ರೈಲಿಗೆ ಸಿಲುಕಿ‌ ಅಪರಿಚಿತ ಮಹಿಳೆ ಸಾವು

ಹಾಸನ: ನಗರದ ಹೊಸ ಬಸ್ ನಿಲ್ದಾಣದ ಹತ್ತಿರ ರೈಲ್ವೆ ಹಳಿ ಮೇಲೆ ಅಪರಿಚಿತ ಮಹಿಳೆಯೊಬ್ಬರ ಶವ ಪತ್ತೆಯಾಗಿದ್ದು, ರೈಲಿಗೆ ಸಿಲುಕಿ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.

ಸುಮಾರು 55 ವರ್ಷದ ಅಪರಿಚಿತ ಮಹಿಳೆ ಶವ ಹಾಸನ- ಮೈಸೂರು ಮಾರ್ಗದ ಮೇಲೆ ಬಿದ್ದಿದ್ದು, ತಲೆ ಭಾಗಕ್ಕೆ ತೀವ್ರ ಗಾಯವಾಗಿದೆ.

ಯಾವುದೋ ರೈಲಿಗೆ ಸಿಕ್ಕಿ ಮೃತಪಟ್ಟಿರುವ ಸಾಧ್ಯತೆಯಿದ್ದು, ಮೈಸೂರಿನಿಂದ ಅರಸೀಕೆರೆಗೆ ಪ್ರಯಾಣಿಸುವ ಟಿಕೆಟ್ ಸ್ಥಳದಲ್ಲಿ ದೊರಕಿದೆ.

ಮೈಸೂರು ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.