ಮದುವೆಯಾದರೂ ಬಿಡಲಿಲ್ಲ ಆಕೆ ಮೊದಲ ಪ್ರೇಮಿಯ ಸಂಗ, ಪಾಗಲ್​ ಪ್ರೇಮಿ ಇಟ್ಟ ಬೆಂಕಿಗೆ ಬಲಿಯಾದ ಮಹಿಳೆ

ಬೆಳಗಾವಿ: ಆಕೆಗೆ ಮದುವೆಯಾಗಿ ನಾಲ್ಕು ವರ್ಷಗಳಾಗಿದ್ದವು. ಚೆಂದನೆಯ ಗಂಡ, ಅಚ್ಚುಕಟ್ಟಾದ ಸಂಸಾರ ಇದ್ದರೂ ಆಕೆ ತನ್ನ ಮೊದಲ ಪ್ರೇಮಿಯೊಂದಿಗಿನ ಪ್ರಣಯದಾಟವನ್ನು ಮುಂದುವರಿಸಿದ್ದಳು. ಕೊನೆಗೆ ಇದುವೇ ಆಕೆ ಮುಳುವಾಗಿ, ಪಾಗಲ್​ ಪ್ರೇಮಿ ಇಟ್ಟ ಬೆಂಕಿಯಲ್ಲಿ ಬೆಂದು ಹೋಗಿದ್ದಾಳೆ.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೊಕಟನೂರು ಗ್ರಾಮದ ಸುರೇಖಾ ಮಹಾಂತೇಶ್​ ಐಹೊಳೆ (30) ಕೊಲೆಯಾದಾಕೆ. ಈಕೆಯ ಪ್ರೇಮಿ ರಾಜು ದೊಡ್ಡಮನಿ ಈಗ ತಲೆಮರೆಸಿಕೊಂಡಿದ್ದಾನೆ.

ಸುರೇಖಾ ಮತ್ತು ರಾಜು ಮೊದಲಿನಿಂದಲೂ ಪ್ರೀತಿಸುತ್ತಿದ್ದರು. ಆದರೆ, ಮನೆಯವರ ಒತ್ತಾಯಕ್ಕೆ ಮಣಿದು ಬೇರೆಯವರನ್ನು ವಿವಾಹವಾಗಿದ್ದರು. ಆದರೂ ಇವರಿಬ್ಬರ ನಡುವಿನ ಆಕರ್ಷಣೆ, ಪ್ರೇಮದ ಉತ್ಕಟತೆ ಕಡಿಮೆಯಾಗಿರಲಿಲ್ಲ. ಹೀಗಾಗಿ ಇಬ್ಬರೂ ಅನೈತಿಕ ಸಂಬಂಧವನ್ನು ಮುಂದುವರಿಸಿದ್ದರು.

ಕೆಲದಿನಗಳ ಹಿಂದೆ ಸುರೇಖಾ ಮತ್ತು ರಾಜು ನಡುವೆ ಕ್ಷುಲ್ಲಕ ಕಾರಣಕ್ಕೆ ಮನಸ್ತಾಪ ಉಂಟಾಗಿತ್ತು. ಇದರಿಂದ ಬೇಸತ್ತಿದ್ದ ರಾಜು, ಶುಕ್ರವಾರ ತಡರಾತ್ರಿ ಸುರೇಖಾ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ. ವಿಷಯ ತಿಳಿದ ಸುರೇಖಾ ಮನೆಯವರು ಆಕೆಯನ್ನು ತಕ್ಷಣವೇ ಮೀರಜ್​ನ ಆಸ್ಪತ್ರೆಗೆ ದಾಖಲಿಸಿದ್ದರಾದರೂ, ಶೇ.90ಕ್ಕೂ ಹೆಚ್ಚು ಸುಟ್ಟಗಾಯಗಳಿಂದ ಬಳಲುತ್ತಿದ್ದ ಆಕೆ ಶನಿವಾರ ಮುಂಜಾನೆ ಮೃತಪಟ್ಟಿದ್ದಾಳೆ. ಐಗಳಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ.

One Reply to “ಮದುವೆಯಾದರೂ ಬಿಡಲಿಲ್ಲ ಆಕೆ ಮೊದಲ ಪ್ರೇಮಿಯ ಸಂಗ, ಪಾಗಲ್​ ಪ್ರೇಮಿ ಇಟ್ಟ ಬೆಂಕಿಗೆ ಬಲಿಯಾದ ಮಹಿಳೆ”

  1. ಧರ್ಮಸ್ಥಳದ ಮಂಜುನಾಥನೂ ಮುನಿದು ಎದುರುಬಿದ್ದಿದ್ದಾನೆ.

Leave a Reply

Your email address will not be published. Required fields are marked *