ಪುಣೆ: ಇತ್ತೀಚೆಗಂತೂ ಸಾಮಾಜಿಕ ಜಾಲಾತಾಣಗಳು ಕೊವಿಡ್-19ಗೆ ಸಂಬಂಧಪಟ್ಟ ವಿಡಿಯೋ, ಫೋಟೋಗಳಿಂದ ತುಂಬಿ ಹೋಗಿವೆ. ಅದರಲ್ಲೂ ಕರೊನಾ ಗೆದ್ದು ಬಂದವರ ಬಗ್ಗೆ ಹಲವು ಪೋಸ್ಟ್ಗಳು ಹರಿದಾಡುತ್ತಿವೆ.
ಇದೀಗ ಕರೊನಾದಿಂದ ಚೇತರಿಸಿಕೊಂಡು ಮನೆಗೆ ಬಂದ ಅಕ್ಕನನ್ನು, ತಂಗಿ ಸ್ವಾಗತಿಸಿದ ವಿಭಿನ್ನ ರೀತಿ ನೆಟ್ಟಿಗರ ಮನ ಗೆದ್ದಿದೆ. ಕರೊನಾ ಸೋಂಕಿನಿಂದ ಆಸ್ಪತ್ರೆ ಸೇರಿ, ಗುಣಮುಖರಾಗಿ ವಾಪಸ್ ಬಂದವರನ್ನು ಅವರ ಕುಟುಂಬದವರು ಪ್ರೀತಿಯಿಂದ, ಆರತಿ ಎತ್ತಿ ಬರಮಾಡಿಕೊಂಡ ಘಟನೆಗಳು ಹಲವು ನಡೆದಿವೆಯಾದರೂ..ಈ ಹುಡುಗಿ ಟಪ್ಪಾಂಗುಚ್ಚಿ ಡ್ಯಾನ್ಸ್ ಮೂಲಕ ಅಕ್ಕನನ್ನು ಮನೆಗೆ ಕರೆದುಕೊಂಡ ಬಂದ ರೀತಿ ಇನ್ನಷ್ಟು ಮೆಚ್ಚುಗೆಗೆ ಪಾತ್ರವಾಗಿದೆ.
ವಿಡಿಯೋವನ್ನು ಐಪಿಎಸ್ ಅಧಿಕಾರಿ ದೀಪಾಂಶು ಕಾಬ್ರಾ ಅವರು ತಮ್ಮ ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡು, ಈ ಅಕ್ಕ-ತಂಗಿಯ ಡ್ಯುಯೆಟ್ ಡ್ಯಾನ್ಸ್ ತುಂಬ ಇಷ್ಟವಾಯಿತು ಎಂದು ಹೇಳಿದ್ದಾರೆ. ಆದರ, ಪ್ರೀತಿ, ಶಕ್ತಿಯನ್ನು ತುಂಬಿಕೊಂಡ ಕುಟುಂಬದ ನಗುವನ್ನು ಯಾವ ಸಾಂಕ್ರಾಮಿಕ ಕಾಯಿಲೆಯಿಂದಲೂ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂಬುದು ಈ ವಿಡಿಯೋ ನೋಡಿದರೇ ತಿಳಿಯುತ್ತದೆ ಎಂದು ಹೇಳಿದ್ದಾರೆ.
