ಮೂವರು ಮಕ್ಕಳನ್ನು ನೀರಿನ ಪಾತ್ರೆಯಲ್ಲಿ ಮುಳುಗಿಸಿ ಕೊಂದು, ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡ ಮಹಿಳೆ

ಕೊಪ್ಪಳ: ಜಿಲ್ಲೆಯ ಕುಕನೂರು ತಾಲೂಕು ಯರೇಹಂಚಿನಾಳ ಗ್ರಾಮದಲ್ಲಿ ತಾಯಿಯೊಬ್ಬಳು ಮೂವರು ಮಕ್ಕಳನ್ನು ಕೊಂದು, ತಾನೂ ಕೂಡ ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ನಡೆದಿದೆ.

ಅಕ್ಷತಾ (6), ಕಾವೇರಿ (4), ನಾಗರಾಜ (2) ಮೃತ ಮಕ್ಕಳು. ಯಲ್ಲಮ್ಮ ಬಾರಕೇರ (28) ಆತ್ಮಹತ್ಯೆ ಮಾಡಿಕೊಂಡವರು.

ಹಿರಿಯ ಮಗಳನ್ನು ಕುಡಿವ ನೀರಿನ ಪಾತ್ರೆಯಲ್ಲಿ ಮುಳುಗಿಸಿ, ಎರಡನೇ ಮಗಳನ್ನು ಬಕೆಟ್​ನಲ್ಲಿ ಮತ್ತು ಮೂರನೇ ಮಗನನ್ನು ನೀರಿ‌ನ ಪಾತ್ರೆಯಲ್ಲಿ ಮುಳಗಿಸಿ ಹತ್ಯೆಗೈದಿದ್ದಾಳೆ. ಬಳಿಕ ಅದೇ ಸ್ಥಳದಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಸೋಮವಾರ ತಡರಾತ್ರಿ ಪ್ರಕರಣ ನಡೆದಿದ್ದು, ಪತಿ ಮನೆಯ ಹೊರಗಡೆ ಮಲಗಿದ್ದಾಗ ಮಹಿಳೆ ಈ ಕೃತ್ಯ ಎಸಗಿದ್ದಾಳೆ. ಕೌಟುಂಬಿಕ ಕಲಹದಿಂದ ಈ ಘಟನೆ ನಡೆದಿದೆ ಎಂದು ಶಂಕಿಸಲಾಗಿದೆ. ಕುಕನೂರು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *