ನೋಟು ರದ್ದು ಬವಣೆ, ಬ್ಯಾಂಕ್ ಕ್ಯೂನಲ್ಲಿ ಇದ್ದಾಗಲೇ ಹೆರಿಗೆ

ಕಾನ್ಪುರ: ಹಣ ಪಡೆಯಲು ಬ್ಯಾಂಕಿನಲ್ಲಿ ಬೆಳಗ್ಗೆಯಿಂದಲೂ ಕ್ಯೂನಲ್ಲಿ ನಿಂತಿದ್ದ ಮಹಿಳೆಯೊಬ್ಬರು ಸಂಜೆ ವೇಳೆಗೆ ಬ್ಯಾಂಕ್ನಲ್ಲೇ ಮಗುವಿಗೆ ಜನ್ಮ ನೀಡಿದ ಘಟನೆ ಉತ್ತರ ಪ್ರದೇಶದ ಕಾನ್ಪುರ ದೆಹತ್ ಜಿಲ್ಲೆಯಲ್ಲಿ ಶುಕ್ರವಾರ ಘಟಿಸಿದೆ.

ಸರ್ವೆಶ (30) ಎಂಬ ಮಹಿಳೆ ಮಗುವಿಗೆ ಜನ್ಮ ನೀಡಿದ್ದು, ಮಗು ಮತ್ತು ತಾಯಿ ಇಬ್ಬರು ಆರೋಗ್ಯದಿಂದಿದ್ದಾರೆ. ಆಕೆ ಹಣ ಪಡೆಯುವ ಸಲುವಾಗಿ ಗುರುವಾರ ಬ್ಯಾಂಕ್ಗೆ ತೆರಳಿದ್ದರು, ಆದರೆ ಹಣ ಸಿಗದಿದ್ದ ಕಾರಣ ಶುಕ್ರವಾರ ಮತ್ತೆ ಬ್ಯಾಂಕಿಗೆ ತೆರಳಿ ಕ್ಯೂನಲ್ಲಿ ನಿಂತಿದ್ದರು. ಬೆಳಗ್ಗೆಯಿಂದಲೂ ಕ್ಯೂನಲ್ಲಿ ನಿಂತಿದ್ದ ಸರ್ವೆಶ ಅವರಿಗೆ ಸಂಜೆ 4 ಗಂಟೆ ಸುಮಾರಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ತಕ್ಷಣ ಜನರು ಆಂಬ್ಯುಲೆನ್ಸ್ಗೆ ಕರೆ ಮಾಡಿದ್ದಾರೆ. ಆದರೆ ಆಂಬ್ಯುಲೆನ್ಸ್ ಸರಿಯಾದ ಸಮಯಕ್ಕೆ ಆಗಮಿಸದ ಕಾರಣ ಸ್ಥಳದಲ್ಲಿದ್ದ ಮಹಿಳೆಯರು ಈಕೆಗೆ ಹೆರಿಗೆ ಮಾಡಿಸಿದ್ದಾರೆ.

ನಂತರ ಪೊಲೀಸರು ತಾಯಿ ಮತ್ತು ಮಗುವನ್ನು ತಮ್ಮ ಜೀಪ್ನಲ್ಲಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಸರ್ವೆಶ ಅವರ ಪತಿ ಸೆಪ್ಟೆಂಬರ್ ತಿಂಗಳಿನಲ್ಲಿ ಅಪಘಾತದಲ್ಲಿ ಮೃತಪಟ್ಟಿದ್ದರು. ಅಪಘಾತದ ಪರಿಹಾರವಾಗಿ ಮೊದಲ ಕಂತಿನಲ್ಲಿ 2.75 ಲಕ್ಷ ರೂ.ಗಳನ್ನು ಪಾವತಿಸಲಾಗಿತ್ತು. ಹಾಗಾಗಿ ಆಕೆ ಹಣವನ್ನು ಪಡೆಯಲು ಬ್ಯಾಂಕಿಗೆ ಆಗಮಿಸಿದ್ದರು ಎಂದು ಆಕೆಯ ಅತ್ತೆ ತಿಳಿಸಿದ್ದಾರೆ.

– ಏಜೆನ್ಸೀಸ್

(ವೈವಿಧ್ಯಮಯ ಸುದ್ದಿಗಳಿಗೆ ವಿಜಯವಾಣಿ ಪತ್ರಿಕೆ ಓದಿರಿ)

Leave a Reply

Your email address will not be published. Required fields are marked *