ಕೇರಳ: ( Woman Rescues her Husband )ವಿವಾಹದ ಸಮಯದಲ್ಲಿ, ವರನು ತನ್ನ ಹೆಂಡತಿಯೊಂದಿಗೆ ಎಲ್ಲಾ ಸಮಯಗಳಲ್ಲಿ ಮತ್ತು ಎಲ್ಲಾ ಸಂದರ್ಭಗಳಲ್ಲಿಯೂ ಇರುತ್ತೇನೆ ಮತ್ತು ರಕ್ಷಿಸುತ್ತೇನೆ ಎಂದು ಪ್ರಮಾಣವಚನ ಸ್ವೀಕರಿಸುತ್ತಾನೆ. ಅದೇ ಸಮಯದಲ್ಲಿ, ವಧು ಕಷ್ಟದ ಸಮಯದಲ್ಲಿಯೂ ತನ್ನ ಪತಿಯೊಂದಿಗೆ ಇರುವುದಾಗಿ ಪ್ರತಿಜ್ಞೆ ಮಾಡುತ್ತಾಳೆ. ಹೀಗೆ 56 ವರ್ಷದ ಮಹಿಳೆ ತನ್ನ ಗಂಡನನ್ನು ಅಪಾಯದಲ್ಲಿ ರಕ್ಷಿಸಿದ ರೀತಿ ಈ ವಿವಾಹ ಬಂಧದ ಶಕ್ತಿಯನ್ನು ಪ್ರದರ್ಶಿಸುತ್ತದೆ. ಕೇರಳದ ಎರ್ನಾಕುಲಂ ಜಿಲ್ಲೆಯ ಪಿರವಂ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಮಹಿಳೆಯ ಧೈರ್ಯವನ್ನು ನೆಟಿಜನ್‌ಗಳು ಶ್ಲಾಘಿಸುತ್ತಿದ್ದಾರೆ.
ನಡೆದಿದ್ದೇನು?: ಬುಧವಾರ ಬೆಳಿಗ್ಗೆ, 64 ವರ್ಷದ ರಮೇಶನ್ ಕಾಳುಮೆಣಸು ಕೀಳಲು ತಮ್ಮ ಹಿತ್ತಲಿನಲ್ಲಿರುವ ಕಾಳು ಮೆಣಸು ಬಳ್ಳಿ ಹಂಬಿಕೊಂಡಿದ್ದ ಮರವನ್ನು ಹತ್ತುತ್ತಿದ್ದಾಗ, ಕೊಂಬೆ ಆಕಸ್ಮಿಕವಾಗಿ ಮುರಿದು ಹತ್ತಿರದ 40 ಅಡಿ ಆಳದ ಬಾವಿಗೆ ಬಿದ್ದಿದ್ದಾರೆ. ಇದನ್ನು ನೋಡಿದ ಅವರ ಪತ್ನಿ ಪದ್ಮಾ ( 56 ವರ್ಷದ ) ಅಳಲಿಲ್ಲ, ಬದಲಾಗಿ ತುರ್ತು ಪ್ರಜ್ಞೆಯಿಂದ ವರ್ತಿಸಿದರು. ಅವಳು ತಕ್ಷಣ ಹಗ್ಗದ ಸಹಾಯದಿಂದ ಬಾವಿಗೆ ಇಳಿದಳು. ಮುಳುಗಿ ಪ್ರಜ್ಞೆ ಕಳೆದುಕೊಳ್ಳುವ ಹಂತದಲ್ಲಿದ್ದ ತನ್ನ ಗಂಡನನ್ನು ಅವಳು ಸುಮಾರು 20 ನಿಮಿಷಗಳ ಕಾಲ ಹಿಡಿದುಕೊಂಡು ಜೋರಾಗಿ ಕಿರುಚಿದಳು.
#Kerala | A 56-year-old woman climbed down into a 40 feet deep well to prevent her unconscious husband, 64-year-old Ramesan Nair EK, from drowning after he fell into it. PK Padmam held on to him until help arrived, displaying remarkable bravery and presence of mind.
More details… pic.twitter.com/8MOeodm6bD
— The Times Of India (@timesofindia) February 6, 2025
ಈ ಮಹಿಳೆಯ ಕಿರುಚಾಟ ಕೇಳಿ, ದಾರಿಹೋಕರು ಓಡಿ ಬಂದು ಬಾವಿಯೊಳಗೆ ನೋಡಿದರು. ಕೂಡಲೇ ಪೊಲೀಸರು ಮತ್ತು ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಲಾಯಿತು. ಸ್ಥಳೀಯರಿಂದ ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಪೊಲೀಸರು ಬುಟ್ಟಿಯ ಸಹಾಯದಿಂದ ದಂಪತಿಯನ್ನು ಹೊರತೆಗೆದರು. ನಂತರ ರಮೇಶನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಪತಿಯನ್ನು ಉಳಿಸಲು ಧೈರ್ಯದಿಂದ ಮತ್ತು ಸಮಯಕ್ಕೆ ಸರಿಯಾಗಿ ಕಾರ್ಯನಿರ್ವಹಿಸಿದ 56 ವರ್ಷದ ಪದ್ಮಾ ಅವರಿಗೆ ಪ್ರಶಂಸೆಯ ಮಹಾಪೂರವೇ ಹರಿದು ಬರುತ್ತಿದೆ.
ಬಿಳಿ ಜಿಂಕೆ ! ಹಿಮಭರಿತ ಕಾಡುಗಳಲ್ಲಿ ಕಾಣಿಸಿಕೊಂಡ ಅಪರೂಪದ Albino Deer ವಿಡಿಯೋ ಇಲ್ಲಿದೆ…