ಇದು ಪುಣೆಯಲ್ಲಿ ನಡೆದ ಘಟನೆ. ಮಧ್ಯ ರಸ್ತೆಯಲ್ಲಿ ಭರ್ಜರಿ ಟಪ್ಪಾಂಗುಚ್ಚಿ ಡ್ಯಾನ್ಸ್ ಮಾಡಿದ 23 ವರ್ಷದ ಯುವತಿಯ ಮನೆಯಲ್ಲಿ ಒಟ್ಟು ಐದು ಮಂದಿಯಲ್ಲಿ ಕರೊನಾ ಸೋಂಕು ಕಾಣಿಸಿಕೊಂಡಿತ್ತು. ಎಲ್ಲರನ್ನೂ ಕೊವಿಡ್-19 ಸೆಂಟರ್ನಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಆಗ ಮನೆಯಲ್ಲಿ ಒಬ್ಬಳೇ ಇದ್ದ ಈಕೆಯನ್ನು ನೆರೆಹೊರೆಯವರು ತಾತ್ಸಾರದಿಂದ ನೋಡಿದ್ದರು. ಯಾರೂ ಸರಿಯಾಗಿ ಮಾತನಾಡಿಸುತ್ತಿರಲಿಲ್ಲ. ಊಟ, ತಿಂಡಿ ಆಯಿತಾ ಎಂದೂ ಕೇಳಿರಲಿಲ್ಲ. ತುಂಬ ಬೇಸರದಿಂದ ಕಾಲ ಕಳೆದಿದ್ದಳು. ಇದನ್ನೂ ಓದಿ: ಕಾರ್ಗಿಲ್ ವಿಜಯೋತ್ಸವಕ್ಕೆ 21 ವರ್ಷ: ಬೆಟ್ಟದ ಮೇಲೆ ದುಷ್ಮನ್, ತಳಭಾಗದಲ್ಲಿ ನಾವು…
ಅಕ್ಕ ಚೇತರಿಸಿಕೊಂಡು ಮನೆಗೆ ಬಂದಾಗ ನೆರೆಮನೆಯವರಿಗೆಲ್ಲ ಕೇಳುವಂತೆ ಹಾಡು ಹಾಕಿಕೊಂಡು…ಎಲ್ಲರೂ ನೋಡುವಂತೆ ನೃತ್ಯ ಮಾಡಿದ್ದು ಅದೇ ಉದ್ದೇಶಕ್ಕೆ. ಇಷ್ಟು ದಿನ ಒಂಟಿಯಾಗಿದ್ದ ತನ್ನನ್ನು ತಾತ್ಸಾರ ಮಾಡಿದ್ದವರಿಗೂ ಗೊತ್ತಾಗಲಿ ನನ್ನ ಅಕ್ಕ ವಾಪಸ್ ಬಂದಿದ್ದು ಎಂಬ ಕಾರಣಕ್ಕೆ ಅದ್ದೂರಿ ಸ್ವಾಗತ ನೀಡಿದ್ದಾಳೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.
ಆ ಯುವತಿ ಯಾವುದೇ ಕಾರಣಕ್ಕೆ ನೃತ್ಯ ಮಾಡಿರಲಿ..ಅವಳು ಪಾಸಿಟಿವಿಟಿಯನ್ನು ಹಂಚಿದ್ದಾಳೆ ಎಂದು ನೆಟ್ಟಿಗರು ಹೊಗಳಿದ್ದಾರೆ. ಅಷ್ಟೇ ಅಲ್ಲ, ಆಕೆಯ ನೃತ್ಯ ಕೌಶಲಕ್ಕೆ ಮಾರುಹೋಗಿದ್ದಾರೆ. ಎಂಥ ತಲೆಬಿಸಿ ಇದ್ದರೂ ಇವಳ ನೃತ್ಯ ಅದನ್ನು ಹೊಡೆದೋಡಿಸುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ. (ಏಜೆನ್ಸೀಸ್)
Just Loved the #SistersDuet!❤️
A worthy welcome of Elder Sis, returned after defeating #CoronaVirus.No Pandemic can reduce a nanometer of smile, of any family that cherishes such Warmth, Love & Energy. pic.twitter.com/cTkUGT8RPw
— Dipanshu Kabra (@ipskabra) July 19, 2020
ಇಮ್ಯೂನಿಟಿ ಹೆಚ್ಚಿಸಿಕೊಳ್ಳಬೇಕಾ? -FSSAI ಸೂಚಿಸಿದ ಈ ಹಣ್ಣು, ತರಕಾರಿಗಳನ್ನು ಪ್ರತಿದಿನ ಬಳಸಿ