ಹಿಡಕಲ್ ಡ್ಯಾಂ: ಯುವಶಕ್ತಿ ಬಳಕೆಯಿಂದ ಗ್ರಾಮಗಳ ಅಭಿವೃದ್ಧಿ

ಹಿಡಕಲ್ ಡ್ಯಾಂ: ಯುವಜನ ಶಕ್ತಿ ಸದ್ಭಳಕೆಯಿಂದ ಗ್ರಾಮಗಳ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಹುಕ್ಕೇರಿ ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ ದಂಡಿನ ಹೇಳಿದ್ದಾರೆ.

ಶುಕ್ರವಾರ ಸಮೀಪದ ಕಣವಿನಟ್ಟಿ ಗ್ರಾಮದಲ್ಲಿ, ಪಾಶ್ಚಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ಹಮ್ಮಿಕೊಂಡಿದ್ದ 2018-19ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಸಹಾಯಕರಿಗೆ ಸಹಾಯ ಮಾಡುವುದೇ ಎನ್‌ಎಸ್‌ಎಸ್ ಧ್ಯೇಯ. ಸೇವಾ ಮನೋಭಾವನೆ, ಶಿಸ್ತು, ಸಂಯಮ ಹಾಗೂ ಉತ್ತಮ ವ್ಯಕ್ತಿತ್ವ ನಿರ್ಮಾಣಕ್ಕೆ ಈ ಶಿಬಿರ ಸಹಕಾರಿಯಾಗಿದೆ. ಶಿಬಿರಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಹುಕ್ಕೇರಿ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಅರಿಹಂತ ಬಿರಾದರ, ಪಾಶ್ಚಾಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಬಿ.ವೈ.ಶಿರಹಟ್ಟಿ, ಬೆಳಗಾವಿ ಜಿಲ್ಲಾ ಕರವೇ ಉಪಾಧ್ಯಕ್ಷ ರಾಜು ನಾಶಿಪುಡಿ, ಶಿಕ್ಷಕರ ಸಂಘದ ಪ್ರತಿನಿಧಿ ಎಚ್.ಎಲ್.ಪೂಜೇರಿ ಮಾತನಾಡಿದರು.

ದೈಹಿಕ ಶಿಕ್ಷಣ ಸಹಾಯಕ ನಿರ್ದೇಶಕಿ, ರಾಷ್ಟ್ರೀಯ ಸೇವಾ ಯೋಜನೆ ಅಧಿಕಾರಿ ಪ್ರೊ. ಶಶಿರೇಖಾ ಪಿ.ಕೆ., ಶಿಬಿರದ ನಿಯೋಜಿತ ಕಾರ್ಯಕ್ರಮಗಳ ರೂಪರೇಷೆಗಳನ್ನು ವಿವರಿಸಿದರು.

ಸತ್ಯಪ್ಪ ಸನದಿ, ಎಸ್‌ಡಿಎಂಸಿ ಅಧ್ಯಕ್ಷ ಗೌರಾ ಅರ್ಜುನ ಸನದಿ, ಅಡಿವೆಪ್ಪ ಅಣ್ಣಪ್ಪ ಸನದಿ, ಮುಖ್ಯಾಧ್ಯಾಪಕಿ ಬಿ.ಡಿ.ಅಂಗಡಿ, ಡಿ.ಎಂ. ಹಜ್ಜೆ, ಆರ್.ಎ.ಮಿತ್ರನ್ನವರ, ಎಸ್.ಬಿ.ಪತ್ತಾರ, ಶಿವಾನಂದ ನಾಯಕ, ಶಿಕ್ಷಕ ಬಿ.ಬಿ.ವಾಳದವರ ಇತರರು ಇದ್ದರು. ಪ್ರಾಧ್ಯಾಪಕ ವಿ.ಬಿ.ಕುಪಾಟೆ ಸ್ವಾಗತಿಸಿದರು. ಉಪನ್ಯಾಸಕ ಎನ್.ಬಿ.ಭೂಮನ್ನವರ ನಿರೂಪಿಸಿದರು. ಕಣವಿನಟ್ಟಿ ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಸಂಗೊಳ್ಳಿ ರಾಯಣ್ಣನ ನಾಟಕದ ಸನ್ನಿವೇಶವನ್ನು ಪ್ರದರ್ಶನ ಮಾಡಿದರು.