ಜಪಾನ್ : ( emotional video ) ಗಂಡ ಮಾಡಿಟ್ಟ ಕರಿಯನ್ನು ಎರಡು ವರ್ಷ ಫ್ರಿಡ್ಜ್ನಲ್ಲಿಟ್ಟು ಎರಡು ವರ್ಷದ ಬಳಿಕ ಪತ್ನಿ ಅದನ್ನು ಸೇವಿಸಿದ ಘಟನೆ ಜಪಾನ್ನಲ್ಲಿ ನಡೆದಿದೆ. ಈ ಕುರಿತಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಆಕೆಯ ಪತಿ ಟೋನಿ ಅವಳಿಗಾಗಿ ಪ್ರೀತಿಯಿಂದ ವಿಶೇಷ ಅಡುಗೆಯನ್ನು ಮಾಡುವುದರಲ್ಲಿ ಬಹಳ ಪ್ರೀತಿ. ಎರಡು ವರ್ಷಗಳ ಹಿಂದೆ ಕೊನೆಯದಾಗಿ ಒಂದು ಕರಿಯನ್ನು ರೆಡಿ ಮಾಡಿದ್ದ. ಅದೇ ದಿನವೇ ತೀರಕೊಂಡುಬಿಟ್ಟ. ಆತನ ನೆನಪಿಗಾಗಿ ಆ ಸಾಂಬಾರನ್ನು ಅವನ ಪತ್ನಿ ಫ್ರೀಜರ್ನಲ್ಲಿ ಹಾಗೆಯೇ ಕಾದಿಟ್ಟಿದ್ದಳು. ಈಗ ಮಹಿಳೆ ಕೊನೆಗೂ ಎರಡು ವರ್ಷದಿಂದ ಕಾದಿಟ್ಟದ ಪತಿಯಿಂದ ಸಿದ್ಧಗೊಂಡ ಪ್ರೀತಿಯ ಹಾಗೂ ಕೊನೆಯ ಸಾಂಬಾರನ್ನು ಸೇವಿಸಿದ್ದಾಳೆ.
ತರಕಾರಿಯನ್ನು ಬಳಸಿ ಮಾಡಿದ ಕರಿ ಇಂದಿಗೂ ಅವನ ಪ್ರೀತಿಯಂತೆ ಇದು ಕೂಡ ರುಚಿ ಕಳೆದುಕೊಂಡಿಲ್ಲ. ತನ್ನ ಘಮವನ್ನು ಕಳೆದುಕೊಂಡಿಲ್ಲ ಎಂದು ಹೇಳಿಕೊಂಡಿದ್ದಾಳೆ. ತನ್ನ ಪತಿಯನ್ನು ಕ್ಷಣ ಕ್ಷಣಕ್ಕೂ ನೆನೆಪಿಸಿಕೊಂಡು ಭಾವುಕಳಾಗಿದ್ದಾಳೆ. ಈ ಮಹಿಳೆ ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿದ್ದಾಳೆ.
ಟೋನಿ ನನ್ನನ್ನು ಅಗಲು ದಿನ, ನಾನು ನನಗೆ ಜಪನೀಸ್ ಕರಿ ತಿನ್ನುವ ಆಸೆಯಾಗಿದೆ ಎಂದು ಹೇಳಿದ್ದೆ. ಅವನು ಅತ್ಯಂತ ಪ್ರೀತಿಯಿಂದ ನನಗಾಗಿ ತಯಾರಿಸಿ ಕೊಟ್ಟಿದ್ದ. ಅವನು ಅಗಲಿದ ನಂತರ ನಾನು ಅದನ್ನು ಸುಮ್ಮನೇ ಫ್ರೀಜರ್ನಲ್ಲಿ ಇಟ್ಟುಕೊಂಡಿದ್ದೆ. ಆದರೆ ಈಗ ಬೇರೆ ಕಡೆ ಹೋಗಬೇಕಾಗಿರ ಬಂದಿರುವುದರಿಂದ ನಾನು ಕೊನೆಗೂ ಅದನ್ನು ಸೇವಿಸಬೇಕಾಯ್ತು ಎಂದು ಮಹಿಳೆ, ಪತಿ ತಯಾರಿಸಿದ್ದ ಕೊನೆಯ ಸಾಂಬಾರನ್ನು ಹಾಗೆಯೇ ಸೇವಿಸಿ ಅದನ್ನು ವಿಡಿಯೋ ಮಾಡಿ ಇನ್ಸ್ಟಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.