ಕೊಲಂಬೊ: ಬಾಯ್ಫ್ರೆಂಡ್ಗೆ ಫೋನ್ ಮಾಡುವುದನ್ನು ತಡೆಯಲು ಮೊಬೈಲ್ ಫೋನ್ ಕಿತ್ತುಕೊಂಡಿದ್ದಕ್ಕೆ ತಾಯಿಯ ವಿರುದ್ಧ ಅಸಮಾಧಾನಗೊಂಡ ಯುವತಿಯೊಬ್ಬಳು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಡಿ. ಹಾಶಿನಿ ಪಿಯಮಿಕಾ (20) ಮೃತ ಯುವತಿ. ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿರುವ ಘಟನೆ ಶ್ರೀಲಂಕಾದ ಪುಟ್ಟಾಲಮ್ನಲ್ಲಿ ಆಗಸ್ಟ್ 21ರಂದು ನಡೆದಿದೆ. ಹಾಶಿನಿ ಯುವಕನೊಬ್ಬನನ್ನು ಲವ್ ಮಾಡುತ್ತಿದ್ದಳು. ಆದರೆ, ಅದು ತಾಯಿಗೆ ಇಷ್ಟವಿರಲಿಲ್ಲ. ಹೀಗಾಗಿ ಸಂಬಂಧ ಮುರಿದುಕೊಳ್ಳುವಂತೆ ಮಗಳಿಗೆ ಹೇಳಿದ್ದಳು.
ಇದನ್ನೂ ಓದಿ: ನಿಶ್ಚಿತಾರ್ಥವಾಗಿದ್ರೂ ಬೇರೊಬ್ಬಳ ಜತೆ ತಿರುಗಾಟ: ಭಾವಿ ಪತಿಗೆ ತನ್ನ ಉಗ್ರರೂಪ ತೋರಿದ ಯುವತಿ!
ಫೋನ್ನಲ್ಲಿ ಮಾತನಾಡಬೇಡ ಅನೇಕ ಬಾರಿ ಹೇಳಿದರೂ ಸಹ ಹಾಶಿನಿ ಅದನ್ನೇ ಮಂದುವರಿಸಿದ್ದಳು. ಇದರಿಂದ ಕುಪಿತಗೊಂಡ ತಾಯಿ ಹಾಶಿನಿಯಿಂದ ಮೊಬೈಲ್ ಕಿತ್ತುಕೊಂಡು ಮರೆಯಾಗಿ ಇಟ್ಟಿದ್ದರು. ಎಷ್ಟೇ ಕೇಳಿಕೊಂಡರು ತಾಯಿ ಮೊಬೈಲ್ ಕೊಡದಿದ್ದಾಗ ಆಗಸ್ಟ್ 20ರಂದು ತಾಯಿ ಮತ್ತು ಮಗಳ ನಡುವೆ ವಾಗ್ವಾದ ನಡೆದಿದೆ. ಆದರೂ ತಾಯಿ ಫೋನ್ ಕೊಡಲು ನಿರಾಕರಿಸಿದಾಗ ಮನನೊಂದು ಹಾಶಿನಿ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾಳೆ.
ತಕ್ಷಣ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಮರುದಿನ ಚಿಕಿತ್ಸೆ ಫಲಕಾರಿಯಾಗದೇ ಸಾವಿಗೀಡಾಗಿದ್ದಾಳೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. (ಏಜೆನ್ಸೀಸ್)
ಚಳ್ಳಕೆರೆಯಲ್ಲಿ ಚಂದ್ರನ ಕುಳಿಗಳನ್ನು ಸೃಷ್ಟಿಸಲು ಇಸ್ರೋ ಪ್ಲ್ಯಾನ್: ಚಂದ್ರಯಾನ-3ಗೆ ಭರ್ಜರಿ ಸಿದ್ಧತೆ!