ಯಂತ್ರಕ್ಕೆ ಸೀರೆ ಸಿಲುಕಿ ಪ್ರಾಣ ಕಳ್ಕೊಂಡ ಮಹಿಳೆ; ಗೋವಿನಜೋಳ ರಾಶಿ ಮಷಿನ್​ಗೆ ಸಿಕ್ಕಿ ದೇಹ ಛಿದ್ರ..

ಬಾಗಲಕೋಟೆ: ಕೃಷಿ ಸಂಬಂಧಿತ ಚಟುವಟಿಕೆಗಳ ಸಂದರ್ಭ ಸಣ್ಣ ಎಡವಟ್ಟಿನಿಂದಾಗಿ ಅಂಥ ಕೆಲಸಗಾರರು ಪ್ರಾಣ ಕಳೆದುಕೊಂಡ ಪ್ರಕರಣಗಳು ಸಾಕಷ್ಟು ಸಂಭವಿಸಿವೆ. ಇಂದು ಅಂಥದ್ದೇ ಇನ್ನೊಂದು ಪ್ರಕರಣ ಸಂಭವಿಸಿದ್ದು, ಕೃಷಿ ಚಟುವಟಿಕೆ ವೇಳೆ ಮಹಿಳೆಯೊಬ್ಬರು ಸಾವಿಗೀಡಾಗಿದ್ದಾರೆ. ಬಾಗಲಕೋಟೆ ತಾಲೂಕಿನ ಶಿರೂರು ಗ್ರಾಮದಲ್ಲಿ ಈ ಪ್ರಕರಣ ನಡೆದಿದೆ. ಈ ದುರಂತದಲ್ಲಿ ರೇಣುಕಾ ಮಾದರ (45) ಎಂಬಾಕೆ ಸಾವಿಗೀಡಾಗಿದ್ದಾರೆ. ಈಕೆ ಕೂಲಿ ಕೆಲಸಕ್ಕಾಗಿ ಬೇರೆ ಕಡೆಯಿಂದ ಬಂದಿದ್ದರು. ಇದನ್ನೂ ಓದಿ: ಮತ್ತೊಂದು ಟ್ರ್ಯಾಕ್ಟರ್​ ದುರಂತ: ಉಳುವಾಗ ರೋಟರ್ ಬ್ಲೇಡ್​ಗೆ ಸಿಲುಕಿ ವ್ಯಕ್ತಿ ಸ್ಥಳದಲ್ಲೇ ಸಾವು.. … Continue reading ಯಂತ್ರಕ್ಕೆ ಸೀರೆ ಸಿಲುಕಿ ಪ್ರಾಣ ಕಳ್ಕೊಂಡ ಮಹಿಳೆ; ಗೋವಿನಜೋಳ ರಾಶಿ ಮಷಿನ್​ಗೆ ಸಿಕ್ಕಿ ದೇಹ ಛಿದ್ರ..