ಆರ್ಡರ್ ಮಾಡಿದ ಫುಡ್‌ ಜತೆಗೆ ಬಂತು ಭಾವನಾತ್ಮಕ ಲೆಟರ್​; ವೈರಲ್​ ಪತ್ರದಲ್ಲಿ ಏನಿದೆ ಗೊತ್ತೆ? Food

blank

Food : ಯಾರದ್ರೂ ಆನ್‌ಲೈನ್ ಮೂಲಕ ಫುಡ್​ ಆರ್ಡರ್​ ಮಾಡಿದ್ರೆ, ಆಹಾರ ಮನೆಗೆ ಬರುವುದು ಸಹಜ. ಆದರೆ, ಇಲ್ಲೊಬ್ಬ ಮಹಿಳೆಗೆ ತಾನು ಆರ್ಡರ್​ ಮಾಡಿದ ಫುಡ್​ ಜತೆ ಒಂದು ಮುದ್ದಾದ ಕೈ ಬರಹದ ಪತ್ರವೊಂದು​ ಕೂಡ ಬಂದಿದೆ. ಈ ಚೀಟಿಯಲ್ಲಿ ಬರೆದಿರುವ ಸಾಲುಗಳನ್ನು ಓದಿದ ಮಹಿಳೆ ಭಾವುಕಳಾಗಿದ್ದಾಳೆ. ಅಲ್ಲದೆ, ಈ ಬಗ್ಗೆ ಮಾಹಿತಿ ಹಂಚಿಕೊಂಡ ಬೆನ್ನಲ್ಲೇ ನೆಟ್ಟಿಗರು ಮಹಿಳೆಯ ಮೇಲೆ ಗರಂ ಆಗಿದ್ದಾರೆ.

ಆನ್‌ಲೈನ್ ಫುಡ್ ಆರ್ಡರ್ ಇದೀಗ ಹೊಸ ವಿಚಾರವಲ್ಲ. ಬಹುತೇಕರು ಇದನ್ನೇ ನೆಚ್ಚಿಕೊಂಡಿದ್ದಾರೆ. ಹೀಗೆ ಆನ್‌ಲೈನ್ ಫುಡ್ ಡೆಲಿವರಿ ವೇಳೆ, ಆಹಾರ ಸೇರಿದಂತೆ ಹಲವು ಸಂದರ್ಭಗಳಲ್ಲಿ ನಡೆದ ಘಟನೆಗಳು ಭಾರಿ ಸಂಚಲನ ಸೃಷ್ಟಿಸುತ್ತದೆ.
ಇದೀಗ ಮಹಿಳೆಯೊಬ್ಬರು ಆನ್‌ಲೈನ್ ಮೂಲಕ ಫುಡ್ ಆರ್ಡರ್ ಮಾಡಿ ಭಾವುಕರಾದ ಘಟನೆ ನಡೆದಿದೆ. ಇದಕ್ಕೆ ಕಾರಣ ಆಹಾರದ ಜತೆಗಿದ್ದ ಕೈ ಬರಹದ ಸಣ್ಣ ಚೀಟಿ. ಈ ಚೀಟಿಯಲ್ಲಿ ಬರೆದಿದ್ದ ಸಾಲುಗಳನ್ನು ಓದಿದಂತಹ ಮಹಿಳೆ ಭಾವುಕಳೆ ಭಾವುಕಳಾಗಿ ಪೋಸ್ಟ್​ ಮಾಡಿ ನೆಟ್ಟಿಗರ ಪ್ರಶ್ನೆಗೆ ಗುರಿಯಾಗಿದ್ದಾರೆ.

