ಆಸಿಸ್​ ನೆಲದಲ್ಲಿ ಮೊದಲ ಟೆಸ್ಟ್​ ಸರಣಿ ಗೆಲುವು: ರಾಷ್ಟ್ರಪತಿ, ಪ್ರಧಾನಿ ಸೇರಿದಂತೆ ಗಣ್ಯರಿಂದ ಕೊಹ್ಲಿ ಪಡೆಗೆ ಶುಭಾಶಯ ಮಹಾಪೂರ

ನವದೆಹಲಿ: ಎಪ್ಪತ್ತು ವರ್ಷಗಳ ಸುದೀರ್ಘ ಹೋರಾಟದಲ್ಲಿ ಮೊದಲ ಬಾರಿಗೆ ಆಸಿಸ್​ ನೆಲದಲ್ಲಿ ಟೆಸ್ಟ್​ ಸರಣಿ ಗೆದ್ದು ಟೀಂ ಇಂಡಿಯಾ ಇತಿಹಾಸ ನಿರ್ಮಿಸಿದೆ. ಇದಕ್ಕೆ ಕಾರಣರಾದ ಕೊಹ್ಲಿ ಪಡೆಗೆ ವಿಶ್ವಾದ್ಯಂತ ಶುಭಾಶಯಗಳ ಹೊಳೆಯೇ ಹರಿದು ಬರುತ್ತಿದೆ..

ರಾಷ್ಟ್ರಪತಿ ರಾಮನಾಥ್​ ಕೋವಿಂದ್​, ಪ್ರಧಾನಿ ನರೇಂದ್ರ ಮೋದಿ, ಕ್ರಿಕೆಟ್​ ದೇವರು ಸಚಿನ್​ ತೆಂಡೂಲ್ಕರ್​, ವೀರೆಂದ್ರ ಸೆಹ್ವಾಗ್​, ವಿವಿಎಸ್​ ಲಕ್ಷ್ಮಣ್​, ಸೌರವ್​ ಗಂಗೂಲಿ ಹಾಗೂ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಸೇರಿದಂತೆ ಕ್ರಿಕೆಟ್​ ದಿಗ್ಗಜರು, ಮಾಜಿ ಕ್ರಿಕೆಟಿಗರು, ಕ್ರೀಡಾಭಿಮಾನಿಗಳು ತಮ್ಮ ಅಭಿನಂದನೆಗಳು ಸಲ್ಲಿಸಿದ್ದಾರೆ.

ನಮಗೆ ಹೆಮ್ಮೆ ತಂದಿದೆ
ಮೊದಲ ಬಾರಿಗೆ ಆಸಿಸ್​ ನೆಲದಲ್ಲಿ ಟೆಸ್ಟ್​ ಸರಣಿ ಗೆದ್ದ ಟೀಂ ಇಂಡಿಯಾಗೆ ಅಭಿನಂದನೆಗಳು. ಉತ್ತಮ ಬ್ಯಾಟಿಂಗ್​ ನಿರ್ವಹಣೆ, ಅದ್ಭುತ ವೇಗದ ಬೌಲಿಂಗ್ ಹಾಗೂ ಸಂಘಟಿತ ಹೋರಾಟ ನಮಗೆ ಹೆಮ್ಮೆ ತಂದಿದೆ ಎಂದು ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಶುಭ ಕೋರಿದ್ದಾರೆ.

ಗೆಲುವಿಗೆ ನೀವು ಅರ್ಹರಾಗಿದ್ದೀರ
ಶ್ರಮಪಟ್ಟು ಹೋರಾಡಿ ಟೆಸ್ಟ್​ ಸರಣಿ ಜಯಿಸಿದ ಟೀಂ ಇಂಡಿಯಾಗೆ ಅಭಿನಂದನೆಗಳು. ಈ ಗೆಲುವಿಗೆ ನೀವು ಅರ್ಹರಾಗಿದ್ದೀರ. ಸಂಘಟಿತ ಹೊರಾಟಕ್ಕೆ ಈ ಸರಣಿ ಜಯ ಸಾಕ್ಷಿಯಾಗಿದೆ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಸರಣಿ ಗೆಲುವು ನಿಮ್ಮದಾಗಲಿ ಎಂದು ಪ್ರಧಾನಿ ಮೋದಿ ಶುಭ ಹಾರೈಸಿದ್ದಾರೆ.

ಹೆಮ್ಮೆಯ ಹುಡುಗರು
ಭಾರತ ಕ್ರಿಕೆಟ್​​ ಪಾಲಿಗೆ ಇದೊಂದು ವಿಸ್ಮಯದ ದಿನ. ಉತ್ತಮ ಪ್ರದರ್ಶನದಿಂದ ಟೀಂ ಇಂಡಿಯಾ ಈ ಸರಣಿಯನ್ನು ಸ್ಮರಣೀಯವಾಗಿಸಿದೆ. ಹೆಮ್ಮೆಯ ಹುಡುಗರು ಎಂದು ಕ್ರಿಕೆಟ್​ ದಂತಕತೆ ಸಚಿನ್​ ಟ್ವೀಟ್​ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.

2-1 ಅಂತರದಲ್ಲಿ ಟೆಸ್ಟ್​ ಸರಣಿ ಗೆದ್ದು ಇತಿಹಾಸ ನಿರ್ಮಿಸಿರುವ ಟೀಂ ಇಂಡಿಯಾಗೆ ಇನ್ನೂ ಮುಂತಾದ ಗಣ್ಯರು ತಮ್ಮ ಟ್ವಿಟರ್​ ಖಾತೆ ಮೂಲಕ ಶುಭಕೋರಿದ್ದು ಅವುಗಳ ಲಿಂಕ್​ ಈ ಕೆಳಕಂಡಂತಿದೆ.​

https://twitter.com/ImIshant/status/1082165331022569472