ವಧು-ವರರ ಮಾಹಿತಿ ಜಾಲತಾಣದಲ್ಲಿ ಪರಿಚಯ; ಮಹಿಳೆಯ ಅಂಧಕ್ಕೆ ಮರುಳಾಗಿ ಮೋಸ ಹೋದವನ ಕತೆಯಿದು

ಹಾವೇರಿ: ವಧು-ವರರ ಮಾಹಿತಿ ಜಾಲತಾಣದಲ್ಲಿ ಪರಿಚಯವಾಗಿ ಮಹಿಳೆಯೊಬ್ಬಳು ಲಕ್ಷ ಲಕ್ಷ ಹಣವನ್ನು ವಂಚಿಸಿರುವ ಆರೋಪ ಕೇಳಿಬಂದಿದ್ದು, ಆಕೆಯ ವಿರುದ್ಧ ರಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ಹೈಪ್ರೋಫೈಲ್​ ದೋಖಾ ಕೇಸ್ ದಾಖಲಾಗಿದೆ.

ನಿರ್ಮಲಾ ಎಚ್.ಆರ್. ಎಂಬ ಮಹಿಳೆಯೇ ವಂಚಕಿ ಎಂದು ಆರೋಪಿಸಲಾಗಿದೆ. ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಗೊಲಾಳನಗರ ನಿವಾಸಿಯಾಗಿರುವ ಆರೋಪಿ ನಿರ್ಮಲಾ, ಹಾವೇರಿ ಜಿಲ್ಲೆಯ ರಟ್ಟಿಹಳ್ಳಿಯ ನಿವಾಸಿ ಶಿವಾನಂದ ಹಳ್ಳೆರ ಎಂಬ ವ್ಯಕ್ತಿಗೆ ವಂಚನೆ ಮಾಡಿದ್ದಾಳೆ ಎನ್ನಲಾಗಿದೆ.

ಕಳೆದ ಡಿಸೆಂಬರ್​ನಲ್ಲಿ ಉಕ್ಕಡಗಾತ್ರಿ ಕರಬಸವೇಶ್ವರ ದೇವಸ್ಥಾನದಲ್ಲಿ ವಿವಾಹದ ನಾಟಕವಾಡಿ, ಶಿವಾನಂದ ಬಳಿ 7 ಲಕ್ಷ 73 ಸಾವಿರ ರೂ. ಸಾಲ ಪಡೆದಿದ್ದಾಳೆ ಎಂಬ ಆರೋಪ ವ್ಯಕ್ತವಾಗಿದೆ. ಆದರೆ, ಸಾಲ ಪಡೆದಿರುವುದು ನಿಜ, ಹಣ ಹಿಂತಿರುಗಿಸುತ್ತೇನೆ, ಆದರೆ ಮದುವೆಯಾಗಿಲ್ಲ ಎಂದು ರಟ್ಟಿಹಳ್ಳಿ ಪೊಲೀಸ್ ಠಾಣೆಗೆ ಆರೋಪಿ ನಿರ್ಮಲ ಮುಚ್ಚಳಿಕೆ ಪತ್ರ ಬರೆದು ಕೊಟ್ಟಿದ್ದಾಳೆ.

ಆರೋಪಿ ನಿರ್ಮಲ ವಿರುದ್ಧ ಶಿವಾನಂದ ಎಂಬಾತ ವಂಚನೆ, ಮೋಸ ಹಾಗೂ ಜೀವ ಬೆದರಿಕೆ ಆರೋಪ ಮಾಡುತ್ತಿದ್ದಾರೆ. ಈ ಸಂಬಂಧ ರಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *