ಬೀಳಗಿ: ಪ್ರತಿಯೊಬ್ಬರಿಗೆ ಗುರು ಇಲ್ಲದಿದ್ದರೆ ಮುಂದಿನ ಗುರಿ ಮುಟ್ಟಲು ಸಾಧ್ಯವಿಲ್ಲ. ನಮ್ಮ ಭಾರತೀಯ ಪರಂಪರೆಯಲ್ಲಿ ಗುರುವಿಗೆ ಮೊದಲನೇ ಸ್ಥಾನದಲ್ಲಿ ಕಂಡು ಗೌರವಿಸುವ ಸಂಸ್ಕೃತಿ ನಮ್ಮದಾಗಿದೆ ಎಂದು ಎಸ್.ಆರ್. ಪಾಟೀಲ ಮೆಡಿಕಲ್ ಕಾಲೇಜಿನ ಪ್ರಧಾನ ವ್ಯವಸ್ಥಾಪಕ (ಡೀನ್) ಡಾ. ಧರ್ಮರಾಯ ಇಂಗಳೆ ಹೇಳಿದರು.
ಬಾಡಗಂಡಿಯ ಎಸ್.ಆರ್. ಪಾಟೀಲ ಮೆಡಿಕಲ್ ಕಾಲೇಜು ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದಲ್ಲಿ ನಡೆದ ಡಾ. ಎಸ್. ರಾಧಾಕೃಷ್ಣ ಜಯಂತಿ ಹಾಗೂ ಶಿಕ್ಷಕರ ದಿನೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅಜ್ಞಾನ ಕಡೆಯಿಂದ ಸುಜ್ಞಾನದ ಕಡೆ ಕೊಂಡ್ಯೋಯುವನೇ ಗುರು. ಶಿಕ್ಷಕರು ತಮ್ಮ ಕರ್ತವ್ಯದ ಪರಿಪಾಲನೆ ಮಾಡುವ ಮೂಲಕ ಯುವ ಜನತೆಗೆ ಸರಿಯಾದ ಮಾರ್ಗದರ್ಶನ ನೀಡಬೇಕು ಎಂದರು.
ಎಸ್.ಆರ್. ಪಾಟೀಲ ಮೆಡಿಕಲ್ ಕಾಲೇಜು ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ವೈದಕೀಯ ಅಧೀಕ್ಷಕ ಡಾ. ವಿಜಯಾನಂದ ಹಳ್ಳಿ ಮಾತನಾಡಿ, ಸುಂದರ ಸಮಾಜ ಹಾಗೂ ಸಮೃದ್ಧ ದೇಶ ಹಾಗೂ ನಾಡನ್ನು ಕಟ್ಟುವ ಶಿಲ್ಪಿಗಳನ್ನು ತಯಾರು ಮಾಡುವ ಶಿಕ್ಷಕ ಹಾಗೂ ಮಾರ್ಗದರ್ಶನ ನೀಡುವ ಗುಗುವಿನ ಪಾತ್ರ ಮಹತ್ವದ್ದಾಗಿದೆ ಎಂದರು.
ಡಾ. ನಮ್ರತಾ ಸಸಾಲಟ್ಟಿ, ಡಾ. ರೇಶ್ಮಾ, ಸಿಎಂಒ ಎಂ. ಸಾಲದಳ್ಳಿ ಇತರರಿದ್ದರು.