ಯುವಕನ ಕೊಲೆಯಲ್ಲಿ ಪಾತ್ರ ಶಂಕೆ: ಮಹಿಳೆ ಬೆತ್ತಲೆಗೊಳಿಸಿ ಹಲ್ಲೆ, ಮೆರವಣಿಗೆ

ಅರಾ​: ಹತ್ತೊಂಬತ್ತು ವರ್ಷದ ಯುವಕನ ಕೊಲೆಯಲ್ಲಿ ಮಹಿಳೆಯ ಪಾತ್ರವಿದೆ ಎಂದು ಅನುಮಾನಿಸಿ ಆಕೆಯ ಮೇಲೆ ಹಲ್ಲೆ ನಡೆಸಿ, ಬೆತ್ತಲೆ ಮಾಡಿ ಮೆರವಣಿಗೆ ಮಾಡಿರುವ ಘಟನೆ ಬಿಹಾರದ ಭೋಜ್​ಪುರ ಜಿಲ್ಲೆಯಲ್ಲಿ ನಡೆದಿದೆ.

ಬಿಹಿಯಾ ಪೊಲೀಸ್ ಠಾಣೆ​ ಅಧಿಕಾರಿ ಅವಕಾಶ್​ ಕುಮಾರ್​ ಪ್ರಕರಣದ ಬಗ್ಗೆ ಮಾತನಾಡಿ, “ಕಾಣೆಯಾಗಿದ್ದ ವಿಮಲೇಶ್​ ಮೃತದೇಹ ಸೋಮವಾರ ಬೆಳಗ್ಗೆ ರೈಲ್ವೆ ಟ್ರ್ಯಾಕ್​ ಬಳಿ ಪತ್ತೆಯಾಗಿತ್ತು. ವಿಷಯ ತಿಳಿದ ತಕ್ಷಣ ವಿಮಲೇಶ್​ನ ಸಂಬಂಧಿಕರು ಹಾಗೂ ಅಕ್ಕ ಪಕ್ಕದ ಮನೆಯವರು ಸ್ಥಳಕ್ಕೆ ಬಂದಿದ್ದಾರೆ. ಉದ್ರಿಕ್ತಗೊಂಡ ಗ್ರಾಮಸ್ಥರು ಸುತ್ತಮುತ್ತಲಿನ ಅಂಗಡಿಗಳಿಗೆ ಬೆಂಕಿ ಇಟ್ಟು ಹಾಗೂ ನಿವಾಸಿಗಳಿಗೆ ಥಳಿಸಿದ್ದಾರೆ. ಇದೇ ವೇಳೆ ಮಹಿಳೆಯೊಬ್ಬರನ್ನು ಬೀದಿಗೆ ಎಳೆದು ತಂದು, ಬೆತ್ತಲೆ ಮಾಡಿ ಹಲ್ಲೆ ನಡೆಸುತ್ತಾ ಮೆರವಣಿಗೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ಪೊಲೀಸರಿಂದ ಲಾಠಿ ಚಾರ್ಚ್​
ವಿಮಲೇಶ್​ ದೇಹ ರೆಡ್​ ಲೈಟ್​ ಏರಿಯಾದಲ್ಲಿ ಪತ್ತೆಯಾದ್ದರಿಂದ ಅನುಮಾನಗೊಂಡ ಸಂಬಂಧಿಕರು ಸ್ಥಳೀಯರನ್ನು ಥಳಿಸಿದ್ದಾರೆ. ಜತೆಗೆ ರೈಲುಗಳ ಮೇಲೂ ಕಲ್ಲು ತೂರಾಟ ನಡೆಸಿದ್ದಾರೆ. ಹಾಗಾಗಿ ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್​ ಹಾಗೂ ಗಾಳಿಯಲ್ಲಿ ಗುಂಡು ಹಾರಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. (ಏಜೆನ್ಸೀಸ್​)