Monday, 19th November 2018  

Vijayavani

ರಾಜಧಾನಿಯಲ್ಲಿ ಹಸಿರು ಕ್ರಾಂತಿ-ಸಿಎಂ ಎಚ್​ಡಿಕೆ, ಡಿಸಿಎಂ ಪರಮೇಶ್ವರ್​ಗೆ ಡೆಡ್​​ಲೈನ್-ಕೂಡಲೇ ಸ್ಥಳಕ್ಕೆ ಬರುವಂತೆ ರೈತರ ಪಟ್ಟು        ಸೈಟ್ ಕೇಳ್ತಿಲ್ಲ, BMW ಕಾರೂ ಕೇಳ್ತಿಲ್ಲ-ನಾವು ಕೇಳ್ತಿರೋದು ಬೆಳೆದ ಬೆಲೆಗೆ ಬೆಲೆಯಷ್ಟೇ-ಸಚಿವ ಕಾಶಂಪೂರ್​​ಗೆ ಮನವಿ ಸಲ್ಲಿಕೆ        ರೈತರು, ಹೆಣ್ಮಕ್ಕಳ ವಿಚಾರದಲ್ಲಿ ಗೌರವ ಇದೆ-ನನ್ನ ಹೇಳಿಕೆಯಲ್ಲಿ ಯಾವುದೇ ದುರುದ್ದೇಶ ಇಲ್ಲ-ಸಿಎಂ ಹೇಳಿಕೆ ಬಿಡುಗಡೆ        ಸಿಎಂ ಕೂಡಲೇ ಕ್ಷಮೆ ಕೇಳಬೇಕು-ನಾಳಿನ ಕೋರ್​​​ ಕಮಿಟಿ ಸಭೆಯಲ್ಲಿ ಹೋರಾಟದ ನಿರ್ಧಾರ-ಸರ್ಕಾರದ ವಿರುದ್ಧ ಗುಡುಗಿದ ಬಿಜೆಪಿ        ₹3,300 ಕೋಟಿ, 132 ಕಿ.ಮೀ. ದೂರ-ಗುರಗಾಂವ್​​ನಲ್ಲಿ ಎಕ್ಸ್​​ಪ್ರೆಸ್​​ ಹೈವೇ ಲೋಕಾರ್ಪಣೆಗೊಳಿಸಿದ ಪ್ರಧಾನಿ        ರೈಲು ಬರುವ ವೇಳೆ ಹಳಿ ಮಧ್ಯೆ ಮಲಗಿದ ಭೂಪ-ಪ್ರಾಣದ ಹಂಗು ತೊರೆದು ಹುಚ್ಚು ಸಾಹಸ-ಹೈದ್ರಾಬಾದ್​ನಲ್ಲೊಂದು ಮಿರ‍್ಯಾಕಲ್       
Breaking News

ಸಕಲ ಗೌರವಗಳೊಂದಿಗೆ ಯೋಧ ವಿನಾಯಕ ಅಂತ್ಯಕ್ರಿಯೆ

Tuesday, 10.07.2018, 9:44 PM       No Comments

ನೇಸರಗಿ: ದೆಹಲಿ ಎಂಇಜಿ ರೆಜಿಮೆಂಟ್ ಆರ್ಮಿ ಪೋರ್ಸ್‌ನಲ್ಲಿ ಕರ್ತವ್ಯದಲ್ಲಿದ್ದಾಗ ಹೃದಯಾಘಾತದಿಂದ ನಿಧನರಾದ ಯೋಧ ವಿನಾಯಕ ನಾಯ್ಕರ ಅವರ ಪಾರ್ಥಿವ ಶರೀರದ ಅಂತ್ಯಸಂಸ್ಕಾರ ಮಂಗಳವಾರ ಸ್ವಗ್ರಾಮ ಮುರಕಿಬಾವಿಯಲ್ಲಿ ಸಕಲ ವಿಧಿವಿಧಾನದಂತೆ ನೆರವೇರಿತು.

ಮುರಕಿಬಾವಿ ಗ್ರಾಮದ ಸಿದ್ಧಾರೂಢ ಮಠದ ಆವರಣದಲ್ಲಿ ಸಾರ್ವಜನಿಕ ದರ್ಶನಕ್ಕೆ ಇರಿಸಲಾಗಿತ್ತು. ಡಿಆರ್ ಪೊಲೀಸ್ ಪಡೆ ಮತ್ತು ಮಿಲಟರಿ ಪಡೆ ಯೋಧರು ಐದು ಸುತ್ತಿನ ಆಕಾಶದೆತ್ತರಕ್ಕೆ ಗುಂಡು ಹಾರಿಸಿ ಗೌರವ ಸಲ್ಲಿಸಿದರು. ಯೋಧನ ನಿಧನದ ಸುದ್ದಿ ಕೇಳಿ ಮುರಕಿಬಾಂವಿ ಗ್ರಾಮದಲ್ಲಿ ನಿರವಮೌನ ಆವತರಿಸಿತ್ತು. ಮಲ್ಲಾಪುರ ಚಿದಾನಂದ ಸ್ವಾಮೀಜಿ, ದಾಸ್ತಿಕೊಪ್ಪ ಜನಕರಾಜ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಹವಾಲ್ದಾರ ನಾಗೇಂದ್ರ ಎಂ.ಜಿ, ಸುಬೇದಾರ ರಾಮಪ್ಪ ಗನಿ, ಸಿದ್ದಪ್ಪ ಕುರಿ, ತಹಸೀಲ್ದಾರ ಪ್ರಕಾಶ ಗಾಯಕವಾಡ, ತಾ.ಪಂ ಸಹಾಯಕ ನಿರ್ದೆಶಕ ಸುಭಾಶ ಸಂಪಗಾಂವಿ, ಕಂದಾಯ ನಿರೀಕ್ಷಕ ವಿ.ಬಿ.ಬಡಗಾಂವಿ, ಜಿ.ಪಂ ಮಾಜಿ ಅಧ್ಯಕ್ಷ ಎಸ್.ಎಫ್.ದೊಡಗೌಡರ, ಗ್ರಾಪಂ ಅಧ್ಯಕ್ಷರು, ಸದಸ್ಯರು, ಪಿಡಿಒ, ಶಿಕ್ಷಕರು, ವಿದ್ಯಾರ್ಥಿಗಳು, ನೇಸರಗಿ ಪೊಲೀಸರು, ನಿವೃತ್ತ ಯೋಧರು, ಗ್ರಾಮಸ್ಥರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

Back To Top