More

    ಕಕಮರಿ: ರಾಷ್ಟ್ರೀಯ ಸೇವಾ ಯೋಜನೆ ಶಿಬಿರದಲ್ಲಿ ವಿದ್ಯಾರ್ಥಿಗಳು ಅಳವಡಿಸಿಕೊಳ್ಳುವ ಮೌಲ್ಯಗಳು ಕಲಿಕೆಗೆ ಪೂರಕವಾಗಲಿವೆ ಎಂದು ಸದ್ಗುರು ಅಭಿನವ ಗುರುಲಿಂಗಜಂಗಮ ಸ್ವಾಮೀಜಿ ಹೇಳಿದರು.

    ಸಮೀಪದ ಕನಮಡಿ ಗ್ರಾಮವನ್ನು ದತ್ತು ಪಡೆದು ಕಕಮರಿಯ ಸದ್ಗುರು ರಾಯಲಿಂಗೇಶ್ವರ ಸ್ವತಂತ್ರ ಪದವಿಪೂರ್ವ ಕಾಲೇಜು ವತಿಯಿಂದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಏಳು ದಿನಗಳ ಎನ್‌ಎಸ್‌ಎಸ್ ವಾರ್ಷಿಕ ಶಿಬಿರ ಉದ್ಘಾಟಿಸಿ ಮಾತನಾಡಿದರು.

    ವಿದ್ಯಾರ್ಥಿಗಳಿಗೆ ಜ್ಞಾನ ಸಂಪತ್ತಿಗಿಂತ ಮಿಗಿಲಾದದ್ದು ಬೇರೊಂದಿಲ್ಲ. ಜ್ಞಾನಬಲದಿಂದ ಆರೋಗ್ಯಕರ ಸಮಾಜ ನಿರ್ಮಿಸಬೇಕು ಎಂದರು.
    ಪ್ರಾಚಾರ್ಯ ಎಸ್.ಬಿ.ಬಸರಗಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಅಧ್ಯಕ್ಷ ಮಹಾನಿಂಗ ಜವನರ, ಗ್ರಾಪಂ ಉಪಾದ್ಯಕ್ಷೆ ಜಯಶ್ರೀ ಬಿರಾದಾರ, ಪಿಡಿಒ ಮಹೇಶ ಕಗ್ಗೋಡದವರ, ಗ್ರಾಪಂ ಸದಸ್ಯರಾದ ರಾಜಶ್ರೀ ಮಲಮೆ, ಭಾಗ್ಯಶ್ರೀ ಶಿರಡೋಗಿ, ಸಂಗೀತಾ ಪಟ್ಟಣಶೆಟ್ಟಿ, ಶಿವಪ್ಪ ಅವಟಿ, ವಿಮಲಾ ಕಾಂಬಳೆ, ಸೋಮಣ್ಣ ಅಗ್ರಾಣಿ, ಸುನಂದಾ ಭೋಸಲೆ, ಸಂಗಪ್ಪ ತುಂಗಳ, ಬೇಬಿ ತಳವಾರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts