಿಟ್ಟ ಯುವತಿ
ಸೀಟ್​ ಹಿಂಭಾಗದಿಂದ ಕೈತೂರಿ ಸ್ಪರ್ಶಿಸುವ ಪ್ರಯತ್ನ

ಒಂದು ಹಂತದ ಬಳಿಕ ನಾನು ಪ್ರತಿಯೊಂದನ್ನೂ ವಿಡಿಯೋ ರೆಕಾರ್ಡ್ ಮಾಡಿಕೊಂಡೆ. ಅಲ್ಲದೆ ವಿಷಯವನ್ನು ಅಲ್ಲಿದ್ದ ವೈಮಾನಿಕ ಸಿಬ್ಬಂದಿಗೆ ತಿಳಿಸಿದೆ. ಅವರಿಗೆ ಇದೆಲ್ಲ ಕಾಣಿಸುತ್ತಿದ್ದರೂ ನೋಡಿಯೂ ನೋಡದಂತೆ ಇದ್ದರು. ಸಹ ಪ್ರಯಾಣಿಕರು ಕೂಡ ನನ್ನ ಬೆಂಬಲಕ್ಕೆ ಬರಲಿಲ್ಲ. ಕೊನೆಗೆ ವಿಂಡೋಸೀಟ್​ ಬಯಸುತ್ತಿದ್ದ ಇನ್ನೊಬ್ಬಾಕೆಯನ್ನು ಅಲ್ಲಿ ಕೂರಿಸಿ ಆಕೆಯ ಸೀಟಲ್ಲಿ ಕುಳಿತೆ. ಈ ವಿಷಯದ ವಿರುದ್ಧ ನಾನು ಅಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದರೂ ಉಳಿದವರು ನನಗೇ ಸುಮ್ಮನಿರುವಂತೆ ಹೇಳಿದರು ಎಂದು ಬೇಸರದಿಂದ ಹೇಳಿಕೊಂಡಿದ್ದಾಳೆ.

ಇದನ್ನೂ ಓದಿ: ಹೆಂಡತಿಯನ್ನು ಇನ್ನೊಬ್ಬನ ಜತೆ ನೋಡಬಾರದ ಸ್ಥಿತಿಯಲ್ಲಿ ನೋಡಿದ ಗಂಡ; ಇಬ್ಬರನ್ನೂ ಹೊರಕ್ಕೆಳೆದು ಕಂಬಕ್ಕೆ ಕಟ್ಟಿ ಥಳಿಸಿದ..

ವಾರದ ಹಿಂದೆ ನಡೆದಿದ್ದ ಇವೆಲ್ಲವನ್ನೂಈಕೆ ಬುಧವಾರ ಟಿಕ್​ಟಾಕ್​ನಲ್ಲಿ @mobilesushibar ಎಂಬ ಯೂಸರ್​ನೇಮ್​ ಇರುವ ಖಾತೆಯಲ್ಲಿ ವಿಡಿಯೋ ಮೂಲಕ ಹಂಚಿಕೊಂಡಿದ್ದಾಳೆ. ಇದನ್ನು ನೋಡಿದ ನೆಟ್ಟಿಗರು ಯುವತಿಗೆ ತಮ್ಮ ಬೆಂಬಲ ಸೂಚಿಸಿದ್ದು, ಆರೋಪಿ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ಕೆಲವರಂತೂ ಆತನ ಬೆರಳನ್ನೇ ಕತ್ತರಿಸಬೇಕು ಎಂದು ತೀವ್ರ ಕೋಪ ವ್ಯಕ್ತಪಡಿಸಿದ್ದಾರೆ.

ಅಂದಹಾಗೆ ಈ ಯುವತಿ ಸ್ಪಿರಿಟ್ ಏರ್​ಲೈನ್ಸ್​ನಲ್ಲಿ ಕ್ಯಾಲಿಫೋರ್ನಿಯಾಗೆ ಹೋಗುತ್ತಿರುವಾಗ ಈ ಘಟನೆ ನಡೆದಿದೆ. ಈ ಬಗ್ಗೆ ದೂರು ನೀಡಿದ್ದು, ಏರ್​ಲೈನ್ಸ್​ನವರು ತನಿಖೆ ನಡೆಸುತ್ತಿದ್ದಾರೆ. ಅವರು ಆತನನ್ನು ಪತ್ತೆ ಹಚ್ಚಿ ಕ್ರಮಕೈಗೊಳ್ಳುತ್ತಾರೆ ಎಂಬ ನಿರೀಕ್ಷೆಯಲ್ಲಿ ಇದ್ದೇನೆ ಎಂಬುದಾಗಿಯೂ ಯುವತಿ ಹೇಳಿದ್ದಾಳೆ. (ಏಜೆನ್ಸೀಸ್)

ಕೆಎಸ್​ಆರ್​ಟಿಸಿ ಬಸ್​ನಲ್ಲಿ ಹಾವು!; ಲಾಕ್​ಡೌನ್​ ಇಫೆಕ್ಟ್​, ಚಾಲಕರಲ್ಲಿ ಭಯ…

ಕರೊನಾ ಮೂರನೇ ಅಲೆಯನ್ನು ತಡೆಯಬಹುದಂತೆ!; ಅದಕ್ಕಾಗಿ ಏನು ಮಾಡಬೇಕು? ಇಲ್ಲಿದೆ ಮಾಹಿತಿ…

ನಾಪತ್ತೆಯಾದ ಹದಿನಾಲ್ಕರ ಹುಡುಗಿ 2 ವರ್ಷಗಳ ಬಳಿಕ 4 ತಿಂಗಳ ಮಗುವಿನೊಂದಿಗೆ ಪತ್ತೆಯಾದಳು!

‘ನಾಯಿಗೆ ರಕ್ತ ಬೇಕಾಗಿದೆ!’; ಅಪಘಾತಕ್ಕೀಡಾಗಿ ಮೂಳೆ ಮುರಿದ ಶ್ವಾನಕ್ಕೆ ನಡೆಯಲಿದೆ ಸರ್ಜರಿ..

Share This Article

ಪೋಷಕರೇ ಹುಷಾರ್‌! ಅಪ್ಪಿತಪ್ಪಿಯೂ ಮಕ್ಕಳ ಮುಂದೆ ಪೋಷಕರು ಈ ಕೆಲಸಗಳನ್ನು ಮಾಡಬೇಡಿ

 ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…

ನಿಮ್ಮ ಅಂಗೈನಲ್ಲಿ ಮೀನಿನ ಚಿಹ್ನೆ ಇದ್ರೆ ಏನಾಗುತ್ತೆ ಗೊತ್ತಾ? ಇಲ್ಲಿದೆ ನೋಡಿ ಅಚ್ಚರಿಯ ಸಂಗತಿ…

ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…

30 ದಿನಗಳಲ್ಲೇ ಸ್ಲಿಮ್ ಆ್ಯಂಡ್​ ಫಿಟ್​ ಆಗಬೇಕಾ? ಪ್ರತಿದಿನ ಇಡ್ಲಿ ತಿನ್ನಿ

ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…