ಮಹಿಳೆ ತನ್ನ ಫುಡ್ ಆರ್ಡರ್ ಅನುಭವವನ್ನು ರೆಡ್ಡಿಟ್ ಮೂಲಕ ಹಂಚಿಕೊಂಡಿದ್ದಾರೆ. ಈ ಬಗ್ಗೆ ಆ ಮಹಿಳೆ ಉತ್ತರಿಸಿದ್ದು, ಪ್ರತಿ ವರ್ಷ ಹೋಳಿ ಹಬ್ಬವನ್ನು ನಾನು ಅಚರಿಸುತ್ತೇನೆ. ಆದರೆ, ಈ ಬಾರಿ ವಿಶ್ವವಿದ್ಯಾಲಯಕ್ಕೆ ತೆರಳುವ ಕಾರಣ ಆಚರಿಸಲು ಸಾಧ್ಯವಾಗಲಿಲ್ಲ. ವಿಶ್ವವಿದ್ಯಾಲಯದಲ್ಲಿ ಕೆಲಸವಿದ್ದ ಕಾರಣ ಹೋಳಿ ಆಚರಣೆ ಸಾಧ್ಯವಾಗಲಿಲ್ಲ. ಮಧ್ಯಾಹ್ನ ಹಸಿವು ಜೋರಾಗಿತ್ತು. ಹೀಗಾಗಿ ಆನ್‌ಲೈನ್ ಮೂಲಕ ಫುಡ್ ಆರ್ಡರ್ ಮಾಡಿಕೊಂಡೆ ಎಂದಿದ್ದಾರೆ.
ಫುಡ್ ಆರ್ಡರ್ ಮಾಡಿದ ಕೆಲ ಹೊತ್ತಿನ ಬಳಿಕ ಆಹಾರ ಕೈಸೇರಿದೆ. ಮೊದಲೇ ಹಸಿವಾಗಿತ್ತು. ಹೀಗಾಗಿ ಬೇಗನೆ ಪ್ಯಾಕ್ ಓಪನ್ ಮಾಡಿ ಆಹಾರ ಸವಿಯಲು ರೆಡಿಯಾಗಿದ್ದೆ. ಆಹಾರದ ಜೊತೆಗೆ ಕೈಬರಹದಲ್ಲಿ ಬರೆದಿರುವ ಚೀಟಿಯೊಂದು ಇತ್ತು. ಈ ಚೀಟಿಯಲ್ಲಿ ಅದು ಈ ಆಹಾರ ತಯಾರಿಸಿದ ನಿಶಾ ಅನ್ನೋ ಹುಡುಗಿಯ ಕುರಿತು ಬರೆಯಲಾಗಿದೆ ಅನ್ನೋದು ತಿಳಿಯಿತು ಎಂದಿದ್ದಾರೆ.

ವೈರಲ್​ ಪತ್ರದಲ್ಲೇನಿದೆ..?
ಈ ಚೀಟಿಯಲ್ಲಿ ಹುಡುಗಿ ನಿಶಾ, ಕೆಲ ಸಾಲುಗಳನ್ನು ಬರೆದಿದ್ದಳು. ಅದೇನೆಂದರೆ, ”ನಿಶಾ ನಮ್ಮಲ್ಲಿ ಕೇವಲ ಅಡುಗೆ ತಯಾರಿಸುವ ಸಿಬ್ಬಂದಿ ಮಾತ್ರವಲ್ಲ. ಆಕೆ ಕಾಲೇಜು ವ್ಯಾಸಾಂಗ ಮಾಡುತ್ತಿರುವ ಹುಡುಗಿ. ಆಕೆ ತನ್ನ ಕುಟುಂಬದ ಮೂವರು ಸದಸ್ಯರಿಗೆ ಬೆಂಬಲ ನೀಡಲು ಕಠಿಣ ಪರಿಶ್ರಮ ಪಡುತ್ತಿದ್ದಾಳೆ. ಆದರೆ, ಆಕೆಯ ಮುಖದಲ್ಲಿ ಯಾವತ್ತೂ ನಗು ಮಾಯವಾಗಿಲ್ಲ. ದಯವಿಟ್ಟು ಅವಳು ತಯಾರಿಸಿದ ಈ ಆಹಾರಕ್ಕೆ 5 ಸ್ಟಾರ್ ರೇಟಿಂಗ್ ಕೊಡಿ. ಪ್ರೀತಿಯಿಂದ ಅಡುಗೆ ಸಿಬ್ಬಂದಿ ತಂಡ ಎಂದು ಚೀಟಿಯಲ್ಲಿ ಬರೆಯಲಾಗಿತ್ತು”.
ಈ ಚೀಟಿ ನೋಡಿ ಮಹಿಳೆ ಭಾವುಕಳಾಗಿದ್ದಾರೆ. ಕಾರಣ ನಾನು ಹೋಳಿ ಹಬ್ಬ ಆಚರಣೆ ಮಾಡಲು ಸಾಧ್ಯವಾಗಿಲ್ಲ ಅನ್ನೋ ನೋವಿನಲ್ಲಿದ್ದೆ. ಆದರೆ ಹೋಳಿ ಹಬ್ಬದ ದಿನ ಈ ಹುಡುಗಿ ಕಷ್ಟಪಡುತ್ತಿದ್ದಾಳೆ. ಕುಟುಂಬಕ್ಕಾಗಿ, ಕುಟುಂಬ ಸದಸ್ಯರಿಗೆ ನರೆವಾಗಲು ಕೆಲಸ ಮಾಡುತ್ತಿದ್ದಾಳೆ. ವಿದ್ಯಾಬ್ಯಾಸ, ಕೆಲಸ, ಸಂಪಾದನೆ, ಕುಟುಂಬ ಹೀಗೆ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದಾಳೆ ಎಂದು ಈ ಮಹಿಳೆ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾಳೆ. ಆಹಾರವೂ ಚೆನ್ನಾಗಿತ್ತು. ಈ ಚೀಟಿ ಓದಿದ ಬಳಿಕ ಆಹಾರಕ್ಕೆ 5 ಸ್ಟಾರ್ ರೇಟಿಂಗ್ ಕೊಟ್ಟೆ ಎಂದು ಮಹಿಳೆ ಬರೆದುಕೊಂಡಿದ್ದಾರೆ.

