More

    ರಾಜ್ಯಸಭೆಯಲ್ಲಿ ಈ ವರ್ಷ ಬಿಜೆಪಿಗೆ ಸಿಗಲಿದೆಯೇ ಬಹುಮತ?: 73 ಸ್ಥಾನಗಳಿಗೆ ಈ ವರ್ಷವೇ ಚುನಾವಣೆ

    ನವದೆಹಲಿ: ಎರಡನೇ ಅವಧಿಗೂ ಸ್ಪಷ್ಟ ಬಹುಮತದೊಂದಿಗೆ ಕೇಂದ್ರದಲ್ಲಿ ಅಧಿಕಾರ ಚುಕ್ಕಾಣಿ ಹಿಡಿದಿರುವ ಬಿಜೆಪಿಗೆ ಈ ವರ್ಷ ರಾಜ್ಯಸಭೆಯಲ್ಲೂ ಬಹುಮತ ಹೊಂದುವ ಅಪೇಕ್ಷೆ ಇದೆ. ಇದಕ್ಕೆ ಪೂರಕವಾಗಿ ರಾಜ್ಯಸಭೆಯ 73 ಸ್ಥಾನಗಳಿಗೆ ಈ ವರ್ಷವೇ ಚುನಾವಣೆ ಎದುರಾಗುತ್ತಿದೆ. ಇದಕ್ಕೆ ಸಂಬಂಧಿಸಿದ ಲೆಕ್ಕಾಚಾರಗಳು ಈ ರಾಜಕೀಯ ಚಿಂತಕರ ಚಾವಡಿಯಲ್ಲೂ ಶುರುವಾಗಿದೆ.

    ಈ ವರ್ಷ ಚುನಾವಣೆ ನಡೆಯಲಿರುವ 73 ಸ್ಥಾನಗಳ ಪೈಕಿ 69ರ ಅವಧಿ ಈ ವರ್ಷವೇ ಕೊನೆಗೊಳ್ಳುತ್ತವೆ. ಈ ಪೈಕಿ 18 ಆಡಳಿತ ಪಕ್ಷಗಳದ್ದೂ, 17 ಕಾಂಗ್ರೆಸ್​ ನದ್ದೂ ಆಗಿವೆ. ನಾಲ್ಕು ಸ್ಥಾನಗಳು ಹೇಗಿದ್ದರೂ ಖಾಲಿ ಇರುತ್ತವೆ.

    ಈ ವರ್ಷವೊಂದರಲ್ಲೇ ಉತ್ತರ ಪ್ರದೇಶದ 10 ಸ್ಥಾನಗಳು ಖಾಲಿಯಾಗುತ್ತಿವೆ. ಇಲ್ಲಿನ ರಾಜ್ಯಸಭಾ ಸ್ಥಾನಗಳು ಬಿಜೆಪಿಗೆ ಸುಲಭದ ತುತ್ತಾಗಿದೆ. ಆದಾಗ್ಯೂ, 2018-19ರಲ್ಲಿ ಛತ್ತೀಸ್​ಗಢ, ರಾಜಸ್ಥಾನ, ಮಧ್ಯಪ್ರದೇಶ ಸೇರಿ 5 ರಾಜ್ಯಗಳನ್ನು ಕಳೆದುಕೊಂಡಿರುವುದು ಬಿಜಪಿ ಪಾಲಿಗೆ ಸ್ವಲ್ಪ ನಷ್ಟವೇ ಸರಿ. ರಾಷ್ಟ್ರ ಮಟ್ಟದಲ್ಲಿ ಬಿಜೆಪಿ 303 ಸ್ಥಾನಗಳನ್ನು ಗೆದ್ದು ಲೋಕಸಭೆಯಲ್ಲಿ ಪ್ರಾಬಲ್ಯ ಹೊಂದಿದೆ. ಆದರೂ, ರಾಜ್ಯಸಭೆ ಚುನಾವಣೆ ವಿಚಾರ ಬಂದಾಗ ವಿಧಾನಸಭೆಯ ಸ್ಥಾನಗಳೂ ಪ್ರಾಮುಖ್ಯತೆ ಪಡೆಯುತ್ತವೆ.

    ಹರಿಯಾಣದಲ್ಲಿ ಬಿಜೆಪಿ ಕಳೆದ ಬಾರಿಗಿಂತ ಏಳು ಸ್ಥಾನ ಕಡಿಮೆ ಅಂದರೆ 40ಕ್ಕೆ ಸಂಖ್ಯಾಬಲವನ್ನು ಸೀಮಿತಗೊಳಿಸಿದೆ. ಇನ್ನು ಮಹಾರಾಷ್ಟ್ರದಲ್ಲೂ ಅಧಿಕಾರ ಕಳೆದುಕೊಂಡಿದ್ದು, ಬಿಜೆಪಿ 2014ರಲ್ಲಿ 122 ಸ್ಥಾನಗಳಲ್ಲಿ ಗಲುವು ಕಂಡಿತ್ತಾದರೂ, ಈ ಬಾರಿ ಅದರಿಂದಲೂ 17 ಸ್ಥಾನಗಳನ್ನು ಕಳೆದುಕೊಂಡಿದೆ. ಇದೇ ವೇಳೆ, ಹರಿಯಾಣ ಮತ್ತು ಮಹಾರಾಷ್ಟ್ರಗಳಲ್ಲಿ ಕಾಂಗ್ರೆಸ್ ಅನುಕ್ರಮವಾಗಿ 16 ಮತ್ತು 13 ಸ್ಥಾನಗಳ ಏರಿಕೆ ಗಿಟ್ಟಿಸಿಕೊಂಡಿದೆ.

    ರಾಜ್ಯಸಭೆಯ ಪ್ರಸ್ತುತ ಚಿತ್ರಣದ ಪ್ರಕಾರ ಒಟ್ಟು ಸದಸ್ಯ 245 ಆಗಿದ್ದು, ಬಿಜೆಪಿ ಸದಸ್ಯರು 83, ಕಾಂಗ್ರೆಸ್ 46 ಇದೆ. ಇನ್ನುಳಿದಂತೆ ಇತರೆ ಪಕ್ಷಗಳ ಸದಸ್ಯರಿದ್ದಾರೆ. ಸರಳ ಬಹುಮತಕ್ಕ ಅರ್ಧಕ್ಕಿಂತ ಹೆಚ್ಚು ಸದಸ್ಯ ಬಲ ಬೇಕಾಗಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts