Video|ನಾಳೆ ನಿನ್ನನ್ನು ನೋಡ್ಕೊತೀನಿ, ನನ್ನ ಹಿಟ್‌ ಲಿಸ್ಟ್‌ನಲ್ಲಿ ನೀನಿದ್ದೀಯ ಎಂದು ಧಮ್ಕಿ ಹಾಕಿದ ಬಿಜೆಪಿ ನಾಯಕ

ನವದೆಹಲಿ: ಸರ್ಕಲ್‌ ಆಫೀಸರ್‌ಗೆ ಬೆದರಿಕೆ ಒಡ್ಡಿರುವ ಬಿಜೆಪಿ ನಾಯಕನ ದಬ್ಬಾಳಿಕೆಯು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್‌ ಆಗಿದೆ.

ಕಾನ್ಪುರದಲ್ಲಿ ಘಟನೆ ನಡೆದಿದ್ದು, ವಿಡಿಯೋದಲ್ಲಿರುವವರು ಬಿಜೆಪಿ ನಾಯಕ ಸುರೇಶ್‌ ಅಶ್ವತಿ ಎಂದು ಗುರುತಿಸಲಾಗಿದೆ.

ವಿಡಿಯೋದಲ್ಲಿ, ಸುರೇಶ್‌ ಅಶ್ವತಿ ಸರ್ಕಲ್‌ ಆಫೀಸರ್‌ನೊಂದಿಗೆ ವಾಗ್ವಾದಕ್ಕಿಳಿದ ಬಳಿಕ ನಾನು ನಿನ್ನನ್ನು ನಾಳೆ ನೋಡಿಕೊಳ್ಳುತ್ತೇನೆ, ನನ್ನ ಹಿಟ್‌ ಲಿಸ್ಟ್‌ನಲ್ಲಿ ನೀನಿರುವೆ ಎಂದು ಧಮ್ಕಿ ಹಾಕಿದ್ದಾರೆ. ಇದಕ್ಕೆ ಉತ್ತರಿಸಿ ಅಧಿಕಾರಿ ನಿನಗೆ ಬೇಕಾದ್ದನ್ನು ಮಾಡಿಕೊ ಎಂದು ಹೇಳಿದ್ದಾರೆ.

ಇವರೊಂದಿಗೆ ಮೇಯರ್‌ ಪ್ರಮಿಳಾ ಪಾಂಡೆ ಕೂಡ ಸ್ಥಳದಲ್ಲಿದ್ದರು. ಇತರೆ ಪಕ್ಷಗಳ ನಾಯಕರು ಕೂಡ ಜಗಳ ನಡೆದ ಸ್ಥಳದಲ್ಲಿರುವುದು ಕಂಡುಬಂದಿದೆ.

ಬಿಜೆಪಿ ನಾಯಕನ ವಿರುದ್ಧ ಪೊಲೀಸ್‌ ಅಧಿಕಾರಿ ದೂರನ್ನು ದಾಖಲಿಸಿದ್ದಾರೆ.

ಉತ್ತರ ಪ್ರದೇಶದ 13 ಕ್ಷೇತ್ರಗಳಿಗೆ ನಡೆದಿದ್ದ ನಾಲ್ಕನೇ ಹಂತದ ಲೋಕಸಭಾ ಚುನಾವಣೆಯಲ್ಲಿ ಶೇ. 57.8ರಷ್ಟು ಮತದಾನವಾಗಿದೆ. (ಏಜೆನ್ಸೀಸ್)