ನೆಟ್ಟಿಗರು ಗರಂ ಆಗಿದ್ದೇಕೆ..?
ಈ ವಿಚಾರ ಪೋಸ್ಟ್ ಮೂಲಕ ಬಹಿರಂಗವಾಗುತ್ತಿದ್ದಂತೆ ನೆಟ್ಟಿಗರು ಗರಂ ಆಗಿದ್ದಾರೆ. ಇದು ಮಾರ್ಕೆಟಿಂಗ್ ಪ್ಲ್ಯಾನ್​. ಈ ಭಾವನಾತ್ಮಕ ಪ್ಲ್ಯಾನ್​ಗೆ ನೀವು 5 ಸ್ಟಾರ್ ಕೊಟ್ಟು ಮೋಸಹೋಗಿದ್ದೀರಿ. ಈ ಮಾರ್ಕೆಟಿಂಗ್ ಸ್ಟಾರ್ಟರ್ಜಿ ಹಲವು ರೆಸ್ಟೋರೆಂಟ್‌ಗಳು ಬಳಕೆ ಮಾಡುತ್ತಿದೆ. ಇದು ಸಾಮಾನ್ಯವಾಗಿದೆ. ಇಲ್ಲಿ ಸತ್ಯಾಂಶ ಕಾಣುತ್ತಿಲ್ಲ. ಈ ರೀತಿಯ ಪ್ಲಾನ್ ಹಳೆಯದಾದರೂ 10ರಲ್ಲಿ ಕನಿಷ್ಠ 3 ರಿಂದ 5 ಮಂದಿ 5 ಸ್ಟಾರ್ ರೇಟಿಂಗ್ ಕೊಡುತ್ತಾರೆ. ರೆಸ್ಟೋರೆಂಟ್ ಸಿಬ್ಬಂದಿಗಳ ಟಾರ್ಗೆಟ್ ಕೂಡ ಅಷ್ಟೇ ಇದೆ ಎಂದು ಹಲವರು ತರೇಹವಾರಿ ಕಾಮೆಂಟ್ ಮಾಡುತ್ತಿದ್ದಾರೆ.

Share This Article

ಒಂದು ದಿನಕ್ಕೆ ಒಬ್ಬರು ಎಷ್ಟು ಸಿಹಿ ತಿನ್ನಬೇಕು? ಇದರ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಹೇಳೊದೇನು? ಇಲ್ಲಿದೆ ಮಾಹಿತಿ..| WHO

WHO: ನೀವು ಪ್ರತಿದಿನ ಸಿಹಿ ತಿನ್ನುತ್ತಿದ್ದೀರಾ? ದಿನಂಪ್ರತಿ ಸಿಹಿತಿಂಡಿಗಳು-ಚಾಕಲೇಟ್​ ಸೇರಿದಂತೆ ಸಿಹಿ ಪಾನೀಯಗಳು ಸೇವನೆಯ ಅಭ್ಯಾಸವು…

ಅಡುಗೆಮನೆಯಲ್ಲಿ ಈ ಫೋಟೋವನ್ನು ಇಟ್ಟರೆ, ಮನೆಯಲ್ಲಿ ಅದೃಷ್ಟ, ಸಂಪತ್ತು ಸದಾ ತುಂಬಿರುತ್ತದಂತೆ! Vastu Tips

Vastu Tips: ಹಿಂದೂ ಧರ್ಮದಲ್ಲಿ ವಾಸ್ತು ಶಾಸ್ತ್ರಕ್ಕೆ ವಿಶೇಷ ಮಹತ್ವವಿದೆ. ವಾಸ್ತು ತತ್ವಗಳನ್ನು ಗಮನದಲ್ಲಿಟ್ಟುಕೊಂಡು ಪ್ರತಿಯೊಂದು…

ಫ್ರಿಡ್ಜ್​​​ನಲ್ಲಿಟ್ಟ ಮಾಂಸ ತಿನ್ನುತ್ತಿದ್ದೀರಾ? ನೀವು ಇದನ್ನು ಖಂಡಿತ ತಿಳಿದುಕೊಳ್ಳಬೇಕು..meat

meat: ಇತ್ತೀಚಿನ ದಿನಗಳಲ್ಲಿ ಪ್ರತಿ ಮನೆಯಲ್ಲೂ ರೆಫ್ರಿಜರೇಟರ್‌ಗಳು ಅತ್ಯಗತ್ಯವಾಗಿರುತ್ತವೆ. ಪ್ರತಿಯೊಂದು ವಸ್ತುವನ್ನು ಫ್ರಿಡ್ಜ್‌ನಲ್ಲಿ ಇಡುವುದನ್ನು ಅವರು…