ಹಾವೇರಿ: ಎರಡು ಬೈಕ್ಗಳ ನಡುವೆ ಡಿಕ್ಕಿಯಾದ ಪರಿಣಾಮ ಒಂದು ಬೈಕ್ನಲ್ಲಿದ್ದ ದಂಪತಿ ಕಾಲುವೆಗೆ ಉರುಳಿ ಬಿದ್ದು ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಹಾನಗಲ್ ತಾಲೂಕಿನ ಕುಂಟನಹೊಸಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು ಆಮ್ರೀನ್ ಬಾನು ಹಾವಣಗಿ (22) ಮೃತರು. ಇವರ ಪತಿ ಮೈನುದ್ದೀನ್ ಹಾವಣಗಿ (25) ಗಾಯಗೊಂಡಿದ್ದು ಅವರನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ದಂಪತಿಗೆ ಒಂದೂವರೆ ತಿಂಗಳ ಹಿಂದಷ್ಟೇ ವಿವಾಹವಾಗಿತ್ತು. ಇಂದು ಕುಂಟನಹೊಸಳ್ಳಿ ಗ್ರಾಮದಿಂದ ಅಕ್ಕಿಆಲೂರು ಆಸ್ಪತ್ರೆಗೆ ಬೈಕ್ನಲ್ಲಿ ತೆರಳುತ್ತಿದ್ದ ವೇಳೆ ದುರ್ಘಟನೆ ನಡೆದಿದೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.