ಆಸ್ಪತ್ರೆಗೆ ರೋಗಿ ಶಿಪ್ಟ್ ಮಾಡಲು ಜೀರೋ ಟ್ರಾಫಿಕ್


ಶಿವಮೊಗ್ಗ: ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಮಹಿಳೆಯೊಬ್ಬರನ್ನು ಮಣಿಪಾಲ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ಯಲು ಪೊಲೀಸ್ ಇಲಾಖೆ ಜೀರೋ ಟ್ರಾಫಿಕ್ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದಿದೆ.

ಸಾಗರ ತಾಲೂಕು ಕಾರ್ಗಲ್ ಸಮೀಪದ ಮಕ್ಕಿಮನೆ ಗ್ರಾಮದ ಸುಜಾತಾ (32) ಎಂಬುವರು ಎರಡು ದಿನಗಳ ಹಿಂದೆ ಕಲುಷಿತ ನೀರು ಕುಡಿದು ಅಸ್ವಸ್ಥರಾಗಿದ್ದರು. ಅವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೂತ್ರಪಿಂಡದ ಸಮಸ್ಯೆಯನ್ನು ಗುರುತಿಸಿದ ಶಿವಮೊಗ್ಗದ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ತ್ವರಿತವಾಗಿ ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯಲು ಸಲಹೆ ಮಾಡಿದ್ದರು.

ಎಸ್ಪಿ ಅಭಿನವ ಖರೆ ಅವರನ್ನು ಭೇಟಿ ಮಾಡಿ ಪರಿಸ್ಥಿತಿ ವಿವರಿಸಿದ ಸುಜಾತಾ ಅವರ ಪತಿ ಪದ್ಮರಾಜ್, ಜೀರೋ ಟ್ರಾಫಿಕ್ ವ್ಯವಸ್ಥೆಗೆ ಮನವಿ ಮಾಡಿಕೊಂಡರು.

ತಕ್ಷಣ ರೋಗಿಯನ್ನು ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯಲು ಎಸ್ಪಿ ಅಭಿನವ ಖರೆ ಜೀರೋ ಟ್ರಾಫಿಕ್ ವ್ಯವಸ್ತೆ ಮಾಡಿದರು. ಶಿವಮೊಗ್ಗದಿಂದ ಆಗುಂಬೆವರೆಗೂ ಆಂಬ್ಯುಲೆನ್ಸ್​ನ ಮುಂದೆ ಮೂರು ಪೊಲೀಸ್ ವಾಹನಗಳನ್ನು ಕಳುಹಿಸಲಾಯಿತು. ಶಿವಮೊಗ್ಗ ಜಿಲ್ಲೆ ಗಡಿ ಮುಕ್ತಾಯವಾದ ಬಳಿಕ ಉಡುಪಿ ಜಿಲ್ಲೆ ಪೊಲೀಸರು ಶಿವಮೊಗ್ಗ ಪೊಲೀಸರಂತೆಯೇ ಟ್ರಾಫಿಕ್ ಸಮಸ್ಯೆಯಾಗದಂತೆ ಅಂಬ್ಯುಲೆನ್ಸ್ ಅಡೆತಡೆ ಇಲ್ಲದೆ ಮಣಿಪಾಲ ಆಸ್ಪತ್ರೆ ತಲುಪುವ ವ್ಯವಸ್ಥೆ ಮಾಡಿದರು.

Leave a Reply

Your email address will not be published. Required fields are marked *