More

  ‘ಆಕ್ಷನ್ ಕಟ್’ನಿಂದ ವಿದ್ಯಾರ್ಥಿಗಳಿಗೆ ಸದಾವಕಾಶ

  ಹುಬ್ಬಳ್ಳಿ: ನಗರದ ಕೆಎಲ್​ಇ ಸಂಸ್ಥೆಯ ಜಗದ್ಗುರು ಗಂಗಾಧರ ವಾಣಿಜ್ಯ ಮಹಾವಿದ್ಯಾಲಯದಲ್ಲಿ ರಾಜ್ಯಮಟ್ಟದ ಅಂತರ ಕಾಲೇಜ್ ಆಕ್ಷನ್ ಕಟ್ ಶಾರ್ಟ್ ಫಿಲ್ಮ್ (ಸ್ಟೂಡೆಂಟ್ ಅನ್ ಟೋಲ್ಡ್ ಸ್ಟೋರಿ) ಸ್ಪರ್ಧೆಯನ್ನು ಶನಿವಾರ ಏರ್ಪಡಿಸಲಾಗಿತ್ತು.

  ಪ್ರಾಚಾರ್ಯ ಪ್ರೊ. ಎಸ್.ಎಲ್. ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಲಾವಿದರು, ಛಾಯಾಗ್ರಾಹಕರು, ನಿರ್ದೇಶಕರು, ನಿರ್ವಪಕರು ಸೇರಿ ಸಿನಿಮಾ ಕ್ಷೇತ್ರದಲ್ಲಿ ಭವಿಷ್ಯದಲ್ಲಿ ವಿದ್ಯಾರ್ಥಿಗಳು ವಿವಿಧ ಸಾಧನೆ ಮಾಡಲು ಈ ಸ್ಪರ್ಧೆ ಅನುಕೂಲವಾಗಲಿದೆ ಎಂದರು.

  ಕೆಎಲ್​ಇ ಟೆಕ್ ಯುನಿರ್ವಸಿಟಿ (ಪ್ರಥಮ), ಆಕ್ಸ್​ಫರ್ಡ್ ಕಾಲೇಜ್​ನ ಬಿಸಿಎ ವಿಭಾಗ (ದ್ವಿತೀಯ), ಜೆಎಸ್​ಎಸ್ ಬನಶಂಕರಿ ಕಲಾ, ವಾಣಿಜ್ಯ ಕಾಲೇಜ್ ಹಾಗೂ ಎಸ್​ಕೆ ಗುಬ್ಬಿ ವಿಜ್ಞಾನ ಕಾಲೇಜ್ (ತೃತೀಯ) ಬಹುಮಾನ ಪಡೆದವು.

  ಭರತ ಪಾಟೀಲ (ಅತ್ಯುತ್ತಮ ನಾಯಕ), ಫರೀದ್ ಅಹ್ಮದ್​ಕುಮಾರ, ಅಭಿಷೇಕ ಡಿ. (ಅತ್ಯುತ್ತಮ ನಿರ್ದೇಶಕರು), ಪ್ರತಮೇಶ ಪಿ., (ಅತ್ಯುತ್ತಮ ಸಂಪಾದಕ), ಸೂರಜ್ (ಅತ್ಯುತ್ತಮ ಸಿನಿಮಾಟೋಗ್ರಾಫಿ) ಬಹುಮಾನ ಪಡೆದರು.

  ಕಲ್ಲಪ್ಪ ಪೂಜೇರ, ಕೃಷ್ಣಮೂರ್ತಿ ಗಾಂವ್ಕರ್, ರಾಮಚಂದ್ರ ಅರುಣ ಪಟವರ್ಧನ, ಸಿಕಂದರ ದಂಡಿನ್ ನಿರ್ಣಾಯಕರಾಗಿದ್ದರು.

  ಐಕ್ಯೂಎಸಿ ಸಂಯೋಜಕಿ ಡಾ. ಗೀತಾ ಕರಾಡೆ, ಪದವಿಪೂರ್ವ ಪ್ರಾಚಾರ್ಯ ಡಾ.ಡಿ.ಕೆ. ವಾಘ್ಮೂೕಡೆ, ಪ್ರೊ. ಮ್ಯಾಗ್ಲಿನ್ ಕ್ರೋಜ್, ಪ್ರೊ. ರೋಶನಿ ಅದೋನಿ, ಓಂಕಾರ ಅಲಬೂರ, ಸ್ವರಾಜ್ ಇಜರತ್, ಡಾ. ನೇತ್ರಾವತಿ ಗಬ್ಬೂರ, ಶರತ್ ಪರಡಿ, ಅನುಷ್ಯಾ ಶಿರೋಳ, ಇತರರು ಇದ್ದರು. ರಾಜ್ಯದ 25ಕ್ಕೂ ಹೆಚ್ಚು ವಿವಿಧ ಕಾಲೇಜ್ ವಿದ್ಯಾರ್ಥಿಗಳು ಭಾಗವಹಿಸಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts