ಮಡಿಕೇರಿ: ಯುವಕನೊಂದಿಗೆ ನಾಪತ್ತೆಯಾಗಿದ್ದ ಯುವತಿ ಪ್ರತ್ಯಕ್ಷವಾಗಿ ವಿಡಿಯೋ ಚಿತ್ರೀಕರಣ ಮಾಡಿ ಸಾಮಾಜಿ ಜಾಲ ತಾಣದಲ್ಲಿ ಹರಿಬಿಟ್ಟಿದ್ದಾಳೆ.
ಕೊಡಗು ಜಿಲ್ಲೆಯ ಸೋಮವಾರ ಪೇಟೆ ತಾಲೂಕಿನ ನೆಲ್ಯಹುದಿಕೇರಿಯ ದೀಪಕ್ ಎಂಬಾತನೊಂದಿಗೆ ವಿವಾಹವಾಗಿರುವುದನ್ನು ಆಕೆ ವಿಡಿಯೋ ಮಾಡಿ ಸಾಮಾಜಿ ಜಾಲ ತಾಣದಲ್ಲಿ ಅಪ್ಲೋಡ್ ಮಾಡಿದ್ದಾಳೆ.
ನನಗೆ 18 ವರ್ಷ ವಯಸ್ಸಾಗಿದೆ. ನಾನು ಇಷ್ಟಪಟ್ಟು ದೀಪಕ್ ಹಾಗೂ ನಾನು ದೇವಾಲಯದಲ್ಲಿ ವಿವಾಹವಾಗಿದ್ದೇವೆ. ಇನ್ನು ಮುಂದೆ ಇಬ್ಬರು ಒಟ್ಟಾಗಿ ಇರುತ್ತೇವೆ ಎಂದು ಆಕೆ ಹೇಳಿಕೊಂಡಿದ್ದಾಳೆ.
ಯುವತಿಯ ಪಾಲಕರು ಅಪ್ರಾಪ್ತ ವಯಸ್ಸಿನ ಮಗಳನ್ನು ದೀಪಕ್ ಅಪಹರಣ ಮಾಡಿದ್ದಾನೆ ಎಂದು ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅಲ್ಲದೆ ಅಪ್ರಾಪ್ತ ಯುವತಿಯನ್ನು ಹುಡುಕಿ ಕರೆ ತರಬೇಕು ಎಂದು ಪಾಲಕರು ಗ್ರಾಮಸ್ಥರೊಂದಿಗೆ ಠಾಣೆಗೆ ತೆರಳಿ ಮನವಿ ಮಾಡಿದ್ದರು. (ದಿಗ್ವಿಜಯ ನ್ಯೂಸ್)