ಕಷ್ಟ ಎಂದು ಕಿಡ್ನಿ ಮಾರಲಿಕ್ಕೆ ಮುಂದಾದ ಮಹಿಳೆಗೇ ಮೋಸ ಮಾಡಿದ್ರು; ನಯವಾಗೇ 7.97 ಲಕ್ಷ ರೂ. ಪಡೆದ ಸೈಬರ್ ವಂಚಕರು

ಬೆಂಗಳೂರು: ಕಿಡ್ನಿ ಕೊಟ್ಟರೆ ಒಂದು ಕೋಟಿ ರೂಪಾಯಿ ಕೊಡುವುದಾಗಿ ಮಹಿಳೆಗೆ ಆಮಿಷವೊಡ್ಡಿದ ಸೈಬರ್ ಕಳ್ಳರು, ಆಕೆಯಿಂದ 7.97 ಲಕ್ಷ ರೂ. ಪಡೆದು ವಂಚನೆ ಮಾಡಿದ್ದಾರೆ. ವೈಯಾಲಿಕಾವಲ್‌ನ 36 ವರ್ಷದ ಮಹಿಳೆ ವಂಚನೆಗೆ ಒಳಗಾದವರು. ಸಾಮಾಜಿಕ ಜಾಲತಾಣದಲ್ಲಿ ಕಿಡ್ನಿ ಮಾರಾಟದ ಬಗ್ಗೆ ಜಾಹೀರಾತು ನೋಡಿದ ಮಹಿಳೆ, ಅದರಲ್ಲಿನ ಮೊಬೈಲ್​ಫೋನ್​ ನಂಬರ್‌ಗೆ ಕರೆ ಮಾಡಿದ್ದಾರೆ. ಕರೆ ಸ್ವೀಕರಿಸಿದಾಕೆ ಡಾ.ಸೀಮಾ ರೈ ಎಂದು ಪರಿಚಯ ಮಾಡಿಕೊಂಡು, ಕಿಡ್ನಿ ಹೊಂದಾಣಿಕೆಯಾದರೆ 1 ಕೋಟಿ ರೂ. ಕೊಡುವುದಾಗಿ ಭರವಸೆ ನೀಡಿದ್ದಾರೆ. ಆನಂತರ ನೋಂದಣಿ ಮಾಡಿಕೊಳ್ಳಲು … Continue reading ಕಷ್ಟ ಎಂದು ಕಿಡ್ನಿ ಮಾರಲಿಕ್ಕೆ ಮುಂದಾದ ಮಹಿಳೆಗೇ ಮೋಸ ಮಾಡಿದ್ರು; ನಯವಾಗೇ 7.97 ಲಕ್ಷ ರೂ. ಪಡೆದ ಸೈಬರ್ ವಂಚಕರು