ಪತ್ನಿಯ ಬಿಟ್ಟು ಪರಸ್ತ್ರೀ ಜತೆ ಪತಿಯ ಒಡನಾಟ: ರಸ್ತೆಯಲ್ಲಿ ಸಿಕ್ಕ ಗಂಡನಿಗೆ ಸತಿ ಮಾಡಿದ ಪೂಜೆ ಎಂತದ್ದು ಗೊತ್ತಾ…?

ಕಾನ್ಪುರ: ಆತ ಮದುವೆಯಾಗಿ ಪತ್ನಿ ಜತೆ ಸುಖವಾಗಿ ಸಂಸಾರ ನಡೆಸಿಕೊಂಡಿದ್ದ. ಆದರೂ ಆತನಿಗೆ ಅನ್ಯ ಸ್ತ್ರೀಯರೆಡೆಗೆ ಬಾರಿ ಆಸಕ್ತಿ ಇತ್ತು. ಹಾಗಾಗಿ, ಆತ ಹಲವು ಮಹಿಳೆಯರೊಂದಿಗೆ ದೈಹಿಕ ಸಂಪರ್ಕ ಹೊಂದಿದ್ದ. ಲಂಪಟ ಗಂಡನ ಕೃತ್ಯ ಗೊತ್ತಿದ್ದರೂ ಸಾಕಷ್ಟು ಸಹಿಸಿಕೊಂಡಿದ್ದಳು ಪತ್ನಿ.

ಇವತ್ತಲ್ಲ ನಾಳೆ ಆತ ಸರಿಹೋಗಬಹುದು ಎಂಬುದು ಆಕೆಯ ನಿರೀಕ್ಷೆಯಾಗಿತ್ತು. ಆದರೆ ಪತಿ ತನ್ನ ಸ್ವಭಾವವನ್ನು ಸುಧಾರಿಸಿಕೊಂಡು ಅಚ್ಚುಕಟ್ಟಾಗಿ ಸಂಸಾರ ನಡೆಸಿಕೊಂಡು ಹೋಗುವ ಬದಲು ತನ್ನ ಲಂಪಟತನವನ್ನು ಮುಂದುವರಿಸಿದ್ದ. ಈ ಹಿನ್ನೆಲೆಯಲ್ಲಿ ಪತಿಗೆ ಸರಿಯಾಗಿ ಬುದ್ಧಿಕಲಿಸಬೇಕು ಎಂದು ಪತ್ನಿ ನಿರ್ಧರಿಸಿದ್ದಳು. ಇದಕ್ಕೆ ಸರಿಯಾಗಿ ಅನ್ಯ ಮಹಿಳೆಯೊಂದಿಗೆ ಸಿಕ್ಕಿಬಿದ್ದ ಆತನನ್ನು ಸಾರ್ವಜನಿಕವಾಗಿ ಥಳಿಸಿ, ತನ್ನದೇ ಆದ ರೀತಿಯಲ್ಲಿ ಆಕೆ ಪತಿಗೆ ಬುದ್ಧಿಹೇಳಿದ್ದಾಳೆ.

ಇದು ಉತ್ತರ ಪ್ರದೇಶದ ಕಾನ್ಪುರದ ಪಂಕಿ ಬಡಾವಣೆಯ ನಿವಾಸಿ ವಿಪಿನ್​ ಕುಮಾರ್​ ಪತ್ನಿಯಿಂದ ಥಳಿಸಿಕೊಂಡಿರುವ ವ್ಯಕ್ತಿ. ಈತ ಮದುವೆಯಾಗಿ ಕೆಲದಿನಗಳವರೆಗೆ ಪತ್ನಿಯ ಜತೆ ಸಂಸಾರ ನಡೆಸಿದ್ದ. ಆದರೆ, ಲಂಪಟನಾದ ಈತ ಅನ್ಯ ಸ್ತ್ರೀಯರೆಡೆಗೆ ಆಸಕ್ತನಾಗಿ ಸಂಸಾರವನ್ನು ಕಡೆಗಣಿಸಲಾರಂಭಿಸಿದ್ದ. ಪತ್ನಿ ಸಾಕಷ್ಟು ಬುದ್ಧಿಹೇಳಿ ಸಂಸಾರವನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದ್ದಳು. ಆದರೂ ಆತ ತನ್ನ ವರ್ತನೆಯನ್ನು ಬದಲಿಸಿಕೊಂಡಿರಲಿಲ್ಲ. ಹೀಗಾಗಿ ಆಕೆ ಪತಿಯ ವಿರುದ್ಧ ಕಾನ್ಪುರ ಪೊಲೀಸ್​ ಠಾಣೆಯಲ್ಲಿ ಅಕ್ರಮ ಸಂಬಂಧ ಹೊಂದಿರುವ ಬಗ್ಗೆ ಹಾಗೂ ಕೌಟುಂಬಿಕ ದೌರ್ಜನ್ಯದ ದೂರು ದಾಖಲಿಸಿದ್ದಳು. ಅಂದಿನಿಂದ ಆತ ಪತ್ನಿಯನ್ನು ತೊರೆದು ಪ್ರತ್ಯೇಕವಾಗಿ ವಾಸಿಸಲಾರಂಭಿಸಿದ್ದ.

ವಿಪಿನ್​ ಕುಮಾರ್​ ಸೋಮವಾರ ಕಾನ್ಪುರದ ರೆಸ್ಟೋರೆಂಟ್​ ಒಂದರಲ್ಲಿ ಬೇರೊಬ್ಬ ಮಹಿಳೆ ಜತೆ ಇರುವ ಸಂಗತಿ ಪತ್ನಿಗೆ ಗೊತ್ತಾಗಿತ್ತ. ತಕ್ಷಣವೇ ತನ್ನ ಕುಟುಂಬದವರ ಜತೆ ರೆಸ್ಟೋರೆಂಟ್​ಗೆ ಹೋದ ಪತ್ನಿ ಚಪ್ಪಲಿಯಿಂದ ವಿಪಿನ್​ನನ್ನು ಥಳಿಸಿದಳು. ಜತೆಗೆ ಆಕೆಯ ಕುಟುಂಬದವರು ಕೂಡ ಆತನ ಮೇಲೆ ಹಲ್ಲೆ ಮಾಡಿದರು ಎನ್ನಲಾಗಿದೆ. ಸ್ಥಳದಲ್ಲಿದ್ದವರು ಮೊಬೈಲ್​ನಲ್ಲಿ ವಿಡಿಯೋ ಚಿತ್ರೀಕರಣ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದು, ವೈರಲ್​ ಆಗಿದೆ.

ತನ್ನ ಮೇಲೆ ಹಲ್ಲೆ ಮಾಡಿದ ಪತ್ನಿ ಹಾಗೂ ಆಕೆಯ ಕುಟುಂಬದವರ ವಿರುದ್ಧ ವಿಪಿನ್​ ಪೊಲೀಸರಿಗೆ ದೂರು ಸಲ್ಲಿಸಿದ್ದಾನೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಸೂಕ್ತ ವಿಚಾರಣೆ ನಡೆಸುವುದಾಗಿ ಹೇಳಿದ್ದಾರೆ. ಇದೇ ವೇಳೆ ವಿಪಿನ್​ ತಾನು ದೂರು ಸಲ್ಲಿಸಿದ್ದರೂ, ಪೊಲೀಸರು ತನ್ನ ಪತ್ನಿಯ ಪರವಹಿಸುತ್ತಿರುವುದಾಗಿ ಆರೋಪಿಸಿದ್ದಾನೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *