ಸಿಡ್ನಿ: ಸದ್ಯ ಭಾರತದ ಅಗ್ರ ಆಲ್ರೌಂಡರ್ ಎನಿಸಿಕೊಂಡಿದ್ದರೂ, ಇನ್ನೂ ಸಂಪೂರ್ಣ ಫಿಟ್ ಆಗದಿರುವುದರಿಂದ ಹಾರ್ದಿಕ್ ಪಾಂಡ್ಯ ಬೌಲಿಂಗ್‌ನಿಂದ ದೂರ ಉಳಿದಿದ್ದಾರೆ. ಮುಂದೆ ಯಾವಾಗ ಬೌಲಿಂಗ್ ಆರಂಭಿಸುವರು ಎಂಬ ಪ್ರಶ್ನೆಗೆ ಬಗ್ಗೆ ಹಾರ್ದಿಕ್ ಪಾಂಡ್ಯ ಅವರು ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದ ಬಳಿಕ ಉತ್ತರ ನೀಡಿದ್ದಾರೆ.
ಕಳೆದ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ ಬ್ಯಾಟ್ಸ್‌ಮನ್ ಆಗಿದ್ದ ಹಾರ್ದಿಕ್, ಹಾಲಿ ಆಸೀಸ್ ಪ್ರವಾಸದಲ್ಲೂ ಬರೀ ಬ್ಯಾಟ್ಸ್‌ಮನ್ ಆಗಿದ್ದಾರೆ. ಇದರಿಂದ ತಂಡದ ಸಮತೋಲನಕ್ಕೆ ಹೊಡೆತ ಬಿದ್ದಿದ್ದರೂ, ಅವರು ಸದ್ಯಕ್ಕೆ ಬೌಲಿಂಗ್ ಪುನರಾರಂಭಿಸುವ ನಿರೀಕ್ಷೆ ಇಲ್ಲ. ಮುಂದಿನ ವರ್ಷ ಭಾರತದಲ್ಲೇ ನಡೆಯಲಿರುವ ಟಿ20 ವಿಶ್ವಕಪ್‌ವರೆಗೂ ತಾನು ಬೌಲಿಂಗ್ ಮಾಡುವ ಸಾಧ್ಯತೆ ಇಲ್ಲ ಎಂದು ಹಾರ್ದಿಕ್ ಪಾಂಡ್ಯ ಸುಳಿವು ಬಿಟ್ಟುಕೊಟ್ಟಿದ್ದಾರೆ.
‘ಸರಿಯಾದ ಸಮಯ ಬರುವವರೆಗೆ ನಾನು ಮತ್ತೆ ಬೌಲಿಂಗ್ ಮಾಡುವುದಿಲ್ಲ. ನನ್ನ ಸಾಮರ್ಥ್ಯದ ಶೇ. 100 ಬೌಲಿಂಗ್ ಮಾಡಲು ಫಿಟ್ ಆಗಿರಬೇಕೆಂದು ಬಯಸಿದ್ದೇನೆ. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಬೇಕಾದ ವೇಗದಲ್ಲೇ ಬೌಲಿಂಗ್ ಮಾಡಲು ಬಯಸಿರುವೆ’ ಎಂದು ಪಾಂಡ್ಯ ತಿಳಿಸಿದ್ದಾರೆ.
ಟಿ20 ವಿಶ್ವಕಪ್‌ಗೆ ಇನ್ನೂ 10 ತಿಂಗಳು ಬಾಕಿ ಇದ್ದು, ಈ ಮಹತ್ವದ ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು ಬೌಲಿಂಗ್‌ನಿಂದ ದೂರ ಉಳಿದಿರುವೆ. ಟಿ20 ವಿಶ್ವಕಪ್‌ನಲ್ಲಿ ನನ್ನ ಬೌಲಿಂಗ್ ಪ್ರಮುಖ ಪಾತ್ರ ನಿರ್ವಹಿಸಲಿದೆ ಎಂದು ಪಾಂಡ್ಯ ವಿವರಿಸಿದ್ದಾರೆ.
"The change has come for better."@hardikpandya7 on how fatherhood has changed him as a person.#TeamIndia | #AUSvIND pic.twitter.com/cbyydAbnBO
— BCCI (@BCCI) November 27, 2020
ಭಾರತ-ಆಸೀಸ್ ಮೊದಲ ಏಕದಿನ ಪಂದ್ಯದ ವೇಳೆ ಆಡಂ ಗಿಲ್‌ಕ್ರಿಸ್ಟ್ ಕ್ಷಮೆಯಾಚಿಸಿದ್ದೇಕೆ?