ಸೇತುವೆ ಉದ್ಘಾಟನೆಗೆ ಆಹ್ವಾನ ನೀಡಿಲ್ಲ, ದೇವೇಗೌಡರ ಬೇಸರ

ಬೆಂಗಳೂರು: ತಾವು ಪ್ರಧಾನಿಯಾದ್ದಾಗ ಶಂಕು ಸ್ಥಾಪನೆ ಮಾಡಿದ್ದ ಬೋಗಿಬೀಲ್ ಸೇತುವೆ ಉದ್ಘಾಟನೆಗೆ ಆಹ್ವಾನಿಸಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಬೇಸರ ವ್ಯಕ್ತಪಡಿಸಿದ್ದಾರೆ. ನಾನು ಬೋಗಿಬೀಲ್ ಸೇತುವೆಗೆ ಅಡಿಗಲ್ಲು ಹಾಕಿ ಹಣ ಬಿಡುಗಡೆ ಮಾಡಿದ್ದೆ. ಕಾಶ್ಮೀರದಲ್ಲಿ ರೈಲ್ವೆ ಯೋಜನೆ, ದೆಹಲಿ ಮೆಟ್ರೋ ಯೋಜನೆಗಳಿಗೂ ನಾನೇ ಮಂಜೂರಾತಿ ನೀಡಿದ್ದೆ. ಈಗ ಅದೆಲ್ಲವನ್ನೂ ಮರೆತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶೀಘ್ರದಲ್ಲೇ 20 ರೂ. ಹೊಸ ನೋಟು ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್​ಬಿಐ) ಶೀಘ್ರದಲ್ಲೇ 20 ರೂಪಾಯಿ ಮುಖಬೆಲೆಯ ಹೊಸ ನೋಟುಗಳನ್ನು ಚಲಾವಣೆಗೆ ತರಲಿದೆ. 2016ರ ನವೆಂಬರ್​ನಲ್ಲಿ 1 ಸಾವಿರ ಮತ್ತು 500 ರೂ. ನೋಟು ಅಮಾನ್ಯೀಕರಣಗೊಳಿಸಿದ ನಂತರ ಹೆಚ್ಚಿನ ಭದ್ರತೆಯುಳ್ಳ ವಿವಿಧ ಮುಖಬೆಲೆಯ ಹೊಸ ನೋಟುಗಳನ್ನು

ಆರ್​ಬಿಐ ಚಲಾವಣೆಗೆ ತರುತ್ತಿದೆ. ಆರ್​ಬಿಐ ಈಗಾಗಲೆ 10, 50, 100, 200,500 ಮತ್ತು 2000 ರೂಪಾಯಿ ಮುಖಬೆಲೆಯ ಹೊಸ ನೋಟುಗಳನ್ನು ಚಲಾವಣೆಗೆ ತಂದಿದೆ. ಆರ್​ಬಿಐ ಮಾಹಿತಿ ಪ್ರಕಾರ, ರಾಷ್ಟ್ರದಲ್ಲಿ ಚಲಾವಣೆಯಲ್ಲಿರುವ ಒಟ್ಟಾರೆ ಕರೆನ್ಸಿಯ ಪೈಕಿ 20 ರೂಪಾಯಿ ಮುಖಬೆಲೆಯ ನೋಟುಗಳ ಪ್ರಮಾಣ ಶೇ.9.8 ಆಗಿದೆ. 2016ರ ಮಾರ್ಚ್ 31ರಲ್ಲಿ 20 ರೂ. ಮುಖಬೆಲೆಯ ಒಟ್ಟು 4.92 ದಶಲಕ್ಷ ನೋಟುಗಳು ಚಲಾವಣೆಯಲ್ಲಿದ್ದವು. 2018ರ ಮಾರ್ಚ್ ವೇಳೆಗೆ ಈ ಪ್ರಮಾಣ 10 ದಶಲಕ್ಷಕ್ಕೆ ಏರಿಕೆಯಾಗಿತ್ತು.

ಕನಿಷ್ಠ ಮಟ್ಟಕ್ಕೆ ಇಳಿದ ಡೀಸೆಲ್ ದರ

ನವದೆಹಲಿ: ಕಳೆದ ಕೆಲ ದಿನಗಳಿಂದ ಇಳಿಕೆಯಾಗುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಮಂಗಳವಾರ ಕೂಡ ಇಳಿಕೆ ದಾಖಲಿಸಿವೆ. ದೇಶದ ವಿವಿಧೆಡೆಗಳಲ್ಲಿ ಪೆಟ್ರೋಲ್ ಬೆಲೆ ಲೀಟರ್​ಗೆ 7 ಪೈಸೆ ಕಡಿಮೆಯಾದರೆ, ಡೀಸೆಲ್ ಬೆಲೆ ಮುಂಬೈನಲ್ಲಿ ಲೀಟರ್​ಗೆ 21 ಪೈಸೆ ಕಡಿಮೆಯಾಗಿದ್ದು, 2018ರ ಮಾರ್ಚ್ ನಂತರದಲ್ಲಿ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿದೆ. ದೆಹಲಿಯಲ್ಲಿ ಮಂಗಳವಾರ ಪೆಟ್ರೋಲ್ ಲೀಟರ್​ಗೆ -ಠಿ;69.79, ಡೀಸೆಲ್ -ಠಿ;63.83ರಂತೆ ಮಾರಾಟವಾಗಿದೆ.

ಸುನಾಮಿ, ಮೃತರ ಸಂಖ್ಯೆ 429ಕ್ಕೆ

ಜಕಾರ್ತಾ: ಇಂಡೋನೇಷ್ಯಾದಲ್ಲಿ ಸಂಭವಿಸಿದ್ದ ಸುನಾಮಿಯಲ್ಲಿ ಮೃತರ ಸಂಖ್ಯೆ 429ಕ್ಕೆ ಹೆಚ್ಚಳವಾಗಿದೆ. ಇನ್ನೂ 128 ಮಂದಿ ಕಾಣೆಯಾಗಿದ್ದು, 1,400ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಸುಂದಾ ಜಲಸಂಧಿಯಲ್ಲಿರುವ ಅನಾಕಾ ಕ್ರಾಕಟೌ ಎಂಬ ಜ್ವಾಲಮುಖಿ ಸ್ಪೋಟಿಸಿದ್ದರಿಂದ, ಆಳಸಮುದ್ರದಲ್ಲಿ ಉಂಟಾದ ಭೂಕುಸಿತ ಅಥವಾ ಅಗ್ನಿಪರ್ವತದ ಹೊರಭಾಗ ಕಳಚಿ ಸುಂದಾ ಜಲಸಂಧಿಯಲ್ಲಿ ಬಿದ್ದ ಪರಿಣಾಮ ಸುನಾಮಿ ಉಂಟಾಗಿತ್ತು. ಸ್ವಯಂಸೇವಕರು ಮತ್ತು ಸರ್ಕಾರಿ ಸಿಬ್ಬಂದಿ, ಬೀಚ್​ಗಳಲ್ಲಿ ಕುಸಿದಿರುವ ಕಟ್ಟಡಗಳು, ಹರಡಿರುವ ಅವಶೇಷಗಳಡಿ ಶವಗಳಿಗಾಗಿ ಶೋಧಿಸುತ್ತಿದ್ದಾರೆ.