ಕೊಕಟನೂರ: ಮಹಿಳೆ ನಾಪತ್ತೆ

ಕೊಕಟನೂರ: ಸಿದ್ಧೇವಾಡಿ ಗ್ರಾಮದ ಮಹಿಳೆ ಮನೆಯಿಂದ ಹೊರ ಹೋದವಳು ಮರಳಿ ಬಾರದೆ ಕಾಣೆಯಾಗಿದ್ದಾಳೆ ಎಂದು ಸಹೋದರ ಹರಿಭಾ ಕೃಷ್ಣ ನರಳೆ ಶನಿವಾರ ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸಿದ್ಧೇವಾಡಿ ಗ್ರಾಮದ ತುಳಸಾಬಾಯಿ ಸಂದೀಪಾನ ಎಡವೆ (45) ಕಾಣೆಯಾದ ಮಹಿಳೆ. ತುಳಸಾಬಾಯಿ ಬುಧವಾರ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯಿಂದ ಹೋಗಿದ್ದು, ಹಸಿರು ಬಣ್ಣದ ಸೀರೆ ಮತ್ತು ರವಿಕೆ ಧರಿಸಿದ್ದಾರೆ. ಕನ್ನಡ ಮತ್ತು ಮರಾಠಿ ಭಾಷೆ ಮಾತನಾಡುತ್ತಾರೆ. ಮಹಿಳೆ ಬಗ್ಗೆ ಯಾರಿಗಾದರೂ ಮಾಹಿತಿ ದೊರೆತರೆ ಅಥಣಿ ಪೊಲೀಸ್ ಠಾಣೆಯ ದೂ.ಸಂ.08289-251133 ಹಾಗೂ ಮೊ.ಸಂ.9480804062 ಸಂಪರ್ಕಿಸಬೇಕು ಎಂದು ಅಥಣಿ ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *