ನಿದ್ರಿಸುತ್ತಿದ್ದ ಪತಿಗೆ ಬೆಂಕಿ ಹಚ್ಚಿ ಕೊಂದ ಮಹಿಳೆ: ಕಾರಣ ಮಾತ್ರ ತೀರ ಕ್ಷುಲ್ಲಕ

ಬರೇಲಿ: ಈ ದುರಂತ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದ್ದು ಪ್ರೇಮಶ್ರೀ ಎಂಬಾಕೆ ಆರೋಪಿ. ಈಕೆಯ ಪತಿ ಸತ್ಯವೀರ್​ ಸಿಂಗ್​ ಮಲಗಿದ್ದಾಗ ಬೆಂಕಿ ಹಚ್ಚಿದ್ದು ಆತ ಮೃತಪಟ್ಟಿದ್ದಾನೆ.

ಪತಿ ನನ್ನಂತೆ ಸುಂದರವಾಗಿಲ್ಲ ಎಂಬ ಕಾರಣಕ್ಕೆ ಈ ಮಹಿಳೆ ಆತನಿಗೆ ಬೆಂಕಿ ಹಚ್ಚಿ ಹತ್ಯೆ ಮಾಡಿದ್ದಾಳೆ.
ತನ್ನ ಅಣ್ಣ ಕಪ್ಪು ಬಣ್ಣದಲ್ಲಿ ಇದ್ದಾನೆಂದು ಅತ್ತಿಗೆ ಅವನನ್ನು ಇಷ್ಟಪಡುತ್ತಿರಲಿಲ್ಲ. ಅವಳು ಯಾವಾಗಲೂ ಅಣ್ಣನನ್ನು ಟೀಕಿಸುತ್ತಿದ್ದಳು. ಆದರೆ, ಇಂಥ ಕೃತ್ಯ ಎಸಗುತ್ತಾಳೆ ಎಂದುಕೊಂಡಿರಲಿಲ್ಲ ಎಂದು ಮೃತ ಸತ್ಯವೀರ್​ ಸಿಂಗ್​ ಸೋದರ ಹರವೀರ್​ ಸಿಂಗ್​ ಹೇಳಿದ್ದಾರೆ.

ಈ ದಂಪತಿ ಮದುವೆಯಾಗಿ ಎರಡು ವರ್ಷಗಳಾಗಿದ್ದು ಐದು ತಿಂಗಳ ಪುಟ್ಟ ಮಗುವೂ ಇದೆ. ಆರೋಪಿ ಪ್ರೇಮಶ್ರೀ ಕಾಲುಗಳಿಗೂ ಸುಟ್ಟ ಗಾಯಗಳಾವೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಎಫ್​ಐಆರ್​ ದಾಖಲಾಗಿದೆ.