ಆಂಧ್ರಪ್ರದೇಶ: ಸೈನ್ಸ್ ಫಿಕ್ಷನ್ ಆಧರಿತ ಪ್ಯಾನ್ ಇಂಡಿಯಾ ‘ಕಲ್ಕಿ’ ಚಿತ್ರ ಬಿಡುಗಡೆಗೊಂಡು ಇದೀಗ ಸೂಪರ್ ಹಿಟ್ ಸಾಲಿಗೆ ಸೇರಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಜತೆ ಬಾಕ್ಸ್ ಆಫೀಸ್ನಲ್ಲಿ ಲಾಭದಾಯಕ ಗಳಿಕೆ ಕಂಡಿತು. ಸದ್ಯ ಈ ಸಿನಿಮಾದ ಗೆಲುವಿನ ಮೂಲಕ ಸಿನಿರಸಿಕರಿಗೆ ಮತ್ತಷ್ಟು ಹತ್ತಿರವಾಗಿರುವ ಟಾಲಿವುಡ್ ರೆಬೆಲ್ ಸ್ಟಾರ್ ಇದೀಗ ಮತ್ತೊಂದು ಬಿಗ್ ಪ್ರಾಜೆಕ್ಟ್ನತ್ತ ಮುಖಮಾಡಿದ್ದಾರೆ. ಅಸಲಿಗೆ ಇದೊಂದು ‘ಸ್ಪಿರಿಟ್’ ತುಂಬಿದ ಕಥೆ.
ಇದನ್ನೂ ಓದಿ: ಮಕ್ಕಳಿಗೆ ಬಾಳೆಹಣ್ಣು ಕೊಡುವ ಮುನ್ನ ಈ ವಿಚಾರಗಳು ನಿಮಗೆ ಗೊತ್ತಿರಲಿ ಇಲ್ಲದಿದ್ರೆ ಆರೋಗ್ಯ ಕೆಡಬಹುದು ಎಚ್ಚರ!
ಬಾಲಿವುಡ್ ಸಿನಿ ಮೂಲಗಳ ಪ್ರಕಾರ, ‘ಸ್ಪಿರಿಟ್’ ಎಂಬ ಶೀರ್ಷಿಕೆಯಡಿ ಪ್ರಭಾಸ್ ನಟಿಸುವ ಚಿತ್ರಕ್ಕೆ ಸ್ಟಾರ್ ನಟಿ ಕರೀನಾ ಕಪೂರ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎನ್ನಲಾಗಿದೆ. ಅಸಲಿಗೆ ಕರೀನಾ ಅವರೇ ಈ ಪ್ರಾಜೆಕ್ಟ್ಗೆ ಅಂತಿಮವಾಗಿದ್ದಾರೆ. ‘ಅನಿಮಲ್’ ನಿರ್ದೇಶಕ ಸಂದೀಪ್ ವಂಗಾ ರೆಡ್ಡಿ ನಿರ್ದೇಶನದಲ್ಲಿ ಮೂಡಿಬರಲಿರುವ ಸ್ಪಿರಿಟ್ ಚಿತ್ರದಲ್ಲಿ ಪ್ರಭಾಸ್ ಪ್ರಥಮ ಬಾರಿಗೆ ಖಾಕಿ ತೊಡಲಿದ್ದಾರೆ. ಖಡಕ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ಪ್ರಬಾಸ್, ಮುಂದಿನ ವರ್ಷದಿಂದ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಲಿದ್ದಾರೆ.
ಪ್ರಭಾಸ್ಗೆ ನಾಯಕಿಯಾಗಿರುವ ಕರೀನಾ ಕಪೂರ್ ಅವರ ಪತಿ, ನಟ ಸೈಫ್ ಅಲಿ ಖಾನ್ ಕೂಡ ಈ ಚಿತ್ರದಲ್ಲಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಇದರೊಟ್ಟಿಗೆ ಟಾಲಿವುಡ್ನ ಮತ್ತೊಂದು ಚಿತ್ರಕ್ಕೂ ಕರೀನಾ ಅವರೇ ಹೀರೋಯಿನ್ ಆಗಿ ಆಯ್ಕೆಯಾಗಿದ್ದಾರೆ ಎಂಬ ಸುದ್ದಿಯೊಂದು ಬಾಲಿವುಡ್ ಅಂಗಳದಲ್ಲಿ ಭಾರೀ ಚರ್ಚೆಯಾಗುತ್ತಿದೆ. ತೆಲುಗು ನಟ ಮಹೇಶ್ ಬಾಬುಗೆ ಜೋಡಿಯಾಗಲಿದ್ದಾರೆ ಎಂದು ಹೇಳಲಾಗಿದೆ. ಒಟ್ಟಾರೆ ಕರೀನಾ ಹೆಸರು ಟಾಲಿವುಡ್ನಲ್ಲಿ ಜೋರಾಗಿ ಸದ್ದು ಮಾಡುತ್ತಿದ್ದು, ಡಬಲ್ ಆಫರ್ ಅವರ ಪಾಲಾಗಲಿದೆಯೇ ಎಂಬುದನ್ನು ಸದ್ಯ ಕಾದು ತಿಳಿಯಬೇಕಿದೆ,(ಏಜೆನ್ಸೀಸ್).
ಪ್ರಿಯಕರನ ಆ ಒಂದು ಕಂಡಿಷನ್ಗೆ ಹೆದರಿ ಬ್ರೇಕಪ್ ಮಾಡಿಕೊಂಡ ‘ಸೀತಾ ಮಹಾಲಕ್ಷ್ಮಿ’! 7 ತಿಂಗಳ ಹಿಂದಿನ ರಹಸ್ಯ ಬಯಲು