ಜೆಡಿಎಸ್​ ಸಭೆಯಲ್ಲಿ ರಾಜೀನಾಮೆ ಹಿಂಪಡೆಯಲು ವಿಶ್ವನಾಥ್​ ಮನವೊಲಿಸಲಾಗುವುದು: ಜೆ.ಟಿ.ದೇವೇಗೌಡ

ಮೈಸೂರು: ಜೆಡಿಎಸ್​ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಎಚ್​. ವಿಶ್ವನಾಥ್​ ರಾಜೀನಾಮೆ ಕೊಟ್ಟಿರುವುದಕ್ಕೆ ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ಬೇಸರ ವ್ಯಕ್ತಪಡಿಸಿ, ಮನವೊಲಿಸಲಾಗುವುದು ಎಂದು ತಿಳಿಸಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಸಚಿವ ಜಿ.ಟಿ.ದೇವೇಗೌಡ, ಮಂಗಳವಾರ ಸಂಜೆ ಜೆಡಿಎಸ್​ ಸಭೆ ನಡೆಯಲಿದೆ. ಈ ಸಭೆಯಲ್ಲಿ ಎಚ್​. ವಿಶ್ವನಾಥ್​ ರಾಜೀನಾಮೆ ಕುರಿತು ಚರ್ಚಿಸುವ ಜತೆಗೆ ರಾಜೀನಾಮೆ ಹಿಂಪಡೆಯುವಂತೆ ಅವರ ಮನವೊಲಿಸಲಾಗುವುದು ಎಂದರು.

ಎಚ್​. ವಿಶ್ವನಾಥ್​ ಜೆಡಿಎಸ್​ ರಾಜ್ಯಾಧ್ಯಕ್ಷರಾದ ಬಳಿಕ ಪಕ್ಷ ಸಂಘಟನೆ ಉತ್ತಮಗೊಂಡಿದೆ. ಹಾಗಾಗಿ ಅವರು ಈ ಸ್ಥಾನಕ್ಕೆ ಯಾವುದೇ ಕಾರಣಕ್ಕೂ ರಾಜೀನಾಮೆ ನೀಡಬಾರದು. ಅವರ ಮಾರ್ಗದರ್ಶನದಲ್ಲಿ ಮುಂದೆ ಹೋಗಲು ನಾವೆಲ್ಲರೂ ಬದ್ಧರಿದ್ದೇವೆ. ಹಾಗಾಗಿ, ರಾಜೀನಾಮೆ ಹಿಂಪಡೆಯುವಂತೆ ಅವರ ಮನವೊಲಿಸುವುದಾಗಿ ಸಚಿವ ಸಾ.ರಾ. ಮಹೇಶ್​ ಮೈಸೂರಿನಲ್ಲಿ ಹೇಳಿದರು.

Leave a Reply

Your email address will not be published. Required fields are marked *