ನವಜಾತ ಶಿಶುವಿನ ಜೀವಕ್ಕೆ ಕುತ್ತು ತಂದ ಅತಿಯಾದ ತಂಬಾಕು ಸೇವನೆ

ಅಹಮದಾಬಾದ್: ಆಘಾತಕಾರಿ ಘಟನೆ ಒಂದರಲ್ಲಿ ಗರ್ಬಾವಸ್ಥೆಯಲ್ಲಿರುವಾಗ ತಾಯಿಯೂ ಅತಿಯಾಗಿ ತಂಬಾಕು ಸೇವಿಸಿದ ಪರಿಣಾಮ ನವಜಾತ ಶಿಶು ಒಂದರ ಜನನವೂ ತ್ವರಿತವಾಗಿ ತುರ್ತು ವೈದ್ಯಕೀಯ ಪರಿಸ್ಥಿತಿಗೆ ತಿರುಗಿದ ಘಟನೆ ಗುಜರಾತಿನ ಮೆಹ್ಸಾನಾ ಜಿಲ್ಲೆಯಲ್ಲಿ ನಡೆದಿದೆ. ಮಗು ಹುಟ್ಟಿದ್ದ ಕೂಡಲೇ ಅಳದೆ ನೀಲಿ ಬಣ್ಣಕ್ಕೆ ತಿರುಗಿದೆ. ಕೆಲ ಕ್ಷಣದ ಬಳಿಕ ಮಗುವಿನ ರಕ್ತದೊತ್ತಡ ಕುಸಿಯಲು ಪ್ರಾರಂಭಿಸಿದ್ದು, ವೆಂಟಿಲೇಟರ್​ನಲ್ಲಿ ಇರಿಸಿ ಚಿಕಿತ್ಸೆ ಕೊಡಲು ವೈದ್ಯರು ಪ್ರಾರಂಭಿಸಿದ್ದಾರೆ. ಮಗುವನ್ನು ಉಳಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದ ವೈದ್ಯರು ನವಜಾತ ಶಿಶುವನ್ನು ಅಹಮದಾಬಾದಿನ ಟೆರ್​ಷಿಯರಿ ಆಸ್ಪತ್ರೆಗೆ ರವಾನಿಸಿದ್ದಾರೆ. … Continue reading ನವಜಾತ ಶಿಶುವಿನ ಜೀವಕ್ಕೆ ಕುತ್ತು ತಂದ ಅತಿಯಾದ ತಂಬಾಕು ಸೇವನೆ