ನಟ್ಟ ನಡುರಸ್ತೆಯಲ್ಲೇ ಸಿನಿಮೀಯ ರೀತಿಯಲ್ಲಿ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿ ಮಹಿಳಾ ಪೊಲೀಸ್​ ಅಧಿಕಾರಿಯ ಹತ್ಯೆ

ತಿರುವನಂತಪುರ: ಅಲಪುಳ ಜಿಲ್ಲೆಯ ವಲ್ಲಿಕುನ್ನಂ ಬಳಿಯ ಕಾಂಜಿಪುಳ ಎಂಬಲ್ಲಿ ಪೊಲೀಸ್​ ಅಧಿಕಾರಿಯೊಬ್ಬ ಮಹಿಳಾ ಪೊಲೀಸ್​ ಅಧಿಕಾರಿಯನ್ನು ಬೆಂಕಿ ಹಚ್ಚಿ ಹತ್ಯೆ ಮಾಡಿದ್ದಾರೆ.

ವಲ್ಲಿಕುನ್ನಂ ಪೊಲೀಸ್​ ಠಾಣೆಯಲ್ಲಿ ಸೌಮ್ಯ ಸಿಪಿಒ ಸೌಮ್ಯ ಪುಷ್ಕರನ್​​ (34) ಮೃತರು. ಅಳುವಾ ಸಂಚಾರ ಪೊಲೀಸ್​ ಠಾಣೆಯಲ್ಲಿ ಕಾರ್ಯನಿರ್ವಹಿಸುವ ಏಜಾಜ್​ ಕೊಲೆಗಾರ. ಘಟನೆಯಲ್ಲಿ ಏಜಾಜ್​ ಕೂಡ ಗಾಯಗೊಂಡಿದ್ದಾನೆ. ಆತನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಅಲಪುಳ ಜಿಲ್ಲಾ ಪೊಲೀಸ್​ ಮುಖ್ಯಸ್ಥ ಕೆ.ಎಂ. ಟಾಮಿ ತಿಳಿಸಿದ್ದಾರೆ.

ಘಟನೆಯ ವಿವರ
ತಮ್ಮ ದೈನಂದಿನ ಕೆಲಸ ಮುಗಿಸಿಕೊಂಡು ಸೌಮ್ಯ ಶನಿವಾರ ಮಧ್ಯಾಹ್ನ 3.30ಕ್ಕೆ ಮನೆಗೆ ಮರಳುತ್ತಿದ್ದರು. ಇವರು ಚಲಾಯಿಸುತ್ತಿದ್ದ ಬೈಕ್​ಗೆ ಕಾರಿನಲ್ಲಿ ಬಂದ ಏಜಾಜ್​ ಡಿಕ್ಕಿ ಹೊಡೆದಿದ್ದ. ಕೆಳಗೆ ಬಿದ್ದ ಸೌಮ್ಯ ಹೇಗೋ ಮೇಲೆದ್ದು, ಹತ್ತಿರದಲ್ಲಿದ್ದ ಮನೆಯೊಳಗೆ ಹೋಗಿ ಬಚಾವ್​ ಆಗಲು ಯತ್ನಿಸಿದ್ದರು. ಆದರೆ, ಮನೆಯೊಳಗೆ ನುಗ್ಗಿದ ಏಜಾಜ್​, ಸೌಮ್ಯ ಅವರನ್ನು ಹೊರಕರೆತಂದು, ಕೈಕಾಲು ಕಟ್ಟಿಹಾಕಿ, ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿದ್ದ.

ಬೆಂಕಿ ದೇಹವನ್ನು ಸಂಪೂರ್ಣವಾಗಿ ಆವರಿಸಿಕೊಂಡ ಕಾರಣ ಸೌಮ್ಯ ಜೀವಂತವಾಗಿ ದಹನವಾಗಿದ್ದರು. ಅವರಿಗೆ ಬೆಂಕಿ ಹಚ್ಚುವಾಗ ಏಜಾಜ್​ಗೂ ಸುಟ್ಟು ಗಾಯಗಳಾಗಿದ್ದವು. ಸ್ಥಳದಲ್ಲಿದ್ದ ಜನರು ತಕ್ಷಣವೇ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಸದ್ಯ ಆತ ಚೇತರಿಸಿಕೊಳ್ಳುತ್ತಿದ್ದಾನೆ. ಈತನ ವಿಚಾರಣೆಯ ಬಳಿಕ ಘಟನೆಗೆ ಕಾರಣ ಏನೆಂಬುದು ಸ್ಪಷ್ಟವಾಗಲಿದೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *