ನೆಲಮಂಗಲ: ಇಲ್ಲೊಂದು ಕೊಲೆ ನಡೆದ 50 ದಿನಗಳ ಬಳಿಕ ಕೊಲೆಗೀಡಾದವನ ಅಸ್ಥಿಪಂಜರ ಪತ್ತೆಯಾಗಿದ್ದು, ಇಬ್ಬಿಬ್ಬರ ಜತೆ ಅಕ್ರಮ ಸಂಬಂಧ ಹೊಂದಿದ್ದಾಕೆಯೇ ಕೊಲೆಗಾತಿ ಎಂಬುದು ಪತ್ತೆಯಾಗಿದೆ. ಈ ಕೊಲೆಗೆ ಸಂಬಂಧಿಸಿದಂತೆ ಮಹಿಳೆಯೊಬ್ಬಳ ಸಹಿತ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ರಾಯಚೂರು ಮೂಲದ ದೊಡ್ಡಲಿಂಗಪ್ಪ (45) ಕೊಲೆಯಾದ ವ್ಯಕ್ತಿ. ಲಕ್ಷ್ಮೀ (35) ಮತ್ತು ವೆಂಕಟೇಶ್ (40) ಕೊಲೆ ಆರೋಪಿಗಳು. ಲಕ್ಷ್ಮೀಗೆ ವೆಂಕಟೇಶ್ ಜತೆಗಷ್ಟೇ ಅಲ್ಲದೆ, ದೊಡ್ಡಲಿಂಗಪ್ಪ ಜತೆಗೂ ಅಕ್ರಮ ಸಂಬಂಧ ಇತ್ತೆಂದು ಹೇಳಲಾಗಿದೆ. ಜು. 2ರಂದು ತುಮಕೂರಿನ ಜಯನಗರ ಠಾಣೆ ವ್ಯಾಪ್ತಿಯಲ್ಲಿ ಈ ಕೊಲೆ ನಡೆದಿದ್ದು, ಇಂದು ಅಸ್ಥಿಪಂಜರ ಪತ್ತೆಯಾಗಿದೆ.
ಅಂದು ತನ್ನ ಮನೆಗೆ ದೊಡ್ಡಲಿಂಗಪ್ಪನ ತಲೆ ಮೇಲೆ ಲಕ್ಷ್ಮೀ ಹಾಗೂ ವೆಂಕಟೇಶ್ ಜತೆಯಾಗಿ ಕಲ್ಲು ಎತ್ತಿ ಹಾಕಿ ಭೀಕರವಾಗಿ ಕೊಲೆ ಮಾಡಿದ್ದರು. ಬಳಿಕ ದೊಡ್ಡಲಿಂಗಪ್ಪನ ಬೈಕ್ನಲ್ಲೇ ಆತನ ಶವವನ್ನು ಸಾಗಿಸಿ, ನೆಲಮಂಗಲದ ಕಳಲುಘಟ್ಟ ಬ್ರಿಡ್ಜ್ ಕೆಳಗೆ ಎಸೆದು ಹೋಗಿದ್ದರು. ದೊಡ್ಡಲಿಂಗಪ್ಪನ ಪತ್ನಿ ಯಲ್ಲಮ್ಮ ಪತಿ ಕಾಣೆಯಾಗಿರುವ ಕುರಿತು ಜು.9ರಂದು ಪೊಲೀಸರಿಗೆ ದೂರು ನೀಡಿದ್ದರು. ಅಲ್ಲದೆ ಅಕ್ರಮ ಸಂಬಂಧ ಹೊಂದಿದ್ದ ಲಕ್ಷ್ಮೀ ಬಗ್ಗೆಯೂ ಅನುಮಾನ ವ್ಯಕ್ತಪಡಿಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಇಳಿದಿದ್ದ ಪೊಲೀಸರು ಲಕ್ಷ್ಮೀ-ವೆಂಕಟೇಶ್ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಕೊಲೆ ಪ್ರಕರಣ ಬಾಯಿಬಿಟ್ಟಿದ್ದಾರೆ. ಆರೋಪಿಗಳು ನೀಡಿದ್ದ ಮಾಹಿತಿ ಮೇರೆಗೆ ಶವ ಎಸೆಯಲಾಗಿದ್ದ ಸ್ಥಳಕ್ಕೆ ತುಮಕೂರಿನ ಜಯನಗರ ಪೊಲೀಸರು ತೆರಳಿ ಸ್ಥಳ ಮಹಜರು ನಡೆಸಿದ್ದಾರೆ.
ಲಕ್ಷ್ಮಿಯ ತಂದೆಗೆ ದೊಡ್ಡಲಿಂಗಯ್ಯ 30 ಸಾವಿರ ರೂ. ಸಾಲ ನೀಡಿದ್ದರು. ಅಲ್ಲದೆ ಕೊಟ್ಟ ಹಣ ವಾಪಸ್ ಕೇಳುತ್ತಿದ್ದರು. ಜತೆಗೆ ಬೇರೆ ವಿಚಾರಗಳಲ್ಲೂ ತೊಂದರೆ ಕೊಡುತ್ತಿದ್ದರು ಎನ್ನಲಾಗಿದೆ. ಮಾತ್ರವಲ್ಲದೆ ಇಬ್ಬರ ಅನೈತಿಕ ಸಂಬಂಧಕ್ಕೂ ಆತ ಅಡ್ಡಿಯಾಗುತ್ತಾರೆ ಅಂತ ಇಬ್ಬರೂ ಸೇರಿ ಕೊಲೆ ಮಾಡಿದ್ದಾಗಿ ವಿಚಾರಣೆ ವೇಳೆ ತಿಳಿದುಬಂದಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
ಸೈಕ್ಲೋನ್ ಎಫೆಕ್ಟ್‌ನಿಂದ ರಾಜ್ಯದಲ್ಲಿ ಮಳೆ; ನಾಳೆ ಕರಾವಳಿಯಲ್ಲಿ ಯೆಲ್ಲೋ ಅಲರ್ಟ್
ಎಮ್ಮೆಗೆ ಬುಲೆಟ್ ಡಿಕ್ಕಿ: ಎಮ್ಮೆ ಸ್ಥಳದಲ್ಲೇ ಸಾವು, ನಾಲ್ವರಿಗೆ ಗಾಯ, ತಾಯಿ-ಮಗು ಪರಿಸ್ಥಿತಿ ಚಿಂತಾಜನಕ..