ಮುಂಬೈ: ದೇಶ ಎಲ್ಲ ರಾಜ್ಯಗಳ ಪೊಲೀಸರು ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ. ಇದರಿಂದ ನಾಗರಿಕರನ್ನು ಪೊಲೀಸ್ ಸ್ನೇಹಿಯಾಗಿ ಮಾಡಲು ಅನುಕೂಲವಾಗಿದೆ.
ಇಂತಹ ಪೊಲೀಸ್ ಪುಟಗಳಲ್ಲಿ ಹಾಸ್ಯ, ಸೃಜನಶೀಲ ಎಚ್ಚರಿಕೆಗಳೂ ಇರುತ್ತವೆ. ಆದರೆ ಪುನಾದ ಪೊಲೀಸರು ಈ ಚಾಟ್ ಮಾತ್ರ ಎಲ್ಲಕ್ಕಿಂತ ಹೆಚ್ಚಾಗಿ ಗಮನ ಸೆಳೆಯುತ್ತದೆ.
ಭಾನುವಾರ ಮಹಿಳೆಯೊಬ್ಬಳು ಪುಣೆಯ ಪೊಲೀಸರ ಟ್ವೀಟರ್ಗೆ ಧನೋರಿ ಪೊಲೀಸ್ ಠಾಣೆಯ ನಂಬರ್ಗಾಗಿ ಮನವಿ ಮಾಡಿದಳು. ಅದಕ್ಕೆ ಪೊಲೀಸರು ಆ ಠಾಣೆಯ ನಂಬರ್ ಮಾಡಿ ಅದಕ್ಕೆ ಉತ್ತರಿಸಿದರು.
ಇದನ್ನು ನೋಡಿದ ಒಬ್ಬಾತ ಇದಕ್ಕೆ ಮರುತ್ತರ ನೀಡುತ್ತ ಆ ಮಹಿಳೆಯ ಫೋನ್ ನಂಬರ್ನ್ನು ಶೇರ್ ಮಾಡುವಂತೆ ಕೇಳಿದ. ಇದನ್ನು ಕಂಡ ನೆಟ್ಟಿಗರು ಅವನ ಈ ಬೇಡಿಕೆ ಬಗ್ಗೆ ತೀವ್ರವಾಗಿ ಖಂಡಿಸಿದರು. ಆದರೆ ಪುನಾ ಪೊಲೀಸರು ನೀಡಿದ ಉತ್ತರ ಮಾತ್ರ ಎಲ್ಲರ ಗಮನಸೆಳೆಯುತ್ತಿದೆ.
ಪುಣೆಯ ಪೊಲೀಸರು, “ಸರ್ ನಮಗೆ ನಿಮ್ಮ ಫೋನ್ ನಂಬರ್ ಬಗ್ಗೆ ಆಸಕ್ತಿ ಇದೆ. ನಿಮಗೆ ಹೆಣ್ಣುಮಕ್ಕಳ ಬಗ್ಗೆ ಇರುವ ಆಸಕ್ತಿಯನ್ನು ತಿಳಿಯಲು” ಎಂದು ನೇರವಾಗಿ ಆತನಿಗೆ ಸಂದೇಶ ಕಳುಹಿಸಿದ್ದಾರೆ.
ಈ ರೀತಿ ಉತ್ತರಿಸಿದ ಪುಣೆ ಪೊಲೀಸರ ಈ ಟ್ವೀಟ್ಗೆ 14,000 ಸಾವಿರಕ್ಕೂ ಹೆಚ್ಚು ಲೈಕ್ ಬಂದಿದ್ದು, 3 ಸಾವಿರ ಮಂದಿ ಇದನ್ನು ರಿಟ್ವೀಟ್ ಮಾಡಿದ್ದಾರೆ. (ಏಜೆನ್ಸೀಸ್ )
Sir, we are more interested in your number currently, to understand your interest in the lady’s number. You may DM. We respect privacy. https://t.co/LgaD1ZI2IT
— PUNE POLICE (@PuneCityPolice) January 12, 2020