ರಜಿನಿ ರಾಜಕೀಯ ಪಕ್ಷದ ಭವಿಷ್ಯ – ಶೀಘ್ರವೇ ತೀರ್ಮಾನ ಪ್ರಕಟಿಸುವೆ ಎಂದ ಸೂಪರ್​ಸ್ಟಾರ್​

ಚೆನ್ನೈ: ರಾಜಕೀಯ ರಂಗ ಪ್ರವೇಶಕ್ಕೆ ಸಂಬಂಧಿಸಿ ಮೌನವಾಗಿದ್ದ ರಜಿನೀಕಾಂತ್ ಸೋಮವಾರ ದಿಢೀರ್ ಪಕ್ಷದ ಸಭೆ ಕರೆದಿದ್ದು, ಗಂಭೀರ ಚರ್ಚೆ ನಡೆಸಿದರು. ಸಭೆಯ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸೂಪರ್​ಸ್ಟಾರ್​, ತಮ್ಮ ರಾಜಕೀಯ ಪಕ್ಷ ರಜಿನಿ ಮಕ್ಕಳ್ ಮಂದ್ರಂ ನ ಭವಿಷ್ಯದ ಕುರಿತಾದ ತೀರ್ಮಾನವನ್ನು ಶೀಘ್ರವೇ ಪ್ರಕಟಿಸುವೆ ಎಂದು ಘೋಷಿಸಿದ್ದಾರೆ. ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಪಕ್ಷದ ಕಾರ್ಯದರ್ಶಿಗಳ ಜತೆಗೆ ಮಾತುಕತೆ ನಡೆಸಿದ ನಂತರದಲ್ಲಿ ಪೊಯೆಸ್ ಗಾರ್ಡನ್​ನಲ್ಲಿರುವ ತಮ್ಮ ನಿವಾಸದ ಸಮೀಪ ಸುದ್ದಿಗಾರರ ಜತೆಗೆ ಮಾತನಾಡುತ್ತ ಈ ವಿಚಾರ ತಿಳಿಸಿದರು. … Continue reading ರಜಿನಿ ರಾಜಕೀಯ ಪಕ್ಷದ ಭವಿಷ್ಯ – ಶೀಘ್ರವೇ ತೀರ್ಮಾನ ಪ್ರಕಟಿಸುವೆ ಎಂದ ಸೂಪರ್​ಸ್ಟಾರ್​