ಪತ್ನಿ ಅಕ್ರಮ ಸಂಬಂಧಕ್ಕೆ ಬೇಸತ್ತು ಮಾಧ್ಯಮದವರ ಎದುರೇ ವಿಷ ಸೇವನೆ

ಕಲಬುರಗಿ: ಕೌಟುಂಬಿಕ ಕಲಹದಿಂದ ಬೇಸತ್ತ ವ್ಯಕ್ತಿ ಸುದ್ದಿಗೋಷ್ಠಿ ಕರೆದು ಮಾಧ್ಯಮದವರ ಎದುರೇ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ ಘಟನೆ ನಡೆದಿದೆ.

ಶುರಣಬಸಪ್ಪ ಎಂಬುವರ ಪತ್ನಿ ಕೆಲವು ವರ್ಷಗಳಿಂದ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಳು. ಸಾಕ್ಷಿ ಸಮೇತ ಅದನ್ನು ಬಯಲು ಮಾಡಿದ್ದ ಶರಣಬಸಪ್ಪ ವಿಚ್ಛೇದನಕ್ಕಾಗಿ ಕೋರ್ಟ್​ ಮೊರೆ ಹೋಗಿದ್ದರು. ಆದರೆ ಕೋರ್ಟ್​ನಲ್ಲಿ ನ್ಯಾಯ ಸಿಗದ ಹಿನ್ನೆಲೆಯಲ್ಲಿ ಬೇಸತ್ತಿದ್ದರು.

ಇಂದು ಬೆಳಗ್ಗೆ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಕರೆದು, ನನ್ನ ಪತ್ನಿಗೆ ಅನೈತಿಕ ಸಂಬಂಧವಿದ್ದಿದ್ದು ಗೊತ್ತಿತ್ತು. ಆದರೂ ಮಕ್ಕಳಿಗೋಸ್ಕರ ಸಹಿಸಿಕೊಂಡಿದ್ದೆ, ತುಂಬ ಮೋಸ ಮಾಡಿದಳು. ನಂತರ ಡಿವೋರ್ಸ್​ಗೆ ಅರ್ಜಿ ಹಾಕಿದರೂ ಸರಳವಾಗಿ ಸಿಗಲಿಲ್ಲ. ಬೇಕಂತಲೇ ಕೇಸ್​ ಮುಂದುವರಿಸಲಾಯಿತು. ನನಗೆ ನ್ಯಾಯ ಸಿಕ್ಕಿಲ್ಲ ಎಂದು ಗೋಳೋ ಎಂದು ಅತ್ತರು. ನೋಡನೋಡುತ್ತಿದ್ದಂತೆ ಇಲಿಪಾಷಾಣ ಸೇವಿಸಿದರು. ಅವರನ್ನು ಕೂಡಲೇ ಆಂಬುಲೆನ್ಸ್​ ಮೂಲಕ ಆಸ್ಪತ್ರೆಗೆ ಕರೆದುಕೊಂಡುಹೋಗಲಾಯಿತು.

Leave a Reply

Your email address will not be published. Required fields are marked *